ಆಳ್ವಾಸ್ ನಲ್ಲಿ ಐದು ದಿನಗಳ ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ

Spread the love

ಆಳ್ವಾಸ್ ನಲ್ಲಿ ಐದು ದಿನಗಳ ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಭಾಗ, ವಿಟಿಯು ಬೆಳಗಾವಿ ಮತ್ತು ಗೂಗಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜನವರಿ 21 ರಂದುತಾಂತ್ರಿಕ ಶಿಕ್ಷಕರಿಗೆ ಐದು ದಿನಗಳ ಆಂಡ್ರಾಯ್ಡ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು. ತರಬೇತುದಾರರಾಗಿ ಗೂಗಲ್ ಸಂಸ್ಥೆಯ ಸಿಮಿಆನಂದ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ ಶಿಕ್ಷಕನು ನಿತ್ಯವೂ ವಿದ್ಯಾರ್ಥಿಯಾಗಿರಬೇಕು. ಭವಿಷ್ಯದ ಸವಾಲುಗಳಿಗೆ ಇಂದೇ ಅಣಿಯಾಗಬೇಕು. ಭವಿಷ್ಯದಲ್ಲಿ ವರ್ತಮಾನದ ಜ್ಞಾನ ಶಿಕ್ಷಕನನ್ನುನೇಪಥ್ಯಕ್ಕೆ ಸರಿಸುತ್ತದೆ ಎಂದರು.

ವಿಭಾಗದ ಮುಖ್ಯಸ್ಥ ಪ್ರೊ ಜಯಂತ ರಾಥೋಡ್ ಸ್ವಾಗತಿಸಿದರು . ಡಾ ರೂಪಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ದಿವ್ಯ ರವಿ ನಿರೂಪಿಸಿ , ಪ್ರೊಸುದರ್ಶನ್ ವಂದಿಸಿದರು.

ಈ ಕಾರ್ಯಾಗಾರದಲ್ಲಿ 20 ಕ್ಕೂ ಅಧಿಕ ತಾಂತ್ರಿಕ ಕಾಲೇಜುಗಳ ಬೋಧಕರು ಭಾಗವಹಿಸುತ್ತಿದ್ದಾರೆ.


Spread the love