ಆಳ್ವಾಸ್‍ನಲ್ಲಿ ಅಲೇಥಿಯಾ ಯೂತ್ ಪಾರ್ಲಿಮೆಂಟ್

Spread the love

ಆಳ್ವಾಸ್‍ನಲ್ಲಿ ಅಲೇಥಿಯಾ ಯೂತ್ ಪಾರ್ಲಿಮೆಂಟ್

ಮೂಡಬಿದಿರೆ: “ಮತಚಲಾವಣೆ ನಮ್ಮಲ್ಲರಿಗೂ ಪ್ರಭುತ್ವ ಒದಗಿಸಿರುವ ಮಹತ್ವಪೂರ್ಣ ಹಕ್ಕು. ಅದನ್ನು ಸರಿಯಾದರೀತಿಯಲ್ಲಿಉಪಯೋಗಿಸುವುದು ನಮ್ಮ ಜವಬ್ದಾರಿ” ಎಂದು ಮೂಡಬಿದಿರೆಯ ತಹಶೀಲ್ದಾರ್ ಸುದರ್ಶನ್ ತಿಳಿಸಿದರು.

ಆಳ್ವಾಸ್ ಕಾಲೇಜಿನ ಹ್ಯೂಮ್ಯಾನಿಟೀಸ್ ಫೋóರಂ, ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್‍ಸಿಸಿ ನೌಕಾ ದಳದ ಸಂಯುಕ್ತಆಶ್ರಯದಲ್ಲಿಗುರುವಾರ ಹಮ್ಮಿಕೊಳ್ಳಲಾಗಿದ್ದ ಅಲೇಥಿಯಾಯೂತ್ ಪಾರ್ಲಿಮೆಂಟ್- 2019ನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ವೋಟ್ ದಿ ರೈಟ್’
“ಸ್ವಾತಂತ್ರ್ಯ ನಂತರದೇಶದ ಬೆಳವಣಿಗೆಗಾಗಿ ಸಂವಿಧಾನ, ಸಂಸತ್ತು ಹುಟ್ಟಿಕೊಂಡವು. ಅದರನ್ವಯ ಭೌಗೋಳಿಕ ವ್ಯಾಪ್ತಿ ಹಾಗೂ ಜನಸಂಖ್ಯೆಆಧಾರದಲ್ಲಿ ವಿವಿಧ ಕ್ಷೇತ್ರಗಳಾಗಿ ವಿಂಗಡಿಸಿ ಅಲ್ಲಿಚುನಾವಣೆ ನಡೆಸಲಾಗುತ್ತದೆ. ನಮ್ಮ ಪ್ರತಿನಿಧಿಯನ್ನುಆಯ್ಕೆ ಮಾಡುವ ಹಕ್ಕನ್ನು ನಮಗೆ ನೀಡಲಾಗಿದೆ. ಹಾಗಾಗಿ ನಾವು ಚುನಾವಣೆ ಸಂದರ್ಭದಲ್ಲಿಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಸೂಕ್ತ ವ್ಯಕ್ತಿಗೆ ಮತ ನೀಡುವುದು ಮುಖ್ಯ. ಇದು ನಮ್ಮದೇಶದ ಹಿತದೃಷ್ಟಿಯಿಂದಅಗತ್ಯ” ಎಂದುಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ “ಸಂಸತ್ತುಎಂಬುದು ಮಾನವನ ವಿಚಾರಧಾರೆಗಳಲ್ಲಿ ಒಡಮೂಡಿದಅತ್ಯುತ್ತಮ ಪರಿಕಲ್ಪನೆ. ಇದರ ಪ್ರಕಾರ ಭಾರತದಲ್ಲಿನ ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಅಡಿಯಲ್ಲಿಕಾರ್ಯನಿರ್ವಹಿಸುತ್ತಾನೆ. ಆದರೆ ಪ್ರಜೆಗಳ ಪ್ರತಿನಿಧಿಯಾಗಿ ಸಂಸತ್ತು ಪ್ರವೇಶಿಸುವ ಇಂದಿನ ನಾಯಕರುಅದನ್ನುತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ತಾವೇ ಸರ್ವೋಚ್ಛಎಂಬಂತೆ ವರ್ತಿಸುತ್ತಾರೆ” ಎಂದು ವಿಷಾದ ವ್ಯಕ್ತಪಡಿಸಿದರು.

“ಪ್ರತಿನಿಧಿ ಎಂದರೆ ನಮ್ಮನ್ನು ಆಳುವವನಲ್ಲ, ಇಲ್ಲವೇಒಂದು ಗುಂಪಿನ ಜನರ ನಾಯಕನೂಅಲ್ಲ. ಪ್ರತಿನಿಧಿ ಎಂದರೆ ಪ್ರತಿಯೊಬ್ಬ ಪ್ರಜೆಯಯೋಚನೆ, ಭಾವನೆಗಳ ಒಟ್ಟುರೂಪವಾಗಿಆಯ್ಕೆಗೊಂಡಾತ. ಜನರ ಮನೋಸ್ಥಿತಿಗೆ ಅನುಗುಣವಾಗಿಕಾರ್ಯ ಮಾಡುವಾತ” ಎಂದು ತಿಳಿಸಿದರು.

