ಆರ್ ಎಸ್ ಎಸ್, ಬಿಜೆಪಿಯ ಕಾರ್ಯಕರ್ತರನ್ನು ಉಗ್ರಗಾಮಿ ಎಂದ ಸಿಎಂಗೆ ಸಂಘಪರಿವಾರವೇ ಉತ್ತರ ಕೊಡಲಿದೆ- ಡಿ ವೇದವ್ಯಾಸ ಕಾಮತ್

Spread the love

ಆರ್ ಎಸ್ ಎಸ್, ಬಿಜೆಪಿಯ ಕಾರ್ಯಕರ್ತರನ್ನು ಉಗ್ರಗಾಮಿ ಎಂದ ಸಿಎಂಗೆ ಸಂಘಪರಿವಾರವೇ ಉತ್ತರ ಕೊಡಲಿದೆ- ಡಿ ವೇದವ್ಯಾಸ ಕಾಮತ್

ಕಾಂಗ್ರೆಸ್ಸಿನ ಕೊನೆಯ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗೆ ಇಳಿಯಲು ದಿನಗಣನೆ ಮಾಡುತ್ತಿರುವ ಸಿದ್ಧರಾಮಯ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರನ್ನು ಉಗ್ರಗಾಮಿಗಳು ಎಂದು ಕರೆದಿರುವುದು ಅವರು ಸೋಲಿನ ಭಯದಿಂದ ಕಂಗೆಟ್ಟಿರುವ ಮುನ್ಸೂಚನೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಕೊಟ್ಟು ಬಿಜೆಪಿಯ ಕೈಯಲ್ಲಿ ರಾಷ್ಟ್ರದ ಚುಕ್ಕಾಣಿ ನೀಡಿದ ಭಾರತೀಯರು ಬಿಜೆಪಿಯ ಮೇಲೆ ಇಟ್ಟ ವಿಶ್ವಾಸವನ್ನು ಕೂಡ ಸಿದ್ಧರಾಮಯ್ಯ ಈಗ ಲೇವಡಿ ಮಾಡಿದ್ದಾರೆ. ನಮ್ಮನ್ನು ಉಗ್ರಗಾಮಿ ಎಂದು ಕರೆದಿರುವ ಸಿದ್ಧರಾಮಯ್ಯನವರ ಕಾಂಗ್ರೆಸ್ಸನ್ನು ಜನ ಎಲ್ಲಿ ಇಟ್ಟಿದ್ದಾರೆ ಎನ್ನುವುದೇ ಉಗ್ರಗಾಮಿ ಯಾರು ಎಂದು ಜನರೇ ತೀರ್ಮಾನಿಸಿದಂತೆ ಆಗಿದೆ. ಆರ್ ಎಸ್ ಎಸ್ ಜಗತ್ತಿನ ಅತ್ಯಂತ ದೊಡ್ಡ ಸಂಘಟನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದರ ಶಿಸ್ತು, ಧ್ಯೇಯ ಮತ್ತು ಸಿದ್ಧಾಂತ ಅಖಂಡ ಭಾರತವನ್ನು ಕಟ್ಟುವುದು ಮಾತ್ರ ಎಂದು ವಿದೇಶಿ ಲೇಖಕರು ಕೂಡ ಒಪ್ಪಿದ್ದಾರೆ.

ಭವ್ಯ ಭಾರತದ 19 ರಾಜ್ಯಗಳಲ್ಲಿ ಜನರ ಮನ್ನಣೆಯನ್ನು ಪಡೆದು ಸಮೃದ್ಧ ಆಡಳಿತ ಮಾಡುತ್ತಿರುವ ಬಿಜೆಪಿ ಕರ್ನಾಟಕದಲ್ಲಿಯೂ ಅಧಿಕಾರಕ್ಕೆ ಬರಲಿದೆ ಎಂದು ಗುಪ್ತಚರ ವರದಿ ನೋಡಿ ಸಿದ್ಧರಾಮಯ್ಯನವರಿಗೆ ಏನೂ ಮಾಡಲು ತೋಚುತ್ತಿಲ್ಲ. ಒಂದು ಕಡೆ ನಿರಂತರ ಅಮಾಯಕ ಸಂಘಪರಿವಾರದ ಯುವಕರ ಕಗ್ಗೊಲೆ ಆಗುತ್ತಿದ್ದರೆ ಸುಮ್ಮನೆ ಕುಳಿತಿರುವ ಸಿದ್ಧರಾಮಯ್ಯ ಅಪವಾದ ತಪ್ಪಿಸಲು ಉಗ್ರಗಾಮಿ ಪಟ್ಟವನ್ನು ನಮಗೆ ಕಟ್ಟುತ್ತಿದ್ದಾರೆ.

ದೇಶದ ಚುಕ್ಕಾಣಿ ಹಿಡಿದು ಪ್ರಪಂಚದ ನಾಯಕರಾಗಿ ಸರ್ವಮಾನ್ಯತೆಯನ್ನು ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಸೇರಿಸಿಕೊಂಡು, ಜಾಗತಿಕ ಏಕೈಕ ಪ್ರಜಾಪ್ರಭುತ್ವ ರಾಷ್ಟ್ರದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಅನೇಕ ರಾಜ್ಯಗಳ ರಾಜ್ಯಪಾಲರು ಕೂಡ ಆರ್ ಎಸ್ ಎಸ್ ಹಿನ್ನಲೆಯಿಂದ ಬಂದವರು. ಅವರೆಲ್ಲರೂ ದೇಶದ ಖ್ಯಾತಿಯನ್ನು ಉನ್ನತಿಕರಿಸಲು ಶ್ರಮಿಸುತ್ತಿರುವಾಗ ಅವರೆಲ್ಲರನ್ನು ಉಗ್ರಗಾಮಿಗಳೆಂದು ಜರೆದಿರುವ ಸಿದ್ಧರಾಮಯ್ಯ ದೇಶಕ್ಕೆ ಮಾಡಿರುವ ಅವಮಾನ ಎಂದು ಪರಿಗಣಿಸಿ ಜನ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಇಡೀ ದೇಶಕ್ಕೆ ಹೊಸ ಸಂದೇಶ ಕೊಡಬೇಕು ಎಂದು ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.


Spread the love