ಆರ್ಸೆಟಿಗಳ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಕ್ಕೆ ಅಸೋಚಮ್ ರಾಷ್ಟ್ರೀಯ ಪುರಸ್ಕಾರ
ಉಜಿರೆ : ಅಸೋಚಮ್’ ಸಂಸ್ಥೆಯು ದೇಶದಉದ್ಯೋಗ ಸಂಸ್ಥೆಗಳ ಬಹು ಮುಖ್ಯವಾದ ರಾಷ್ಟ್ರಮಟ್ಟದ ಸಂಸ್ಥೆಯಾಗಿದ್ದು, ಸುಮಾರು 4.5 ಲಕ್ಷ ಸದಸ್ಯರನ್ನು ಹೊಂದಿರುವ 400 ಸಂಸ್ಥೆಗಳ ಒಕ್ಕೂಟವಾಗಿದೆ.ಈ ಸಂಸ್ಥೆಯು ಸ್ವಯಂಉದ್ಯೋಗದ ಬಲವರ್ಧನೆಗಾಗಿ “ಭಾರತದ ಕೌಶಲ್ಯಾಭಿವೃದ್ಧಿ ಅಡಿಯಲ್ಲಿ ಪುರಸ್ಕಾರಗಳನ್ನು ವೈಯಕ್ತಿಕ ಹಾಗೂ ಸಂಸ್ಥೆಗಳ ಸಾಧನೆಗಾಗಿ ನಿರೂಪಿಸಿದೆ.
‘ಅಸೋಚಮ್’ ಸಂಸ್ಥೆಯು ರಾಷ್ಟ್ರಮಟ್ಟದ ಆರ್ಸೆಟಿಗಳ ನಿಗಾ ಘಟಕವಾದ ಆರ್ಸೆಟಿಗಳರಾಷ್ಟ್ರೀಯ ಶ್ರೇಷ್ಠತಾ ಕೇಂದ್ರವನ್ನು 2016-17ನೇ ಸಾಲಿನ ಉತ್ತಮ ಸರ್ಕಾರೇತರ ಸಂಸ್ಥೆಯ ಶ್ರೇಣಿಯಲ್ಲಿ ಉದ್ಯಮ ಶೀಲತೆಯನ್ನು ಪ್ರೇರೇಪಿಸುವಲ್ಲಿ ಆರ್ಸೆಟಿಗಳ ಶ್ರೇಷ್ಠ ಸಾಧನೆಗಾಗಿ ಪುರಸ್ಕರಿಸಿದೆ. ಆರ್ಸೆಟಿ ಸಂಸ್ಥೆಗಳನ್ನು ಹುಟ್ಟು ಹಾಕುವಲ್ಲಿ ರೂಡ್ಸೆಟಿಗಳ ರಾಷ್ಟ್ರೀಯ ಅಕಾಡೆಮಿಯ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ.ವೀರೇಂದ್ರ ಹೆಗ್ಗಡೆರವರ ಕೊಡುಗೆ ಅಮೂಲ್ಯವಾದದ್ದು. 1982 ರಲ್ಲಿ ಧರ್ಮಸ್ಥಳದ ಉಜಿರೆಯಲ್ಲಿ ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಸ್ಥಾಪಿಸಿದ ರೂಡ್ಸೆಟ್ ಸಂಸ್ಥೆಯು ಸ್ವಯಂಉದ್ಯೋಗ ಸೃಷ್ಟಿಸುವಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸಿದ್ದು ಇಡೀ ದೇಶಕ್ಕೆ ಮಾದರಿಯಾಗಿದೆ. ಈವರೆಗೆ 586 ಸಂಸ್ಥೆಗಳನ್ನು ವಿವಿಧ ಬ್ಯಾಂಕುಗಳ ಮೂಲಕ ಹುಟ್ಟುಹಾಕಿಸುವಲ್ಲಿ ಯಶಸ್ವಿಯಾಗಿದೆ.
ಸಮಾರಂಭದಲ್ಲಿ ಪ್ರತಿಷ್ಠಿತ ಗಣ್ಯ ವ್ಯಕ್ತಿಗಳಾದ ಸಂದೀಪ್ ಜಜೋಡಿಯ, ಅಧ್ಯಕ್ಷರು, ಅಸೋಚಮ್ ಸಂಸ್ಥೆ, ಪ್ರೊ.ಎಸ್. ಪರಸುರಾಮನ್, ನಿರ್ದೇಶಕರು, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್, ಡಾ|| ಬಲವೀರ್ತೋಮರ್, ಕುಲಪತಿಗಳು, ನಿಮ್ಸ್ಯೂನಿರ್ವಸಿಟಿ, ಮನೀಷ್ಕುಮಾರ್, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯಕಾರ್ಯಕಾರಿ ಅಧಿಕಾರಿಗಳು, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಡಿ.ಎಸ್.ರಾವತ್, ಮಹಾ ಕಾರ್ಯದರ್ಶಿಗಳು, ಅಸೋಚಮ್ ಉಪಸ್ಥಿತರಿದ್ದರು.