ಆರ್.ಎಸ್.ಎಸ್ ನಿಜವಾದ ಹಿಂದೂ ಧರ್ಮದ ಶತ್ರು -ಮಹೇಂದ್ರ ಕುಮಾರ್
ಮಂಗಳೂರು:- ನಮ್ಮ ದೇಹ ಛಿದ್ರವಾದರೂ ದೇಶ ಛಿದ್ರವಾಗಲು ಬಿಡುವುದಿಲ್ಲ ಎಂದು ಹೋರಾಡುವ ಸಂಘಟನೆಗೆ ದೇಶದ್ರೋಹಿ ಎಂದು ಹೇಳುತ್ತಾರೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಯಾವುದೇ ಪಾತ್ರವಹಿಸಿದ ಸಂಘಟನೆಗಳು ತಮಗೆ ತಾವೆ ದೇಶ ಪ್ರೇಮಿ ಸಂಘಟನೆ ಎಂಬ ಹಣೆಪಟ್ಟಿ ಇಟ್ಟು ಕೊಂಡಿದೆ. ಯಾವುದೇ ಸಂದರ್ಭದಲ್ಲಿ ಸವಾಲುಗಳನ್ನು ಸ್ವೀಕರಿಸಿ ದೇಶ ಉಳಿಸಲು ಪಣತೊಟ್ಟ ಸಂಘಟನೆ ಡಿ. ವೈ. ಎಫ್. ಐ. ಇದು ಚರಿತ್ರೆಯಿಂದ ತಿಳಿಯುತ್ತದೆ ಎಂದು ಭಾರತ ಯುವಜನ ಫೆಡರೇಶನ್ (ಡಿ. ವೈ. ಎಫ್. ಐ) ನ ರಾಜ್ಯಾಧ್ಯಕ್ಷರು ಮುನೀರ್ ಕಾಟಿಪಳ್ಳ ಹೇಳಿದರು.
ಉದ್ಯೋಗ ಸೃಷ್ಟಿಸಿ, ನಿರುದ್ಯೋಗ ರಕ್ಷಿಸಿ, ಜೀವನ ಭದ್ರತೆಯ ಉದ್ಯೋಗ, ಘನತೆಯ ಬದುಕಿಗಾಗಿ ಭಾರತ ಯುವಜನ ಫೆಡರೇಶನ್ (ಡಿ.ವೈ.ಎಫ್.ಐ. ) ನ 12 ಮಂಗಳೂರು ನಗರ ಸಮ್ಮೇಳನ ಇಲ್ಲಿನ ಪುರಭವನದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಮಾತಾನಾಡಿದ ಇವರು ನಾವು ವ್ಯಕ್ತಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಪ್ರಜಾಪ್ರಭುತ್ವವಾಗಿ ಸಂಘಟನೆ ನಡೆಯುತ್ತದೆ. ತುಳು ನಾಡು ಕೋಮುವಾದದ ಪ್ರಯೋಗ ಶಾಲೆಯಾಗಿದೆ. ಈ ಸಂದರ್ಭದಲ್ಲಿ ದ್ವೇಷ ಎಂದರೆ ದೇಶ ದ್ವೇಷ ಎಂದರೆ ಧರ್ಮ ಎಂದು ತಿಳಿದ ಯುವಜನರಿಗೆ ಪ್ರಸ್ತುತತೆಯ ನೈಜ್ಯ ವಿಚಾರ ತಿಳಿಸಿ ನಿರುದ್ಯೋಗದ ವಿರುದ್ಧ, ಕೋಮುವಾದದ ವಿರುದ್ಧ ಹೋರಾಡಲು ಸಂಘಟಿತರಾಗಬೇಕಿದೆ ಎಂದು ತಿಳಿಸಿದರು.
ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ಮಾತಾನಾಡಿ, ಆರ್. ಎಸ್. ಎಸ್. ನಿಜವಾದ ಹಿಂದೂ ಧರ್ಮದ ಶತ್ರು. ಇದರ ಬಗ್ಗೆ ಯುವಜನರು ತಿಳಿಯಬೇಕು. ಆರ್ಥಿಕತೆ ಅಧಃಪತನ ಹೊಂದುತ್ತಿದೆ. ಸಂವಿಧಾನ ನಿಷ್ಕ್ರಿಯಗೊಳಿಸಿ, ಪ್ರಜಾಪ್ರಭುತ್ವವನ್ನು ನಾಶ ಮಾಡಿ ನಮ್ಮನ್ನು ಹಳೆಯ ಕಾಲಕ್ಕೆ ಕೊಂಡೊಯ್ಯುವ ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ. ಪುಲ್ವಾಮ, ವಾಯುದಾಳಿ ಎಂಬುದನ್ನು ಕ್ರಿಯೆಟ್ ಮಾಡಿ ನಮ್ಮನ್ನು ನೈಜ್ಯ ವಿಚಾರ ಮರೆತು ಭಾವನಾತ್ಮಕಗೊಳಿಸಲಾಗುತ್ತಿದೆ. ದೇಶ ಭಕ್ತಿ ಹೇಳುವ ಇವರು ದ್ವೇಷ ರಾಜಕಾರಣ ನಡೆಸಿ ಹಿಂದೂ ಮುಸ್ಲಿಮರ ನಡುವೆ ಗೋಡೆ ಕಟ್ಟು ತ್ತಿದ್ದಾರೆ. ಅದನ್ನು ನಾವು ಒಡೆಯಬೇಕು ಎಂದು ಹೇಳಿದರು.
ನಮ್ಮನ್ನು ಗುಲಾಮರನ್ನಾಗಿಸಿ ಆಡಳಿತ ನಡೆಸಲಾಗುತ್ತಿದೆ. ನಮ್ಮನ್ನು ಶೋಷಣೆಗೆ ಒಳರಡಿಸಿವವರನ್ನು ವಿರೋಧಿಸುವ ನನ್ನ ನಿಮ್ಮಂತವರನ್ನು ವಿಲನ್ ಮಾಡುತ್ತಾರೆ. ಶೋಷಣೆ ಮಾಡುವವರು ಹಿರೋ ಆಗುತ್ತಾರೆ. ಧರ್ಮದ ಹೆಸರಿನಲ್ಲಿ ಭಾವನಾತ್ಮಕಗೊಳಿಸಿ ನಮ್ಮ ತಲೆ ಮೇಲೆ ಕಾಲಿಡುವ ಆಡಳಿತವನ್ನೆ ಜನರು ಒಪ್ಪುತ್ತಾರೆ. ದೇಶ ಕಾಪಾಡಲು ಇನ್ನೊಂದು ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಡಿ. ವೈ. ಎಫ್. ಐ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾಧ್ಯಕ್ಷರು ಬಿ. ಕೆ. ಇಮ್ತಿಯಾಜ್, ಉಳ್ಳಾಲ ವಲಯದ ಜೀವನ್ ರಾಜ್ ಕುತ್ತಾರ್, ಜಿಲ್ಲಾ ಸಮಿತಿ ಸದಸ್ಯ ಮನೋಜ್ ವಾಮಂಜೂರು, ಆಶಾ ಬೋಳೂರು, ಮಾಧುರಿ ಬೋಳಾರ್, ಶ್ರೀ ನಾಥ್ ಕಾಟಿಪಳ್ಳ, ಎ. ಬಿ. ನೌಶಾದ್ ಉಪಸ್ಥಿತರಿದ್ದರು. ಮಂಗಳೂರು ನಗರ ಅಧ್ಯಕ್ಷ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಧುರಿ ಬೋಳಾರ್ ಸ್ವಾಗತಿಸಿದರು. ಚರಣ್ ಶೆಟ್ಟಿ ಪಂಜಿಮೊಗರುಉಪಸ್ಥಿತರಿದ್ದರು ಧನ್ಯವಾದ ಸಲ್ಲಿಸಿದರು. ಶ್ರೀ ನಾಥ್ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು.