ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿಯಾಗಿ ಐವನ್ ಡಿಸೋಜಾಗೆ ಅವಕಾಶ ನೀಡಲು ಕ್ರೈಸ್ತ ಸಂಘಟನೆಗಳ ಆಗ್ರಹ

Spread the love

ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿಯಾಗಿ ಐವನ್ ಡಿಸೋಜಾಗೆ ಅವಕಾಶ ನೀಡಲು ಕ್ರೈಸ್ತ ಸಂಘಟನೆಗಳ ಆಗ್ರಹ

ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಕ್ರೈಸ್ತ ಸಮಾಜದ ನಾಯಕರಾಗಿರುವ ಐವನ್ ಡಿಸೋಜಾ ಅವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪಕ್ಷ ಚುನಾವಣೆಗೆ ಅವಕಾಶ ನೀಡಬೇಕು ಎಂದು ಉಡುಪಿ ಜಿಲ್ಲೆಯ ಕ್ರೈಸ್ತ ಸಂಘಟನೆಗಳು ಆಗ್ರಹಿಸಿವೆ.

ಈ ಕುರಿತು ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಂತರಾಷ್ಟ್ರೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟ ಇದರ ಉಡುಪಿ ಜಿಲ್ಲಾಧ್ಯಕ್ಷ ಡಾ|ನೆರಿ ಕರ್ನೆಲಿಯೋ ಮಾತನಾಡಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಬಹಳಷ್ಟು ನಿರೀಕ್ಷೆಯ ಚುನಾವಣೆ ಮುಂದಿನ ವರ್ಷ ನಡೆಯಲಿರುವುದರಿಂದ, ಉಡುಪಿ ಜಿಲ್ಲೆಯ ಸಮಸ್ತ ಕ್ರೈಸ್ತ ಸಮಾಜ ಬಾಂಧವರ ಪರವಾಗಿ ಒಮ್ಮತದ ಕ್ರೈಸ್ತ ನಾಯಕನನ್ನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸಲು ನಿರ್ಧರಿಸಿದ್ದೇವೆ.

ಕರ್ನಾಟಕದಲ್ಲಿ ಸುಮಾರು25 ರಿಂದ30 ಲಕ್ಷ ಕ್ರೈಸ್ತ ಸಮುದಾಯದ ಮತದಾರರಿದ್ದಾರೆ, ಮಾತ್ರವಲ್ಲದೆ ರಾಜ್ಯದ 27 ಜಿಲ್ಲೆಗಳಲ್ಲಿಯೂ ಕ್ರೈಸ್ತ ಸಮುದಾಯದ ಮತದಾರರುತಮ್ಮ ಹಕ್ಕನು ್ನಚಲಾಯಿಸುತ್ತಿದ್ದಾರೆ. ರಾಜ್ಯದ ಶೇಕಡಾ 4ರಷ್ಟು ಮತದಾರರಿರುವ ಕ್ರೈಸ್ತ ಸಮುದಾಯಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಕೇವಲ 2 ಸ್ಥಾನ ನೀಡಿದ್ದ ಮತ್ತು ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಕ್ರೈಸ್ತ ನಾಯಕರು ಇರುವುದರಿಂದ, ಲೋಕಸಭಾ ಚುನಾವಣೆಯಲ್ಲಿ, 2 ಸ್ಥಾನವನ್ನು ಕ್ರೈಸ್ತ ಸಮುದಾಯಕ್ಕೆ ಸ್ವರ್ಧಿಸಲು ಅವಕಾಶ ನೀಡಬೇಕೆಂದು, ಈ ಮೂಲಕ ನಾವು ಒತ್ತಾಯಿಸುತ್ತಿದ್ದೇವೆ.

