ಉಡುಪಿ: ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೇಂದ್ರದ ಯೋಜನೆಗಳನ್ನು ತನ್ನ ಯೋಜನೆಗಳೆಂದು ತಪ್ಪಿ ಮಾಹಿತಿ ನೀಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೈಂದೂರು ಶಿವಮೊಗ್ಗ ಸಂಸದ ಬಿ ಎಸ್ ಯಡ್ಯೂರಪ್ಪ ಹೇಳಿದ್ದಾರೆ.
ಅವರು ಮಂಗಳವಾರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಭಿವೃದ್ದಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು ಕೇಂದ್ರದ ಯೋಜನೆಗಳನ್ನು ತನ್ನ ಯೋಜನೆಗಳೆಂದು ಹೇಳಿಕೊಂಡು ಕಾಲ ಕಳೆಯುತ್ತಿದೆ. ರಾಜ್ಯ ಸರಕಾರ ಬಡವರಿಗೆ ನೀಡುತ್ತಿರುವ ಉಚಿತ ಅಕ್ಕಿ ಕಾರ್ಯಕ್ರಮಕ್ಕೆ 95% ಪಾಲು ಕೇಂದ್ರದಿಂದ ಬರುತ್ತಿದೆ. ರಾಜ್ಯಕ್ಕೆ 2024000 ಮೆಟ್ರಿಕ್ ಟನ್ ಅಕ್ಕಿ ಮತ್ತು ಗೋಧಿಯ ಅವಶ್ಯಕತೆಯಿಂದ್ದು ಇದರಲ್ಲಿ ಕೇಂದ್ರ ಸರಕಾರ 2,17,403 ಮೆಟ್ರಿಕ್ ಟನ್ ಒದಗಿಸುತ್ತಿದ್ದು ಉಳಿದ ಭಾಗವನ್ನು ರಾಜ್ಯ ಸರಕಾರ ಬೇರೆ ಕಡೆಯಿಂದ ಪೋರೈಕೆ ಮಾಡುತ್ತಿದೆ. ಕೇಂದ್ರ ಸರಕಾರವು 28 ರೂ ಗಳಿಗೆ ಅಕ್ಕಿಯನ್ನು ಖರೀದಿ ಮಾಡಿ 3 ರೂಗಳೀಗೆ ರಾಜ್ಯಕ್ಕೆ ನೀಡುತ್ತದೆ ಅಲ್ಲದೆ ಗೋದಿಯನ್ನ20 ರೂಗಳೀಗೆ ಖರೀದಿ ಮಾಡಿ 2 ರೂಗಳಿಗೆ ನೀಡುತ್ತಿದ್ದು ಕೇಂದ್ರಕ್ಕೆ ಪ್ರತಿ ಕೆಜಿ ಅಕ್ಕಿಗೆ 25 ರೂ ಹಾಗೂ ಗೋಧಿಗೆ 8 ರೂಪಾಯಿಗಳ ಹೊರೆ ಬೀಳುತ್ತದೆ ಆದರೆ ರಾಜ್ಯ ಸರಕಾರ ಮಾತ್ರ ಅದನ್ನು ತನ್ನ ಯೋಜನೆ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಗ್ರಾಮೀಣ ಅಭಿವೃದ್ದಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ನಮ್ಮ ಗ್ರಾಮ ನಮ್ಮ ರಸ್ತೆ ಕಾಮಗಾರಿ ಇನ್ನೂ ಕೂಡ ಆರಂಭವಾಗಿಲ್ಲ. ಕಳೆದ ವರ್ಷ ಮುಖ್ಯಮಂತ್ರಿಗಳೂ ವಿಧಾನಸಭೆಯಲ್ಲಿ 20 ಕಮ ಪ್ರತಿ ಕ್ಷೇತ್ರದಲ್ಲಿ ರಸ್ತೆಯನ್ನು ನಿರ್ಮಾಣಮಾಡುವುದಾಗಿ ಹೇಳದ್ದು ಕಳೆದ ವರ್ಷದ ಟೆಂಡರ್ ಪ್ರಕ್ರಿಯೆ ಈಗ ಆರಂಭವಾಗಿದೆ. ಪ್ರತಿ ಕ್ಷೇತ್ರ ತಮ್ಮ ಸರಕಾರ ಇರುವಾಗ ಕೆರೆ ಅಭಿವೃದ್ಧಿಗಾಗಿ 5 ಕೋಟಿ ಹಣ ನೀಡುತ್ತಿದ್ದು ಕಾಂಗ್ರೆಸ್ ಸರಕಾರ ಬಂದ ಬಳೀಕ ಕೆರೆ ಅಭಿವೃದ್ದಿ ನಿಗಮ ರಚಿಸುವುದಾಗಿ ಹೇಳಿದ್ದು ಈವರೆಗೆ ಅದರ ಕುರಿತು ಯಾವುದೇ ಕೂಡ ಕ್ರಮ ಆಗಿಲ್ಲ ಎಂದರು. ಎರಡು ವರ್ಷದ ಹಿಂದೆ ಕೃಷಿ ಬೆಲೆ ಆಯೋಗವನ್ನು ರಚಿಸಿದ್ದು ಆಯೋಗ ಇಂದಿನ ವರೆಗೆ ಸರಕಾರಕ್ಕೆ ತನ್ನ ವರದಿಯನ್ನು ಕೂಡ ಸಲ್ಲಿಸಿಲ್ಲ ಇದರಿಂದ ಈ ಸರಕಾರ ಸಂಪೂರ್ಣ ರೈತ ವಿರೋಧಿ ಸರಕಾರವಾಗಿದೆ ಎಂಧರು.
