ಆನೆಗುಡ್ಡೆ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರ ಚಿನ್ನಾಭರಣ ಕಳವು – ಇಬ್ಬರ ಬಂಧನ
ಕುಂದಾಪುರ: ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಾಗ ಬ್ಯಾಗಿನಿಂದ ಚಿನ್ನಾಭರಣ ಕಳ್ಳತನ ಮಾಡಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹುಬ್ಬಳ್ಳಿಯ ಬೀಬಿಜಾನ್ ಶೇಖ್ (58) ಮತ್ತು ಪಾರವ್ವ (54) ಎಂದು ಗುರುತಿಸಲಾಗಿದೆ.
2023 ರ ಡಿಸೆಂಬರ್ 27 ರಂದ ಲೋಕೇಶ್ ಮಂಜುನಾಥ ಇವರ ಮಾವನಾದ ನಾರಾಯಣರವರು ಮದುವೆಯ ಪ್ರಯುಕ್ತ ಸುಮಾರು 51.900 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಹಾಗೂ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ಖರೀದಿ ಮಾಡಿದ್ದು, ಸದ್ರಿ ಚಿನ್ನಾಭರಣಗಳನ್ನು ಪರ್ಸಿನಲ್ಲಿ ತುಂಬಿಸಿ ಪತ್ನಿಯ ವ್ಯಾನಿಟಿ ಬ್ಯಾಗಿನಲ್ಲಿಟ್ಟು ಬೆಳಗ್ಗೆ ಸುಮಾರು 11:30 ಗಂಟೆಗೆ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಹೋಗಿದ್ದು 12:00 ಗಂಟೆ ವೇಳೆಗೆ ದೇವಸ್ಥಾನದ ಹೊರಗಡೆ ಬಂದು ನೋಡಲಾಗಿ ವ್ಯಾನಿಟಿ ಬ್ಯಾಗ್ ಜಿಪ್ ತೆರೆದಿದ್ದು, ಬ್ಯಾಗಿನಲ್ಲಿದ್ದ ಚಿನ್ನ ಇಟ್ಟಿದ್ದ ಪರ್ಸ್ ಇಲ್ಲದೇ ಇದ್ದು ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳವಾದ ಚಿನ್ನಾಭರಣಗಳ ಮೊತ್ತ ಸುಮಾರು 3,75,000/- ರೂಪಾಯಿಗಳಾಗಿತ್ತು
ಆರೋಪಿಗಳನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದ್ದು, ಬಂಧಿತರಿಂದ ಕಳವು ಮಾಡಿದ 51.900 ಗ್ರಾಂ ತೂಕದ 3,50,000/- ಮೌಲ್ಯದ ಚಿನ್ನದ ಕರಿಮಣಿ ಸರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಯು ಬಿ ನಂದಕುಮಾರ್, ಪಿ.ಎಸ್.ಐ ವಿನಯ ಕೊರ್ಲಹಳ್ಳಿ, ಪಿ.ಎಸ್.ಐ ಪ್ರಸಾದ ಕುಮಾರ್ ಕೆ ಹಾಗೂ ಸಿಬ್ಬಂದಿಯವರಾದ ಸಂತೋಷ ಕುಮಾರ್, ಶ್ರೀಧರ್, ರಾಮ, ಪದ್ಮಾವತಿ, ಮೋನಿಕಾರವರನ್ನೊಳಗೊಂಡ ತನಿಖಾ ತಂಡವು ಬಂಧಿಸಿದ್ದು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ವಹಿಸಿರುತ್ತದೆ.