ಆಹಾರ ವಿಜ್ಞಾನ: ಆಳ್ವಾಸ್ನಲ್ಲಿ ಅಂತಾರಾಷ್ಟ್ರೀಯ ವಿಚಾರಸಂಕಿರಣ
ಮೂಡುಬಿದಿರೆ: ಆಹಾರ ಮಾರುಕಟ್ಟೆಯ ಶೇ. 90ರಷ್ಟು ಭಾಗ ಯಾವುದೇ ನಿಯಂತ್ರಣಗಳನ್ನು ಪಾಲಿಸದೆ ಇರುವುದರಿಂದ ಭಾರತದಲ್ಲಿ ಕಾಲಂಶ ಜನ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ಭಾರತ ಮತ್ತು ಶ್ರೀಲಂಕಾದ ಗಾಮ್ಮ ಫಿಝ್ಝಾ ಕ್ರಾಫ್ಟ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ಮತ್ತು ನಿರ್ದೇಶಕ ಅಮರ್ ರಾಜ್ ಸಿಂಗ್ ಆಭಿಪ್ರಾಯಪಟ್ಟರು.
ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ನ ಆಳ್ವಾಸ್ ಕಾಲೇಜಿನ `ಆಹಾರ ವಿಜ್ಞಾನ, ಪೌಷ್ಟಿಕತೆ’ಯ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳ ಸಹಭಾಗಿತ್ವದಲ್ಲಿ ವಿದ್ಯಾಗಿರಿಯ ಡಾ.ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಏರ್ಪಡಿಸಲಾದ `ಆಹಾರ ಭದ್ರತೆ: ಕಾರ್ಯವಿಧಾನಗಳು, ಪೆÇೀಷಕಾಂಶಗಳು-ಅಗತ್ಯ, ಪ್ರಸ್ತುತತೆ, ಸವಾಲುಗಳು ಹಾಗೂ ಆಯಾಮಗಳು’ ಕುರಿತಾದ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ವಿಚಾರ ಸಂಕಿರಣದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಮಂಗಳೂರು ವಿ.ವಿ. ಯೋಜನಾ ನಿರ್ದೇಶಕ ಡಾ.ಕೆ. ಎಸ್. ಜಯಪ್ಪ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ನ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಉಪಸ್ಥಿತರಿದ್ದರು.
ವಿಚಾರಸಂಕಿರಣದ ಮುಖ್ಯ ಸಂಯೋಜಕಿ, ಅಳ್ವಾಸ್ ಆಹಾರ ವಿಜ್ಞಾನ ಸ್ನಾತಕೋತ್ತರ ವಿಭಾಗ ಮುಖ್ಯಸ್ಥೆ ಡಾ.ಅರ್ಚನಾ ಪ್ರಭಾತ್ ಸ್ವಾಗತಿಸಿದರು. ಆಶಿತಾ ಎಂ.ಡಿ. ವಂದಿಸಿದರು. ಸುಪ್ರಿಯಾ ನಿರೂಪಿಸಿದರು. ವಿವಿಧ ರಾಷ್ಟ್ರಗಳಿಂದ 700 ಮಂದಿ ಪ್ರತಿನಿ„ಗಳು ಭಾಗವಹಿಸಿದ್ದರು.