ಕಳೆದ ಅನೇಕ ವರ್ಷಗಳಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕನಿಷ್ಠ ಲೋಕಸಭಾ ಸ್ಥಾನಗಳಲ್ಲಿ ಸ್ವರ್ಧಿಸಲು ಅವಕಾಶ ನೀಡಿದ್ದು, ಬೇರೆ ಯಾವುದೇ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಕ್ರೈಸ್ತರಿಗೆ ಅವಕಾಶಗಳನ್ನು ನೀಡಿಲ್ಲ. ಉಡುಪಿ ಲೋಕಸಭಾ ಕ್ಷೇತ್ರದಿಂದ ಈ ಹಿಂದೆ ಲೋಬೊ ಪ್ರಭು, ಆಸ್ಕರ್ ಫೆರ್ನಾಂಡಿಸ್, ಟಿ.ಎ. ಪೈ, ರಂಗನಾಥ ಶೆಣೈ, ಯು.ಎಸ್. ಮಲ್ಯ ಮುಂತಾದವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಲೋಕಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಕ್ರೈಸ್ತ ಸಮುದಾಯದ ರಾಜ್ಯ ನಾಯಕನಾಗಿರುವ, ಮಾಜಿ ಸರಕಾರಿ ಮುಖ್ಯ ಸಚೇತಕರಾಗಿರುವ ಹಾಗೂ ಪ್ರಸ್ತುತ ವಿಧಾನಪರಿಷತ್ತಿನ ಸದಸ್ಯರಾದ ಐವನ್ ಡಿ. ಸೋಜಾರವರಿಗೆ ಅವಕಾಶ ನೀಡಬೇಕೆಂದು ನಮ್ಮ ಬೇಡಿಕೆಯಾಗಿದೆ. ಅದೇ ರೀತಿ ಬೆಂಗಳೂರು ಸೆಂಟ್ರಲ್ನಲ್ಲಿಯೂ ಕ್ರೈಸ್ತ ಸಮುದಾಯದವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತಿದ್ದೇವೆ. ಲೋಕಸಭಾ ಕ್ಷೇತ್ರವು, ಉಡುಪಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ, ಚಿಕ್ಕಮಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮತವು ಗಣನೀಯವಾಗಿದೆ.

ಅಧಿಕಾರಕ್ಕಿಂತ ಅಭಿವೃದ್ಧಿ ಮುಖ್ಯ ಎಂಬ ನಿಟ್ಟಿನಲ್ಲಿ , ಸಿಕ್ಕಿದ ಅವಕಾಶವನ್ನು ಯಾರು ನಿರೀಕ್ಷಿಸದ ರೀತಿಯಲ್ಲಿ, ರಾಜ್ಯದಉದ್ದ ಅಗಲಕ್ಕೂ ಭೇಟಿ ನೀಡಿಜನರ ಕಷ್ಟಗಳನ್ನು ತಿಳಿದು, ಅಂತಹ ಕಷ್ಟಗಳಿಗೆ ಸ್ಪಂಧಿಸುತ್ತಿರುವ ಐವನ್ ಡಿಸೋಜರವರು, ಉಡುಪಿ ಚಿಕ್ಕಮಗಳೂರು ಸಂಸದರಾದರೇ, ಸಮಾಜದ ಎಲ್ಲಾ ಭಾಗದ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂಬುದು ಮಾತ್ರ ಸ್ಪಷ್ಟ. ವಿದ್ಯಾರ್ಥಿಜೀವನದಲ್ಲಿಯೇ, ನಾಯಕತ್ವದ ಗುಣಗಳನ್ನು ಹೊಂದಿದ್ದ, ಐವನ್ ಡಿಸೋಜರವರು ಹುಟ್ಟು ಹೋರಾಟವಾದಿ. ವಿದ್ಯಾರ್ಥಿ ನಾಯಕನಿಂದ ರಾಜ್ಯ ಕಾಂಗ್ರೆಸ್ನಲ್ಲಿ ಉನ್ನತ ಸ್ಥಾನಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದು ಮಾತ್ರವಲ್ಲದೇ, ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಟಿ.ವಿ ಮಾಧ್ಯಮಗಳಲ್ಲಿ ನಡೆಯುವ ರಾಜಕೀಯ ವಿಚಾರಗಳ ಚರ್ಚೆಗೆ ಭಾಗವಹಿಸುವ, ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಲ್ಲಿ ಐವನ್ ಕೂಡ ಒಬ್ಬರು.

ಹಿಂದಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಐವನ್ ಡಿ’ಸೋಜರವರ ಹೋರಾಟದ ಗುಣ, ನಾಯಕತ್ವ, ಜನರ ಕಷ್ಟಗಳಿಗೆ ಶೀಘ್ರ ರೀತಿಯಲ್ಲಿ ಸ್ಪಂದಿಸುವುದು ಮತ್ತು ಪಕ್ಷ ಸಂಘಟನೆ ಮತ್ತು ಇತರ ವಿಷಯಗಳನ್ನು ಅರಿತು, ವಿಧಾsನ ಪರಿಷತ್ ಸದಸ್ಯರಾಗಿ ಐವನ್ ಡಿ’ಸೋಜರವರನ್ನು ನೇಮಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಬಳಿಕ ಐವನ್ರವರ ಸಮಾಜಸೇವೆ ನಿಜಕ್ಕೂ ಮೆಚ್ಚುವಂತದ್ದು.

