ಅಲ್ಪಸಂಖ್ಯಾತರು ಸೌಲಭ್ಯ ಪಡೆಯಲು ವಿಳಂಭ ಮಾಡಬಾರದು: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಸರ್ಕಾರವು ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಪಡೆಯುವಲ್ಲಿ ವಿಳಂಭ ಮಾಡಬಾರದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.
ಅವರು ಬಲ್ಮಠ ಶಾಂತಿ ಕೆಥೋಡ್ರಲ್ ನಲ್ಲಿ ದ.ಕ.ಜಿಲ್ಲಾ ಅಲ್ಪಸಂಖ್ಯಾತರಿಗಾಗಿ ಸರ್ಕಾರಿ ಯೋಜನೆ ಹಾಗೂ ಸೌಲಭ್ಯಗಳ ಕುರಿತಾದ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರ ಅಲ್ಪಸಂಖ್ಯಾತರಿಗಾಗಿ ವಿವಿಧ ಸೇವಾ ಸೌಭ್ಯಗಳನ್ನು ಜಾರಿಗೆ ತಂದಿದೆ. ಅಧಿಕಾರಿಗಳು ಈ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವಲ್ಲಿ ವಿಳಂಭ ಮಾಡಬಾರದು ಎಂದು ಹೇಳಿದ ಅವರು ಸರ್ಕಾರ ಕೊಡಮಾಡಿದ ಈ ಯೋಜನೆಗಳನ್ನು ಪಡೆದು ಜೀವನವನ್ನು ಹದಗೊಳಿಸಿಕೊಳ್ಳಬೇಕು ಎಂದರು.
ಶಾಸಕ ಜೆ.ಆರ್.ಲೋಬೊ ಅವರು ಸರ್ಕಾರ ನೀಡಿರುವ ವಿವಿಧ ಸೌಲಭ್ಯಗಳ ಕುರಿತು ವಿವರಿಸಿ ಜನರು ಈ ಸೌಲಭ್ಯಗಳನ್ನು ತಮಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದರು.
ಸಭೆಯಲ್ಲಿ ಧರ್ಮಗುರುಗಳಾದ ರಾಬಿನ್ಸನ್ ಬರ್ನಾಬಸ್, ರೆ.ಅಬ್ನೆಸ್ ಜತನ್ನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮೂಡ ಸದಸ್ಯರಾದ ವಸಂತ್ ಬರ್ನಾಡ್, ಸ್ಥಳೀಯ ಮಂಗಳೂರು ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ನವೀನ್ ಡಿ ಸೋಜ, ಮಂಗಳೂರು ನಗರ ಬ್ಲಾಕ್ ಅಧ್ಯಕ್ಷೆ ಶಶಿಕಲಾ, ಪದ್ಮನಾಭ, ಶಾಂತಿ ಅಮ್ಮಣ್ಣ ಉಪಸ್ಥಿತರಿದ್ದರು.
ಸೌಲಭ್ಯಗಳ ಕುರಿತು ಮಹ್ಮದ್ ಫರೂಕ್ ಮಾಹಿತಿ ನೀಡಿದರು.
ಜನರಿಗೆ ವಿರುದ್ಧವಾದ ನಿರ್ಣಯ ತೆಗೆದುಕೊಳ್ಳಬೇಡಿ: ಶಾಸಕ ಜೆ.ಆರ್. ಲೋಬೊ
ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು ಕುಲಶೇಖರದಿಂದ ಬೈತುರ್ಲಿಯವರೆಗೆ ಹೆದ್ದಾರಿಯ ಬಗ್ಗೆ ಸ್ಥಳೀಯರು ಆಕ್ಷೇಪಗಳ ಬಗ್ಗೆ ಸ್ಥಳ ಪರಿಶೀಲಿಸಿದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಗ್ಗೆ ಹೆದ್ದಾರಿಯ ಕುರಿತು ಸ್ಥಳೀಯ ಜನರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಜೆ.ಆರ್.ಲೋಬೊ ಅವರು ಖುದ್ದು ಸ್ಥಳ ವೀಕ್ಷಣೆ ಮಾಡಿದರು.
ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಶಾಸಕರು ರಸ್ತೆ ಅಲ್ಮೈನ್ ಮೆಂಟ್ ಬಗ್ಗೆ ಸ್ಥಳೀಯರು ವ್ಯಕ್ತಪಡಿಸಿದ ಆಕ್ಷೇಪಗಳ ಬಗ್ಗೆ ವಿವರಿಸಿದರು.
ಈ ಎಲ್ಲಾ ಆಕ್ಷೇಪಗಳನ್ನು ಪರಿಶೀಲಿಸಿ ಜನರಿಗೆ ವಿರುದ್ಧವಾಗಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.
ಹೆದ್ದಾರಿ ಅಧಿಕಾರಿಗಳು ಶಾಸಕರಿಗೆ ವಿವರ ನೀಡಿ ತಾವು ಜನರಿಗೆ ವಿರುದ್ದವಾಗಿ ಯಾವುದೇ ನಿರ್ಧಾರ ತೆಗೆದುದುಕೊಳ್ಳುವುದಿಲ್ಲ ಎಂದು ತಿಳಿಸಿದರು.