ಉಜಿರೆ: ಉತ್ತಮ ಆರೋಗ್ಯ, ಸ್ವಾಸ್ಥ್ಯ ಜೀವನ – ಡಾ. ದುರ್ಗಾಪ್ರಸಾದ್ ಎಂ. ಆರ್

Spread the love

ಮಂಗಳೂರು: ‘ದೇಹ ಯಾವತ್ತಿಗೂ ರೋಗ ಮುಕ್ತವಾಗಿರಬೇಕು ಎಂದು ಬುದ್ಧ ತನ್ನ ಮಾತುಗಳಲ್ಲಿ ಹೇಳುವಂತೆ ನಮ್ಮ ದೇಹವನ್ನು ರೋಗ ರುಜಿನಗಳಿಂದ ದೂರವಿರಿಸಬೇಕು. ಆಗ ಮಾನಸಿಕ ಸ್ವಾಸ್ಥ್ಯವೂ ಸಾಧ್ಯ. ವಿಚಾರ ಸಂಕಿರಣಗಳಲ್ಲಿ ಈ ಬಗ್ಗೆ ಚಿಂತಿಸಬೇಕಾದ, ಚರ್ಚಿಸಬೇಕಾದ ಅಗತ್ಯವಿದೆ. ಸಾಮಾಜಿಕವಾಗಿ ಮೂಡುವ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕಲು ಇದು ಸಕಾಲ’ ಎಂದು ಮಂಗಳೂರಿನ ಆರ್.ಎಂ.ಓ ಲೇಡಿ ಗೋಶನ್ ಆಸ್ಪತ್ರೆಯ ಡಾ. ದುರ್ಗಾಪ್ರಸಾದ್ ಎಂ. ಆರ್ ಅಭಿಪ್ರಾಯ ಪಟ್ಟರು.

ಉಜಿರೆ ಎಸ್‍ಡಿಎಂ ನ್ಯಾಚುರೋಪತಿ ಕಾಲೇಜಿನ ಯೋಗ ಹಾಲ್‍ನಲ್ಲಿ  ಫೆ.5 ಮತ್ತು 6ರಂದು ಸಮಾಜ ಕಾರ್ಯ ವಿಭಾಗ ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ, ಧರ್ಮಸ್ಥಳ ಇವರ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ “ಸಂಭ್ರಮ” – 2016  ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ujire

ಆರೋಗ್ಯ ರಕ್ಷಣೆಗೆ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದ್ದು ಅದರ ಸದ್ಭಳಕೆಯ ಕಡೆಯ ಗಮನಹರಿಸಬೇಕಾದ ಅನಿವಾರ್ಯತೆಯಿದೆ ಮತ್ತು ಸರ್ಕಾರವು ಅದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಈ ಸಂದರ್ಭದಲ್ಲಿ ನಾವು ಈ ಬಗೆಗೆ ಯೋಚಿಸಬೇಕಾಗಿದ್ದು, ಇತ್ತೀಚಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳು, ಎನ್‍ಜಿಒಗಳು ಇದರಲ್ಲಿ ತೊಡಗಿಸಿಕೊಂಡಿರುವು ಶ್ಲಾಘನೀಯ.

ವಿಶ್ವ ಆರೋಗ್ಯ ಸಂಸ್ಥೆ ದೈಹಿಕ ಸ್ವಾಸ್ಥ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಕ್ಷೇತ್ರ ಕಾರ್ಯಕರ್ತರು ಸೇರಿ ಎಲ್ಲಾ ಹಂತಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. 2005ರಲ್ಲಿ ಆರಂಭವಾದ ಆರೋಗ್ಯ ರಕ್ಷಾ ಸಮಿತಿಯೂ ಜನಸ್ನೇಹಿಯಾಗಿದೆ ಎಂದರು.

ಕ್ರಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್.ಕೆ.ಡಿ.ಆರ್.ಡಿ.ಪಿ ಅಧ್ಯಕ್ಷ ಡಾ.ಗೋಪಾಲ್ ದಾಬಿಡೆ ಯುವ ಮನಸ್ಸುಗಳು ಉತ್ತಮ ಆರೋಗ್ಯದ ಬಗೆಗೆ ಹೆಚ್ಚಿನ ಗುರಿಗಳನ್ನು ಹೊಂದಿರಬೇಕು. ಆಗ ನಿರಂತರವಾಗಿ ಬದಲಾವಣೆ ಸಾಧ್ಯ. ತಂತ್ರಜ್ಞಾನದ ಜೊತೆಗೆ ಯೋಚನೆಗಳನ್ನು ಹೊಂದಿಸುವುದು ಈಗಿನ ಕಾಲಕ್ಕೆ ಉತ್ತಮ ಯೋಚನೆ. ಸುಮ್ಮನೆ ಒಪ್ಪಿಕೊಳ್ಳುವ ಅಭ್ಯಾಸ ಬಿಟ್ಟು ಚರ್ಚಿಸುವ ಅಭ್ಯಾಸ ಬೆಳೆಸಿಕೊಳ್ಳಿ ಎಂದರು.

ಓರಿಯೆಂಟೆಡ್ ಹೆಲ್ತ್ ಇನ್ಶೂರೆನ್ಸ್ ಕಂಪೆನಿಯ ಸುರೇಶ್ ಬಲರಾಮ, ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಎಂ.ವೈ ಮಂಜುಳಾ, ವಿದ್ಯಾರ್ಥಿ ಪ್ರತಿನಿಧಿ ಪ್ರದೀಪ್ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ  ಪ್ರೋ.ರವಿಶಂಕರ್ ಸ್ವಾಗತಿಸಿ, ವಿಭಾಗದ ಪ್ರಾಧ್ಯಾಪಕಿ ಧನೇಶ್ವರಿ ವಂದಿಸಿದರು. ದ್ವಿತೀಯ ಎಂ.ಎಸ್.ಡಬ್ಯೂ ವಿದ್ಯಾರ್ಥಿ ಸುದೀಶ್ ಮತ್ತು ಪ್ರಥಮ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ವಿದ್ಯಾಶಂಕರಿ ಕಾರ್ಯಕ್ರಮ ನಿರ್ವಹಿಸಿದರು.


Spread the love