Spread the love
ಉಡುಪಿ : ಕೊಲ್ಲೂರು ದೇವಸ್ಥಾನಕ್ಕೆ ಹಾಗೂ ಪಟ್ಟಣಕ್ಕೆ 48 ಕೋಟಿ ರೂ ಗಳ ವೆಚ್ಚದಲ್ಲಿ , ಶುಧ್ಧೀಕರಿಸಿದ ನೀರು ಸರಬರಾಜು ಕಾಮಗಾರಿಗೆ ಹಾಗೂ ಒಳಚರಂಡಿ ಮತ್ತು ಕೊಳಚೆ ನೀರು ಶುದ್ದೀಕರಣ ಘಟಕದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಇಂದು ಭೂಮಿ ಪೂಜೆ ನೆರವೇರಿಸಿದರು.
ಈ ಕಾಮಗಾರಿಯಿಂದ ಕೊಲ್ಲೂರು ಗ್ರಾಮಕ್ಕೆ ಪ್ರತಿದಿನ 2.5 ಲಕ್ಷ ಲೀ. ಶುದ್ದ ಕುಡಿಯುವ ನೀರು ನೀಡಲಾಗುವುದು ಎಂದ ಹೇಳಿದ ಸಚಿವರು, ಈ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಮುಖಾಂತರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಗೋಪಾಲ ಪೂಜಾರಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿ.ಪ್ರಸನ್ನ, ಗುತ್ತಿಗೆದಾರ ಕಾಪು ವಾಸುದೇವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Spread the love