“ಒಂದು ಆಡಳಿತ ಪಕ್ಷಇದ್ದ ಮೇಲೆ, ಅದಕ್ಕೆ ಪ್ರತಿಯಾಗಿ ಪ್ರತಿಪಕ್ಷಇರುವುದು ಮುಖ್ಯ. ಪ್ರಶ್ನಿಸುವ ಒಂದು ಮನಸ್ಸುಇಲ್ಲದಿದ್ದರೆದೇಶದ ಸ್ಥಿತಿ ಡೋಲಾಯಮಾನವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಪಕ್ಷ ಪ್ರಾಮುಖ್ಯತೆ ಪಡೆಯುತ್ತದೆ. ಅಂದ ಮಾತ್ರ ಪ್ರಶ್ನಿಸುವ ಕೆಲಸ ಕೇವಲ ಪ್ರತಿಪಕ್ಷದ್ದಷ್ಟೇಅಲ್ಲ. ನಮ್ಮ ಪ್ರತಿನಿಧಿ ಪ್ರಮಾಣಿತರೀತಿಯಲ್ಲಿ ಕೆಲಸ ಮಾಡದಿದ್ದಲ್ಲಿ, ಅದನ್ನು ನಾವು ವಿರೋಧಿಸಬೇಕಾಗುತ್ತದೆ. ತನ್ಮೂಲಕದೇಶದ ಬೆಳವಣಿಗೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ನಮ್ಮಲ್ಲೆರ ಹೊಣೆಯಾಗಿದೆ” ಎಂದು ತಿಳಿಸಿದರು.

ವಿದ್ಯಾರ್ಥಿಗಳ ಪ್ರಚಲಿತ ವಿದ್ಯಮಾನಗಳ ಬಗೆಗಿನ ಅರಿವು ಹಾಗೂ ದೇಶದ ಆಡಳಿತದ ಕುರಿತಾಗಿಅವರಿಗಿರುವ ಕಾಳಜಿಯನ್ನು ತಿಳಿಯಲು ಯೂತ್ ಪಾರ್ಲಿಮೆಂಟ್‍ಅನ್ನುಆಯೋಜಿಸಲಾಗಿತ್ತು. ನಿಜ ಸಂಸತ್ತಿನಂತೆ ಸಭಾಪತಿ, ಜಂಟಿ ಕಾರ್ಯದರ್ಶಿ, ಪ್ರಧಾನ ಮಂತ್ರಿ, ಮಂತ್ರಿ ಮಂಡಲ ಹಾಗೂ ಪ್ರತಿಪಕ್ಷವನ್ನು ಪ್ರತಿನಿಧಿಸುವ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಂತೆ ಮೂರು ಸುತ್ತಿನಲ್ಲಿ ಸಂಸತ್ತಿನ ಕಲಾಪಗಳು ನಡೆದವು. ಮೊದಲನೆಯದು ಪ್ರಶ್ನಾವಳಿ ಸುತ್ತು, ನಂತರಕರಡು ಮಸೂದೆ ಮಂಡನೆ ಹಾಗೂ ಅದರ ಬಗೆಗಿನ ಚರ್ಚೆಕಲಾಪದ ಭಾಗವಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಕಾಲೇಜಿನ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಎಲ್ಲಿಯವರೆಗೆ ನಮ್ಮಲ್ಲಿ ಜ್ಞಾನದ ಅರಿವು ಮೂಡುವುದಿಲ್ಲವೋ, ಅಲ್ಲಿಯ ತನಕ ನಮ್ಮಿಂದ ಒಳ್ಳೆಯ ಕೆಲಸ ನೆರವೇರಲು ಸಾಧ್ಯವಿಲ್ಲ. ಇಂತಹ ವೇದಿಕೆಗಳು ನಮ್ಮಲ್ಲಿ ಒಳ್ಳೆಯ ವಾಕ್ಚಾತುರ್ಯ, ನಿರೂಪಣೆ, ಹಾಗೂ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಉಪಕಾರಿಯಾಗಿವೆ ಎಂದರು.

ಅಲೇಥಿಯಾಯೂತ್ ಪಾರ್ಲಿಮೆಂಟ್- 2019 ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಯೂತ್ ಪಾರ್ಲಿಮೆಂಟ್ ಕಾರ್ಯಕ್ರಮದಲ್ಲಿ ಕಲಾ ವಿಭಾಗದ ಡೀನ್ ಸಂಧ್ಯಾ. ಕೆ. ಎಸ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ ್ಥರಮೇಶ್. ಬಿ, ಕಾರ್ಯದರ್ಶಿ ಪವಿತ್ರ ತೇಜ್, ಸಹ ಕಾರ್ಯದರ್ಶಿ ಸ್ಪಂದನ್ ರೈ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿದ್ಯಾರ್ಥಿನಿ ಸುಮಯ್ಯ ನಿರೂಪಿಸಿದರು.


Spread the love