ಉಡುಪಿ: ಉಡುಪಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಗ್ರಾಮ ಪಂಚಾಯತ್ ವ್ಯಾಪ್ತಿ ಹಾಗೂ ನಗರಸಭೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇವೆ.
ಮಲ್ಪೆ 2 (ನಗರಸಭೆ ಉಡುಪಿ- ವಾರ್ಡ್ ಮಲ್ಪೆ ಸೆಂಟ್ರಲ್), ಕುಂತಳ ನಗರ (ಗ್ರಾಮ ಮಣಿಪುರ), ಎಲ್ಲೂರು ಮಹಿಳಾ ಮಂಡಲ ಉಳ್ಳೂರು (ಗ್ರಾಮ ಎಲ್ಲೂರು), ಪಡುಬಿದ್ರೆ-1 (ಗ್ರಾಮ ನಡ್ಸಾಲು), ಆದರ್ಶನಗರೆ-2 (ನಗರಸಭೆ ಉಡುಪಿ-ವಾರ್ಡ್ ಮಣಿಪಾಲ/ಈಶ್ವರನಗರ) ಸಣ್ಣಕ್ಕಿಬೆಟ್ಟು (ನಗರಸಭೆ-ಉಡುಪಿ, ವಾರ್ಡ್ ಪರ್ಕಳ) ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 18 ರಿಂದ 35 ವರ್ಷದೊಳಗಿನ ಕನಿಷ್ಟ 4 ನೇ ತರಗತಿ ಮತ್ತು ಗರಿಷ್ಠ 9 ನೇ ತರಗತಿ ತೇರ್ಗಡೆಯಾಗಿರುವ ಸ್ಥಳೀಯ ಮಹಿಳಾ ಸಹಾಯಕಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಕಚೇರಿಯಲ್ಲಿರಿಸಿದ ಟೆಂಡರು ಪೆಟ್ಟಿಗೆಯಲ್ಲಿ ಅರ್ಜಿಗಳನ್ನು ಹಾಕಲು ಮಾರ್ಚ್ 3 (ಸಂಜೆ 5.30) ಕೊನೆಯ ದಿನಾಂಕ, ತೆರೆವಿರುವ ಅಂಗನವಾಡಿ ಕೇಂದ್ರಗಳ ಅಭ್ಯರ್ಥಿಗಳಿಗಿರಬೇಕಾದ ಅರ್ಹತೆ, ಅರ್ಜಿ ಸಲ್ಲಿಸುವ ನಮೂನೆ ಮತ್ತಿತರ ವಿವರಗಳನ್ನೊಳಗೊಂಡ ಪ್ರಕಟಣೆಯನ್ನು ಸಂಬಂಧ ಪಟ್ಟ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಪ್ರೈಮರಿ ಹೆಲ್ತ್ ಸೆಂಟರ್ಗಳಲ್ಲಿ, ಗ್ರಾಮ ಲೆಕ್ಕಿಗ ಕಚೇರಿಗಳಲ್ಲಿ ಪ್ರದರ್ಶಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉಡುಪಿ: ಅಂಗನವಾಡಿಯಲ್ಲಿ ಹುದ್ದೆ: ಅರ್ಜಿ ಆಹ್ವಾನ
Spread the love
Spread the love