ಒಂದು ಬಡಕುಟುಂಬದಲ್ಲಿ ಜನಿಸಿದ್ದರಿಂದ, ಜನರ ಕಷ್ಟಗಳನ್ನು ಅರಿತಿದ್ದ ಇವರು, ಓರ್ವ ಕಾರ್ಮಿಕ ನಾಯಕ. ಅದರಲ್ಲಿಯೂ ರಿಕ್ಷಾಚಾಲಕರಿಗೆ ಯಾವ ರೀತಿಯ ಸಹಾಯ ಮಾಡಲು ಸದಾ ಸಿದ್ದ. ತನ್ನ ಶಾಸಕರ ನಿಧಿಯಲ್ಲಿ ಹಲವಾರು ರಿಕ್ಷಾ ತಂಗುದಾಣವನ್ನು ಇವರು ಮಾಡಿಸಿಕೊಟ್ಟಿದ್ದಾರೆ. ಕ್ರೈಸ್ತ ದೇವಾಲಯಗಳಿಗೆ ಸರಕಾರದಿಮದ ಗರಿಷ್ಠ ಅನುದಾನವನ್ನು ತಂದುಕೊಟ್ಟಿರುವ ಕೀರ್ತಿಇವರದು.

ಸ್ವಜಾತಿ ಪ್ರೇಮವನ್ನು ಈಗಿನ ಪರಿಸ್ಥಿತಿಯಲ್ಲಿ ಇಟ್ಟುಕೊಳ್ಳುತ್ತಿರುವ ಹಲವಾರು ಶಾಸಕರಿರುವಾಗ, ಇದಕ್ಕೆ ಸ್ಪಷ್ಟ ವಿರುದ್ಧ ಉದಾಹರಣೆ ಎಂದರೆ ಐವನ್. ಕೇವಲ ಕ್ರೈಸ್ತರಿಗೆ ಮಾತ್ರವಲ್ಲದೇ, ಸಮಾಜದ ಎಲ್ಲಾ ವರ್ಗದವರಿಗೂ ಸದಾ ತನ್ನ ಕೈಲಾದಷ್ಟು ಮತ್ತು ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ನಿಷ್ಠಯಿಂದ ನಿರ್ವಹಿಸುತ್ತಿರುವ ಶ್ರೀಯುತರು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕಷ್ಟದಲ್ಲಿರುವವರಿಗೆ, ಅನಾರೋಗ್ಯ ಪೀಡಿತರಿಗೆ ಮತ್ತು ಇತರರಿಗೆ 6 ಕೋಟಿ 36 ಲಕ್ಷರೂಪಾಯಿಯನ್ನು ತಲುಪಿಸಿದ ರೀತಿ ನಿಜಕ್ಕೂ ಶ್ಲಾಘನೀಯ.

