ಆಳ್ವಾಸ್ ಕಾಲೇಜಿನ ಸಂಸ್ಕøತ ವಿಭಾಗದಿಂದ ‘ಸಂಸ್ಕøತಂ ಪರ್ವ 2019’
ಮೂಡಬಿದಿರೆ: ತಾಯಿಯು ಮಕ್ಕಳನ್ನು ಪೋಷಿಸುವಂತೆ ಸಂಸ್ಕøತ ಎಲ್ಲಾ ಭಾಷೆಯನ್ನು ಪೋಷಿಸುತ್ತದೆ. ಸಂಸ್ಕøತ ಭಾಷೆಯು ಯಾವ ಭಾಷೆಯನ್ನು ಕೂಡ ನಾಶ ಮಾಡುವುದಿಲ್ಲ ಎಂದು ಬೆಂಗಳೂರು ಪಿಇಎಸ್ ಯುನಿವರ್ಸಿಟಿಯ ಪ್ರಾಧ್ಯಪಕ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಹೇಳಿದರು.
ಆಳ್ವಾಸ್ ಕಾಲೇಜಿನ ಸಂಸ್ಕøತ ವಿಭಾಗದಿಂದ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವಿಂದು ಬಳಸುವ ಇಂಗ್ಲೀಷ್, ಕನ್ನಡ, ಹಿಂದಿ ಇನ್ನಿತರ ಭಾಷೆಗಳ ಮೂ¯ ಅರ್ಥವನ್ನು ತಿಳಿಯುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ. ಸಂಸ್ಕøತ ಭಾಷೆಯೊಂದೆ ಈ ಎಲ್ಲಾ ಭಾಷೆಗಳ ಮೂಲವಾಗಿದೆ ಎಂದರು.
ನಮ್ಮತನವನ್ನು ನಮ್ಮ ಸಂಸ್ಕøತಿಯನ್ನು ನಾವು ಎಲ್ಲಿ ಮರೆತಿದ್ದೇವೆ ಎಂಬುದನ್ನು ಕಂಡುಕೊಳ್ಳುವ ಕಾರ್ಯವಾಗಬೇಕಿದೆ. ನಮ್ಮ ಮೂಲ ಭಾಷೆ ಸಂಸ್ಕøತವನ್ನು ಮರೆತು ಅನ್ಯ ಭಾಷೆÉಯನ್ನು ಕಲಿಯಲು ಪ್ರಯತ್ನಿಸುತ್ತಿರುವುದನ್ನು ನೋಡಿದರೆ ಕಸಿವಿಸಿಯಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ನಾವಿಂದು ಆರ್ಯುವೇದ, ರಾಜ್ಯಶಾಸ್ತ್ರ, ವಿಜ್ಞಾನ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ ಆದರೆ ನಮಗೆ ಇದರ ಮೂಲ ಆಧಾರ ಸಂಸ್ಕøತ ಎಂಬುದು ತಿಳಿಯದೇ ಇರುವುದು ಬೇಸರದ ಸಂಗತಿ ಎಂದರು.
ಸಂಸ್ಕøತಭಾಷೆ ಕೆಲಜನಗಳಿಗೆ ಮಾತ್ರ ಸೀಮಿತವಾದ ಭಾಷೆ ಎಂಬ ತಪ್ಪು ಕಲ್ಪನೆ ಇದೆ. ಇಂತಹ ಭಾವನೆಯಿಂದ ಹೊರಬಂದು ಎಲ್ಲರು ಸಂಸ್ಕøತಭಾಷೆಯನ್ನು ಕಲಿತು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಕೆ.ಶ್ರೀಪತಿ ಭಟ್, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಆರ್ಯುವೇದಿಕ್ ಕಾಲೇಜಿನ ಪ್ರಾಂಶುಪಾಲೆ ಡಾ.ಜೆನಿಕಾ ಡಿಸೋಜಾ ಮತ್ತು ಸಂಸ್ಕøತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ್ ಭಟ್ ಗಾಳಿಮನೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಪೂಜಾ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ರಾಮಯಾಣ ಮಹಾಭಾರತ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಸಂಸ್ಕøತಪರ್ವದ ಅಂಗವಾಗಿ ವಿದ್ಯಾರ್ಥಿಗಳಿಗೆ ಕಿರುನಾಟಕ, ಕಂಠಪಾಠ, ಪಿಪಿಟಿ ಪ್ರಸಂಟೇಶನ್, ಪೋಸ್ಟರ್ ಮೇಕಿಂಗ್ ಸ್ವರ್ಧೆಗಳನ್ನು ಆಯೋಜಿಸಲಾಗಿತ್ತು.