ಆಳ್ವಾಸ್ ನ ಡಾ. ವಿಷ್ಣುಗೆ 2 ಬಂಗಾರದ ಪದಕ
ಮೂಡಬಿದಿರೆ: ಆಳ್ವಾಸ್ ಆಯುರ್ವೇದ ಕಾಲೇಜಿನ ಡಾ. ವಿಷ್ಣು ಆಯುರ್ವೇದ ಹಾಗೂ ವೈದ್ಯಕೀಯ ವಿಜ್ಞಾನ ಪದವಿ ವಿಭಾಗದಲ್ಲಿ ನಗದು ಬಹುಮಾನ ಸಹಿತ ಎರಡು ಚಿನ್ನದ ಪದಕವನ್ನು ತಮ್ಮದಾಗಿಸಿ ಕೊಂಡಿದ್ದಾರೆ.
ಮಾರ್ಚ್ 26, 2019ರಂದು ನಡೆಯಲಿರುವ ರಾಜೀವ್ಗಾಂಧಿ ವಿವಿ ಆಫ್ ಹೆಲ್ತ್ ಸೈನ್ಸಸ್(ಆರ್ಜಿಯುಎಚ್ಎಸ್)ನ 21ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಗೌರವಕ್ಕೆ ಅವರು ಪಾತ್ರರಾಗಲಿದ್ದಾರೆ.
ಡಾ. ವಿಷ್ಣು ಪ್ರಸ್ತುತ ಆಳ್ವಾಸ್ ವೈದ್ಯಕೀಯ ಕಾಲೇಜಿನ ಶಲ್ಯತಂತ್ರ (ಆಳ್ವಾಸ್ ಶಸ್ತ್ರಚಿಕಿತ್ಸಾ ವಿಭಾಗ) ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ಆರ್ಜಿಯುಎಚ್ಎಸ್ ಗೆ ದ್ವಿತೀಯ ರ್ಯಾಂಕ್ಅನ್ನು ಪಡೆದಿದ್ದಾರೆ. ಪ್ರಸ್ತುತ ಐಚ್ಛಿಕ ಬಿಎಎಮ್ಎಸ್ ನಲ್ಲಿಅತೀ ಹೆಚ್ಚು ಅಂಕ ಪಡೆದ ಪುರುಷ ವಿದ್ಯಾರ್ಥಿ ಎಂಬುದಕ್ಕೆ ಚಿನ್ನದ ಪದಕ, ಜತೆಗೆ ಅತೀ ಕನಿಷ್ಠ ಸಮಯದಲ್ಲಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾಗಿದ್ದಕ್ಕೆ ಮತ್ತೊಂದು ಚಿನ್ನದ ಪದಕವನ್ನು ಪ್ರಮಾಣೀಕರಿಸಲಾಗುತ್ತಿದೆ. ಬಿಎಎಮ್ಎಸ್ ನ `ಬಿಸಜ್ಯಕಲ್ಪನಾ’ ವಿಷಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದರಿಂದ ನಗದು ಬಹುಮಾನಕ್ಕು ಭಾಜನರಾಗಿದ್ದಾರೆ.
ಚಿನ್ನದ ಪದಕ ಹಾಗೂ ನಗದು ಬಹುಮಾನಕ್ಕೆ ಭಾಜನರಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಡಾ. ವಿಷ್ಣು “ನನ್ನ ಎಲ್ಲಾ ಸಾಧನೆಯ ಶ್ರೇಯಸ್ಸು ನನ್ನ ಶಿಕ್ಷಕರು ಹಾಗೂ ಪೋಷಕರಿಗೆ ಸಲ್ಲುತ್ತದೆ. ಈ ಸಂದರ್ಭದಲ್ಲಿ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರಿಗೆ ವಿಶೇಷ ಕೃತಜ್ಞತೆಯನ್ನು ತಿಳಿಸುತ್ತೇನೆ” ಎಂದರು.
ಡಾ. ವಿಷ್ಣುರ ಸಾಧನೆಗೆ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಡಾ. ಝೇóನಿಕಾ ಡಿ’ಸೋಜಾó ಹಾಗೂ ಶುಭಾಶಯ ಕೋರಿದ್ದಾರೆ.