ಉಡುಪಿ: ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅವ್ನಿ ಗಣೇಶ್ ಹಾಗೂ ಪೂಜಾ

Spread the love

ಉಡುಪಿ: ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅವ್ನಿ ಗಣೇಶ್ ಹಾಗೂ ಪೂಜಾ

ಉಡುಪಿ: ಸಂತ ಸಿಸಿಲೀಸ್ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಅವ್ನಿ ಗಣೇಶ್ ಪ್ರೌಢ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು, ನೆಹರು ಕ್ರೀಡಾಂಗಣ ಕೋಲಾರದಲ್ಲಿ ನಡೆದ 2024-25ನೆ ಸಾಲಿನ17 ವಯೋಮಾನದ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ 100 ಮೀಟರ್ ಹರ್ಡಲ್ಸ್ ಪ್ರಥಮ, ಉದ್ದ ಜಿಗಿತ ದ್ವಿತೀಯ ಸ್ಥಾನ ಪಡೆದು ಲಕ್ನೋದಲ್ಲಿ ನಡೆಯುವ ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯನ್ನು ಪಡೆದಿರುತ್ತಾಳೆ.

ಇವಳು ಕಲ್ಮಾಡಿ ಶ್ರೀ ಗಣೇಶ್ ಕಲ್ಮಾಡಿ ಹಾಗೂ ರೇಖಾ ದಂಪತಿಯ ಪುತ್ರಿಯಾಗಿರುವ ಈಕೆ ಶಾಲಿನಿ ಶೆಟ್ಟಿ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾಳೆ.

ಅದೇ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪೂಜಾರವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು , ನೆಹರು ಕ್ರೀಡಾಂಗಣ ಶಿವಮೊಗ್ಗ2024-25ನೆ ಸಾಲಿನ14 ವಯೋಮಾನದ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ 100 ಮೀಟರ್ 200 ಮೀಟರ್ 400 ಮೀಟರ್ಗಳಲ್ಲಿ ಹೊಸ ರಾಜ್ಯದ ಕಲೆಯನ್ನು ರಚಿಸಿ ಕ್ರೀಡಾಕೂಟದ ವೈಯಕ್ತಿಕ ಚಾಂಪಿಯನ್ ಆಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯನ್ನು ಪಡೆದಿರುತ್ತಾಳೆ.

ಇವಳು ಸಂಪಿಗೆ ನಗರದ ಶೇಖರ್ ಉದ್ಯಾವರ ಹಾಗೂ ಸುಜಾತ ಎಸ್ ಕುಂದರ್ ದಂಪತಿಯ ಪುತ್ರಿಯಾಗಿರುವ ಈಕೆ ಶಾಲಿನಿ ಶೆಟ್ಟಿ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾಳೆ.


Spread the love