ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ ಬಿಡುಗಡೆಗೆ ಕ್ಯಾ. ಕಾರ್ಣಿಕ್ ಆಗ್ರಹ

Spread the love

ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ ಬಿಡುಗಡೆಗೆ ಕ್ಯಾ. ಕಾರ್ಣಿಕ್ ಆಗ್ರಹ

ಮಂಗಳೂರು: ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ ಬಿಡುಗಡೆ ಹಾಗೂ ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮಕ್ಕೆ ಕೈಗೊಳ್ಳುವಂತೆ ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.

ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ ತನ್ನ ಮನೆಯ ಆವರಣದಲ್ಲಿ ವಾಹನ ತೊಳೆಯುತ್ತಿರುವ ಸಂದರ್ಭದಲ್ಲಿ ಮಾಸ್ಕ್ ಧರಿಸಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಅವರನ್ನು ಸಾರ್ವಜನಿಕವಾಗಿ ಹಿಂಸಿಸಿ ‘ಕೋಳ ಹಾಗೂ ಚೈನ್’ ಮೂಲಕ ಬಂಧಿಸಿ ಪೊಲೀಸ್ ಸ್ಟೇಷನಿನಲ್ಲಿರಿಸಿದ ಅಮಾನುಷ ವರ್ತನೆಯನ್ನು ಅತ್ಯಂತ ಕಟು ಶಬ್ದಗಳಿಂದ ಖಂಡಿಸುತ್ತೇನೆ.

ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯಾದ್ಯಂತ ಅತ್ಯಂತ ಶ್ಲಾಘನೆಗೆ ಪಾತ್ರರಾದ ಪೊಲೀಸ್ ಇಲಾಖೆ ಇಂತಹ ಕೆಲವೇ ಕೆಲವು ಬೇಜವಾಬ್ದಾರಿ ಪೊಲೀಸ್ ಸಿಬ್ಬಂದಿಗಳಿಂದ ಆಪಾದನೆಗೆ ಒಳಗಾಗುತ್ತಿರುವುದು ವಿಷಾದನೀಯ, ಯಾವ ನಾಗರಿಕರೊಂದಿಗೆ ಪೊಲೀಸ್ ಸಿಬ್ಬಂದಿಗಳ ಈ ರೀತಿಯ ವರ್ತನೆ ಸಮರ್ಥನೀಯವಲ್ಲ.

ಸಚಿನ್ ಸಾವಂತ್ ಅರೆ ಮಿಲಿಟರಿ ಪಡೆಗೆ ಸೇರಿದ ಸೈನಿಕನೆಂದು ತಿಳಿದ ನಂತರವೂ ಮತ್ತು ಮಾಸ್ಕ್ ಧರಿಸದೆ ಇರುವ ಒಂದೇ ಒಂದು ಕಾರಣಕ್ಕಾಗಿ ಈ ರೀತಿ ಕಾನೂನನ್ನು ಕೈಗೆತ್ತಿಕೊಂಡು ಒಬ್ಬ ನಿರಪರಾಧಿಯನ್ನು ಅತ್ಯಂತ ಅಮಾನುಷವಾಗಿ ಹಿಂಸಿಸಿರುವುದು ದೇಶದ ಕಾನೂನಿಗೆ, ಸಮವಸ್ತ್ರ ಧರಿಸಿದ ಸೈನಿಕರಿಗೆ ಹಾಗೂ ರಾಜ್ಯದ ಪೊಲೀಸ್ ಇಲಾಖೆಗೆ ಒಂದು ಕಪ್ಪುಚುಕ್ಕೆ.

ಕೂಡಲೇ ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ ಅವರನ್ನು ಗೌರವದಿಂದ ಬಿಡುಗಡೆ ಮಾಡಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಗಳ ಮೇಲೆ ತನಿಖೆ ನಡೆಸಿ ಶಿಸ್ತಿನ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಸೈನಿಕ ಹಾಗೂ ಮಾಜಿ ಸೈನಿಕರ ಪರವಾಗಿ ಮುಖ್ಯಮಂತ್ರಿಗಳನ್ನು ಮತ್ತು  ಗೃಹಮಂತ್ರಿಗಳನ್ನು ವಿನಂತಿಸುತ್ತೇನೆ ಹಾಗೂ ಇನ್ನು ಮುಂದೆ ಈ ರೀತಿಯ ಘಟನೆಗಳು ರಾಜ್ಯದಲ್ಲಿ ನಡೆಯದಂತೆ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.


Spread the love