ಸದಾ ಹಿಂದುಳಿದ ವರ್ಗದವರ ಮುಖ್ಯಮಂತ್ರಿ ಎಂದು ಹೇಳಿಕೊಂಡು ಬರುವ ಮುಖ್ಯಮಂತ್ರಿಗಳು 2014-15 ರಲ್ಲಿ ಎಸ್ ಸಿ ಎಸ್ ಟಿ ಜನರಿಗೆ 15834 ಕೋಟಿ ಮೀಸಲಿಟ್ಟಿದ್ದು ಅದರಲ್ಲಿ ಕೇವಲ 10979 ಕೋಟ ಮಾತ್ರ ಖರ್ಚು ಮಾಡಿದ್ದಾರೆ ಹೀಗೆ ಸರಕಾರ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ವಿಫಲತೆಯನು ಕಂಡಿದೆ ಎಂದರು.
ರಾಹುಲ್ ಗಾಂಧಿ ತನ್ನ ಕೇಂದ್ರದ ಕಾಂಗ್ರೆಸ್ ನಾಯಕರು ರಾಜ್ಯಗಳಿಗೆ ತೆರಳಿ ಕೇಂದ್ರದ ವೈಫ್ಯಲತೆ ಕುರಿತು ಪತ್ರಿಕಾಗೋಷ್ಟಿ ನಡೆಸಲು ಸೂಚಿಸಿದ್ದಾರೆ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಟಿ ನಡೆಸುವ ವೇಳೆ ಯುಪಿಎ ಸರಕಾರದ ಹಗರಣಗಳ ಕುರಿತು ಕೂಡ ಪತ್ರಿಕಾಗೋಷ್ಟಿಯಲ್ಲಿ ಜನತೆ ಮಾಹಿತಿ ನೀಡಲಿ ಎಂದರು. ವಿನಾಕಾರಣ ಕೇಂದ್ರದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದರಲ್ಲಿ ಕಾಂಗ್ರೆಸ್ ಬಿದ್ದಿದ್ದು, ಯುಪಿಎ ಸರಕಾರದ ಭ್ರಷ್ಟಾಚಾರದ ಕೊಳೆಯನ್ನು ತೊಳೆಯುವ ಕೆಲಸವನ್ನು ನರೇಂದ್ರ ಮೋದಿ ಮಾಡಿದ್ದಾರೆ ಎಂದರು.
ಈಗಾಗಲೆ ಗ್ರಾಮಪಂಚಾಯತ್ ಚುನವಾಣೆಗೆ ಬಿಜೆಪಿ ಬೆಂಬಲಿತ ಕಾರ್ಯಕರ್ತರು ಸಂಪೂರ್ಣ ಸಜ್ಜಾಗಿದ್ದು ರಾಜ್ಯ ನಾಯಕರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಹೆಚ್ಚಿನ ಅಭ್ಯರ್ಥಿಗಳು ಗೆಲ್ಲುವಂತೆ ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಸೊಲನ್ನು ಕಾಣಲಿದೆ ಎಂದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರು, ನಗರ ಬಿಜೆಪಿ ಅಧ್ಯಕ್ಷ ರಾಘವೇಂದ್ರ ಕಿಣಿ, ಮಾಜಿ ಜಿಲ್ಲಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ವಸಂತ್ ವಿ ಸಾಲ್ಯಾನ್ ಉಪಸ್ಥಿತರಿದ್ದರು.