24×7ರೀತಿಯಲ್ಲಿ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ರಾಜ್ಯದ ಮುಖ್ಯಮಂತ್ರಿ ಮತ್ತು ಹಲವಾರು ಸಚಿವರ ಅನುದಾನವನ್ನು ತಂದು ಉಭಯ ಜಿಲ್ಲೆಯಲ್ಲಿ ಮಾತ್ರವಲ್ಲದೇ, ಜನರ ಬೇಡಿಕೆ ಇಟ್ಟಿರುವ ಪ್ರದೇಶಗಳಿಗೆ ವಿಶೇಷ ಅಭಿವೃದ್ಧಿ ಮಾಡಿಕೊಟ್ಟಿದ್ದಾರೆ. ಸದ್ಯ ಐವನ್ರವರು ರಾಜ್ಯದ ಮುಂಚೂಣಿ ನಾಯಕರಾಗಿ ರೂಪುಗೊಳ್ಳುತ್ತಿದ್ದು, ತನ್ನ ಹುಟ್ಟೂರನ್ನು ಮರೆಯದೇ, ತನ್ನ ಹೂಟ್ಟೂರಿಗೆ 9 ಕೋಟಿ ಅನುದಾನತರುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿವೇಶನದಲ್ಲಿ 100ಪ್ರತಿ ಶತ ಭಾಗವಹಿಸುತ್ತಿರುವ ಐವನ್ ಡಿ’ಸೋಜರವರು, ಜನರ ಬೇಡಿಕೆಗಳಿಗೆ ಪರಿಹಾರ ಸಿಗುವರೆಗೆ ಕಲಾಪಗಳಲ್ಲಿ ಹೋರಾಟ ಮಾಡುತ್ತಾರೆ. ವಿಧಾನ ಪರಿಷತ್ ಕಲಾಪಗಳಲ್ಲಿ ವಿಶೇಷವಾಗಿ ಕರಾವಳಿ ಮತ್ತು ಮಲೆನಾಡಿನ ಜನರ ಕಷ್ಟಗಳನ್ನು ಮತ್ತು ಸಮಸ್ಯೆಗಳನ್ನು ಅರಿತುಕೊಂಡಿರುವ ಇವರು, ಅಡಿಕೆ ಬೆಳೆ ಮತ್ತು ಬೆಂಬಲ ಬೆಲೆ ಸಿಗುವುದಕ್ಕೆ, ಬೀಡಿಕಾರ್ಮಿಕರ ಸಮಸ್ಯೆಗಳಿಗೆ ಹಾಗೂ ಮೀನುಗಾರರ ಸಮಸ್ಯೆಗಳಿಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳಿ, ಆ ಪ್ರಶ್ನೆಗಳಿಗೆ ಸರಕಾರದಿಂದ ಸ್ಪಂದನೆ ಸಿಗುವವರೆಗೆ ಹೋರಾಟ ಮಾಡಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಪಕ್ಷ ಸಂಘಟನೆ ಮಾತ್ರವಲ್ಲದೆ ಜಾತಿ, ಮತ, ಬೇದ ಮಾಡದೆ, ಎಲ್ಲಾ ವರ್ಗದವರಿಗೂ ಸಹಾಯ ಹಸ್ತ ನೀಡಿರುವ ಮತ್ತು ಇಟ್ಟಿರುವ ಬೇಡಿಕೆಗಳಲ್ಲಿ ಹೆಚ್ಚಿನ ಬೇಡಿಕೆಗಳನ್ನು ಪೂರ್ಣಗೊಳಿಸಿರುವ ಐವನ್ ಡಿ’ಸೋಜರವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದರೆ, ನಮ್ಮ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ ಮಾತ್ರವಲ್ಲದೇ, ಬಡಜನರ ಮತ್ತು ಶೋಷಿತ ವರ್ಗದವರ ದ್ವನಿಯಾಗುತ್ತಾರೆ ಎಂಬುದಕ್ಕೆ ಎರಡು ಮಾತಿಲ್ಲ. ಎಲ್ಲಾ ವರ್ಗದಜನರ ಸಂಪರ್ಕಕ್ಕೂ ಸಿಗುವ, ಪಾದರಸದಂತೆ ಮಿಂಚಿನ ಸಂಚಾರ ಮಾಡಿ ಅಭಿವೃದ್ಧಿಪಡಿಸುವ ಐವನ್ ಡಿ’ಸೋಜರವರು ಕೇವಲ ಕ್ರೈಸ್ತಧರ್ಮದ ನಾಯಕ ಮಾತ್ರವಲ್ಲದೇ, ಸಮಾಜದ ಸರ್ವ ವರ್ಗದ ನಾಯಕರಾಗಿ ಬೆಳೆದು ನಿಂತಿದ್ದಾರೆ. ದೇವರ ಮೇಲೆ ವಿಶೇಷ ನಂಬಿಕೆ ಇಟ್ಟಿರುವ ಇವರು, ತನ್ನ ಧರ್ಮದ ದೇವಾಲಯಗಳಿಗೆ ಮಾತ್ರವಲ್ಲದೇ, ಇತರ ಧರ್ಮದ ದೇವಾಲಯಗಳಿಗೂ ಸರಕಾರದಿಂದ ಅನುದಾನ ತಂದುಕೊಡುವಲ್ಲಿ ವಿಶೇಷವಾಗಿ ಶ್ರಮಿಸಿದ್ದಾರೆ. ರಾಜ್ಯದ ಮತ್ತು ರಾಷ್ಟ್ರದ ಉನ್ನತ ನಾಯಕರ ಸಂಪರ್ಕ ಇರುವ ಈ ಕಾರ್ಮಿಕ ನಾಯಕ, ಓರ್ವ ಸಮರ್ಥ ನಾಯಕನಾಗಿದ್ದು, ಇವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಡಿದರೆ ಎಲ್ಲಾ ವರ್ಗದಜನರು, ಜಾತಿ ಮತ ಪಕ್ಷ ಬೇದವಿಲ್ಲದೇ, ಇವರನ್ನು ಬೆಂಬಲಿಸುತ್ತಾರೆ ಮತ್ತು ಸಂಸದರಾಗಿ ಆಯ್ಕೆಯಾಗುತ್ತಾರೆ ಎಂಬುದು ಖಚಿತ.

