Spread the love
ಉಡುಪಿ: ಪಡುಬಿದ್ರಿ ಠಾಣಾ ವ್ಯಾಪ್ತಿಯ ಎರ್ಮಾಳು ಬಡಾ ರಾಷ್ಟ್ರೀಯ ಹೆದ್ದಾತಿ 66ರ ಬುಧಿಯಾ ಪೆಟ್ರೋಲ್ ಪಂಪ್ ಎದುರಿನ ಮನೆಯೊಂದರ ಕಟ್ಟಿಗೆ ಸಂಗ್ರಹಣೆ ಮಾಡುವ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ ಮೌಲ್ಯದ ಸೊತ್ತು ಭಸ್ಮವಾರ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಹನೀಫ್ ಎಂಬರಿಗೆ ಸೇರಿದ ವಾಸದ ಮನೆಯ ಕೊಟ್ಟಿಗೆಯಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬೆಂಕಿಯ ಕಿಡಿಯೊಂದು ಹಾರಿದ ಪರಿಣಾಮ ಕೊಟ್ಟಿಗೆ ಉರಿದು ಸಂಪೂರ್ಣ ಭಸ್ಮವಾಗಿದೆ. ಕೊಟ್ಟಿಗೆಯಲ್ಲಿ ಲಕ್ಷಾಂತರ ಮೌಲ್ಯದ ಕಟ್ಟಿಗೆ ಇತ್ತು ಎಂದು ಮನೆಯ ಮಾಲೀಕ ಹನೀಫ್ ತಿಳಿಸಿದ್ದಾರೆ.
ಸ್ಥಳಿಯರು ಬೆಂಕಿ ನಂದಿಸಲು ಸಹಕಾರ ನೀಡಿದ್ದು, ನಂತರ ಉಡುಪಿ ಜಿಲ್ಲಾ ಅಗ್ನಿ ಶಮನದಳದ ವಾಹನ ಆಗಮಿಸಿ ಬೆಂಕಿ ನಂದಿಸುಲ್ಲಿ ಯಶಸ್ಸು ಕಂಡಿದೆ.
ಪಡುಬಿದ್ರಿ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
Spread the love