Spread the love
ಆಶಾ ಕಾರ್ಯಕರ್ತೆಗೆ ಕಿರುಕುಳ ನೀಡಿದ ಆರೋಪ – ಇಬ್ಬರ ಬಂಧನ
ಮಂಗಳೂರು: ಮಲ್ಲೂರಿನ ಬದ್ರಿಯಾ ನಗರದಲ್ಲಿ ಆಶಾ ಕಾರ್ಯಕರ್ತೆಗೆ ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಲ್ಲೂರಿನ ಬದ್ರಿಯಾ ನಗರ ಮೂಲದ ಇಸ್ಮಾಯಿಲ್ (45) ಮತ್ತು ಅಶ್ರಫ್ (32) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಏಪ್ರಿಲ್ 11 ರಂದು ಆಶಾ ಕಾರ್ಯಕರ್ತೆ ವಸಂತಿ ಕೋವಿಡ್ -19 ಕುರಿತು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಧಿಕೃತ ಕರ್ತವ್ಯದಲ್ಲಿದ್ದರು. ಈ ವೇಳೆ ಇಸ್ಮಾಯಿಲ್ ಮತ್ತು ಅಶ್ರಫ್ ವಸಂತಿಯನ್ನು ತನ್ನ ಕರ್ತವ್ಯ ನಿರ್ವಹಿಸದಂತೆ ತಡೆದು ಬೆದರಿಕೆ ಹಾಕಿದ್ದರು.
ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ.
Spread the love