ರಾಜ್ಯ ಇತಿಹಾಸದಲ್ಲಿ ಎಲ್ಲಾ ಸಮುದಾಯದವರನ್ನು ಒಂದುಗೂಡಿಸಿ ದೀಪಾವಳಿ ರಂಜಾನ್ ಇಫ್ತಾರ್ ಕೂಟ ಮತ್ತು ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಕೀರ್ತಿ ಐವನ್ ಡಿ’ಸೋಜರವರದ್ದು.

ಆದುದರಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಐವನ್ ಡಿ’ಸೋಜರವರನ್ನು ಸರ್ವಸಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡುವಲ್ಲಿ ವಿಶೇಷ ಪ್ರಯತ್ನವನ್ನು ಮಾಡಬೇಕಾಗಿ ವಿನಂತಿ.

ಅಖಿಲ ಭಾರತಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ಗಾಂಧಿ, ಸೋನಿಯಗಾಂಧಿ, ಕೆ.ಪಿ.ಸಿ.ಸಿ. ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಹ ಸಚಿವರೂ, ಉಪ ಮುಖ್ಯಮಂತ್ರಿಯಾಗಿರುವ ಜಿ. ಪರಮೇಶ್ವರ್ರವರನ್ನು ಅತೀ ಶೀಘ್ರದಲ್ಲಿ , ಉಡುಪಿ ಜಿಲ್ಲೆಯ ಕ್ರೈಸ್ತ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸಲಿದೆ ಮತ್ತು ಇತರ ಉನ್ನತ ನಾಯಕರನ್ನು ಸಂಪರ್ಕಿಸುವ ಇರಾದೆಯನ್ನು ಉಡುಪಿ ಜಿಲ್ಲೆಯ ಕ್ರೈಸ್ತ ನಿಯೋಗ ಹೊಂದಿದೆ, ಮಾತ್ರವಲ್ಲದೇ ಸದಾ ಸ್ಪಂದಿಸುವ ಐವನ್ ಡಿ’ಸೋಜರವರಿಗೆ ಲೋಕಸಬಾ ಅಭ್ಯರ್ಥಿ ಮಾಡಬೇಕಾಗಿ ಈ ಮೂಲಕ ಉಡುಪಿ ಜಿಲ್ಲೆಯ ಕ್ರೈಸ್ತರ ಪರವಾಗಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯ ಕ್ರೈಸ್ತ ಒಕ್ಕೂಟ ಕರ್ನಾಟಕದ ರಾಜ್ಯಧ್ಯಕ್ಷ ಪ್ರಶಾಂತ್ ಜತ್ತನ್ನ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಇದರ ಪ್ರಧಾನ ಕಾರ್ಯದರ್ಶಿ ಚಾರ್ಲ್ಸ್ ಅಂಬ್ಲರ್, ಅಂತರಾಷ್ಟ್ರೀಯ ಕ್ರೈಸ್ತ ಸಂಘಗಳ ಒಕ್ಕೂಟ, ಉಡುಪಿ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಸ್ಟೀವನ್ ಕುಲಾಸೊ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿ ಮ್ಯಾಕ್ಷಿಮ್ ಡಿಸೋಜಾ, ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಭಾರತೀಯ ಕೆಥೊಲಿಕ್ ಯುವ ಸಂಚಾಲನ ಇದರ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಡಿಯೋನ್ ಡಿಸೋಜಾ, ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸ್ತ್ರೀ ಸಂಘಟನೆ ಇದರ ಅಧ್ಯಕ್ಷ ಜಾನೆಟ್ ಬಾರ್ಬೊಜಾ ಉಪಸ್ಥಿತರಿದ್ದರು.


Spread the love
1 Comment
Inline Feedbacks
View all comments
drona
6 years ago

Zamaanat zaft hone ka chances aur zyada ho sakti hai. You guys start controversy like this and make it very easy for the ruling party. Shobha is not a great politician but Ivan khada toh gayi kaangress bhaad mein.