ಇಂದಿರಾ ಗಾಂಧಿಯವರು ಬಡ ಜನತೆಯ ಹೃದಯದಲ್ಲಿ ಸ್ಥಿರಸ್ಥಾಯಿಯಾಗಿದ್ದಾರೆ – ಜನಾರ್ದನ ತೋನ್ಸೆ

Spread the love

ಇಂದಿರಾ ಗಾಂಧಿಯವರು ಬಡ ಜನತೆಯ ಹೃದಯದಲ್ಲಿ ಸ್ಥಿರಸ್ಥಾಯಿಯಾಗಿದ್ದಾರೆ – ಜನಾರ್ದನ ತೋನ್ಸೆ

ಉಡುಪಿ: ಇಂದಿರಾ ಗಾಂಧಿಯವರು ತನ್ನ ಅಧಿಕಾರಾವಧಿಯಲ್ಲಿ ಮಾಡಿದ ಭೂ ಸುಧಾರಣೆ, ರಾಜಧನ ರದ್ದತಿ, ಜೀತ ವಿಮೋಚನೆ, ಬ್ಯಾಂಕ್ ರಾಷ್ಟ್ರೀಕರಣ ಮೊದಲಾದ ಜನಪರ ಕಾರ್ಯಕ್ರಮಗಳಿಂದಾಗಿ ಬಡ ಜನತೆಯ ಜೀವನಮಟ್ಟ ಸುಧಾರಣೆಗೊಂಡು ಅವರು ನೆಮ್ಮದಿಯ ಬದುಕು ಬದುಕುವಂತಾಗಿದೆ. ಹಾಗಾಗಿ ಇಂದು ಇಂದಿರಾ ಗಾಂಧಿಯವರು ಬಡ ಜನತೆಯ ಹೃದಯದಲ್ಲಿ ಸ್ಥಿರಸ್ಥಾಯಿಯಾಗಿದ್ದಾರೆ. ದೇಶಕ್ಕೆ ಇಂತಹ ಇನ್ನೊಂದು ಧೀಮಂತ ಪ್ರಧಾನಿ ಬರಲು ಸಾಧ್ಯವಿಲ್ಲ.

ಶ್ರೀಮತಿ ಇಂದಿರಾ ಗಾಂಧಿಯವರು 1971ರ ಪಾಕಿಸ್ಥಾನ ಯುದ್ಧದ ಸಂದರ್ಭದಲ್ಲಿ ತೋರಿದ ದಿಟ್ಟತನದಿಂದಾಗಿ ವಿರೋಧ ಪಕ್ಷದ ನಾಯಕರಿಂದಲೂ ಹೊಗಳಲ್ಪಟ್ಟ ಘಟನೆಯನ್ನು ನೆನಪಿಸಿ ಭವ್ಯ ಭಾರತದ ಸಮಗ್ರತೆಗೆ ಮತ್ತು ಏಕತೆಗಾಗಿ ತನ್ನ ಪ್ರಾಣವನ್ನೇ ಧಾರೆ ಎರೆದ ಧೀಮಂತ ಪ್ರಧಾನಿ ಇಂದಿರಾ ಗಾಂಧಿಯವರು. ಇಂದಿರಾ ಗಾಂಧಿಯವರು ತಂದ 20 ಅಂಶಗಳ ಜನಪರ ಕಾರ್ಯಗಳನ್ನು ಬಿಟ್ಟು ಯಾವುದೇ ಸರಕಾರ ಕಾರ್ಯಕ್ರಮ ರೂಪಿಸಲು ಸಾಧ್ಯವಿಲ್ಲ. ಯಾಕೆಂದರೆ ಆ ಕಾರ್ಯಕ್ರಮಗಳು ಜನತೆಯ ಜೀವನ ಮಟ್ಟ ಸುಧಾರಿಸುವ ದೂರಾಲೋಚನೆಯಿಂದ ರಚಿಸಲ್ಪಟ್ಟ ಕಾರ್ಯಕ್ರಮಗಳು. ಈ 35ನೇ ಪುಣ್ಯತಿಥಿಯಂದು ನಾವೆಲ್ಲಾ ಸೇರಿ ಅವರನ್ನು ನೆನೆಯುವುದು ಅವರಿಗೆ ನೀಡುವ ನಿಜವಾದ ಗೌರವ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಜಂಟಿಯಾಗಿ ಆಯೋಜಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 35ನೇ ಪುಣ್ಯತಿಥಿ ಆಚರಣೆಯ ಸಂದರ್ಭದಲ್ಲಿ ನುಡಿದರು.

