ಆಂಜೆಲೊರ್ ಗಾರ್ಡಿಯನ್ ಏಂಜೆಲ್ ಚರ್ಚ್‍ನ್ ವಾರ್ಷಿಕ ಮಹೋತ್ಸವ

Spread the love

ಆಂಜೆಲೊರ್ ಗಾರ್ಡಿಯನ್ ಏಂಜೆಲ್ ಚರ್ಚ್‍ನ್ ವಾರ್ಷಿಕ ಮಹೋತ್ಸವ

ಮಂಗಳೂರು: ನಾಗುರಿ, ಆಂಜೆಲೊರ್ ಗಾರ್ಡಿಯನ್ ಏಂಜೆಲ್ ಚರ್ಚ್‍ನ್ ವಾರ್ಷಿಕ ಮಹೋತ್ಸವವು ಅಕ್ಟೋಬರ್ 2 ರಂದು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು.

ಬಲಿಪೂಜೆ ಅರ್ಪಿಸುವ ಮುನ್ನ ಚರ್ಚ್ ಧರ್ಮಗುರುಗಳಾದ ವಂ. ವಿಲಿಯಂ ಮಿನೆಜಸ್‍ರವರು ವಾರ್ಷಿಕ ಮಹೋತ್ಸವಕ್ಕೆ ಆರ್ಥಿಕ ಸಹಾಯ ನೀಡಿದ ಎಲ್ಲ ಭಕ್ತಾದಿಗಳಿಗೆ ಗೌರವದ ಮೊಂಬತ್ತಿ ನೀಡಿ ಹರಸಿದರು.

ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷರು ಅ. ವಂ. ಡಾ. ಅಲೋಶಿಯಸ್ ಡಿಸೋಜ ಇವರು ಸಂಭ್ರಮದ ಬಲಿಪೂಜೆ ಅರ್ಪಿಸಿದರು. ಹಾಗೂ ಪುತ್ತೂರು ಫಿಲೋಮಿನ ಕಾಲೇಜಿನ ಪ್ರಾದ್ಯಾಪಕರಾದ ವಂ ಡಾ ಆಂಟನಿ ಪ್ರಕಾಶ್ ಮೊಂತೇರೊ ರವರು ಪ್ರವಚನ ನೀಡಿದರು.

ಮಂಗಳೂರು ನಗರದ ಮತ್ತು ಆಸುಪಾಸಿನ ಸುಮಾರು 25 ಧರ್ಮಗುರುಗಳು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಜನರನ್ನು ಆಶೀರ್ವದಿಸಿದರು. ವಂ. ವಿಲಿಯಂ ಮಿನೆಜಸ್‍ರವರು ಸಂಭ್ರಮಕ್ಕೆ ಸಹಕರಿಸಿದ ಎಲ್ಲರನ್ನು ವಂದಿಸಿದರು. ಆಂಜೆಲೊರ್ ಯುವ ಸಂಚಲನದ ವಿವಿಧ ಮನೋರಂಜನಾ ಸ್ಟಾಲ್‍ಗಳು ಕಾರ್ಯಕ್ರಮದ ವಿಶೇಷವಾಗಿತ್ತು.


Spread the love