ಹಿಂದುಳಿದ ವರ್ಗದವರಿಗೆ ಶ್ರೀ ನಾರಾಯಣ ಗುರುಗಳು ಧಾರ್ಮಿಕ ಸ್ವಾತಂತ್ರ್ಯವನ್ನು ತಂದುಕೊಟ್ಟರೆ ಶ್ರೀಮತಿ ಇಂದಿರಾ ಗಾಂಧಿಯವರು ಉಳುವವನೇ ಹೊಲದೊಡೆಯ ಕಾಯ್ದೆಯ ಮೂಲಕ ಆರ್ಥಿಕ ಸ್ವಾತಂತ್ರವನ್ನು ತಂದು ಕೊಟ್ಟರು. ಈ ಕಾಯಿದೆ ಕರ್ನಾಟಕದಲ್ಲಿ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಂಡು ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆಯನ್ನು ಕೊಟ್ಟಿದೆ. ತನ್ನ ಅಂಗರಕ್ಷಕರಿಂದಲೇ ತನಗೆ ಅಪಾಯ ಇದೆ ಎನ್ನುವ ಗುಪ್ತಚರ ವರದಿ ಗೊತ್ತಿದ್ದರೂ ಕೂಡಾ ತಾನು ಅಂಗರಕ್ಷಕರನ್ನು ಬದಲಾಯಿಸುವುದು ಈ ದೇಶದ ಸೌಹಾರ್ದತೆಗೆ ಕೊಡುವ ದೊಡ್ಡ ಪೆಟ್ಟಾಗುತ್ತದೆ ಎಂದು ಮನಗಂಡು ದೇಶದ ಸೌಹಾರ್ದತೆಗೆ ತನ್ನ ಪ್ರಾಣವನ್ನೇ ಬಲಿಕೊಟ್ಟ ಧೀಮಂತ ಮಹಿಳೆ ಇಂದಿರಾ ಗಾಂಧಿ ಎಂದು ಶ್ರೀ ಉದ್ಯಾವರ ನಾಗೇಶ್ ಕುಮಾರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಲೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಿಕಾ ಶೆಟ್ಟಿ, ಕಾಪು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರಭಾವತಿ ಸಾಲ್ಯಾನ್, ಕಾಂಗ್ರೆಸ್ ಮುಖಂಡರಾದ ಹಬೀಬ್ ಆಲಿ, ಜ್ಯೋತಿ ಹೆಬ್ಬಾರ್, ಲಕ್ಷ್ಮಿ ಭಟ್, ಜಯಶ್ರೀ ಶೇಟ್, ಜ್ಯೋತಿ ಮೆನನ್, ಆನಂದ ಕಿದಿಯೂರು, ವಿಠಲ್ ಕಾವ, ಪೃಥ್ವಿರಾಜ್ ಶೆಟ್ಟಿ, ಕುಶಲ್ ಶೆಟ್ಟಿ ಇಂದ್ರಾಳಿ, ಫೆರ್ನಾಂಡಿಸ್, ನಾಗರಾಜ್ ಗಾಣಿಗ, ಪ್ರಸಾದ್ ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಗೀತಾ ವಾಗ್ಲೆಯವರು ಸ್ವಾಗತಿಸಿ, ವಂದಿಸಿದರು.


Spread the love