ಉಡುಪಿ ಜಿಲ್ಲೆಯಲ್ಲಿ 20 ಲಕ್ಷ ಗಿಡ ನೆಡುವ ಗುರಿ- ಸಚಿವೆ ಡಾ.ಜಯಮಾಲಾ

Spread the love

ಉಡುಪಿ ಜಿಲ್ಲೆಯಲ್ಲಿ 20 ಲಕ್ಷ ಗಿಡ ನೆಡುವ ಗುರಿ- ಸಚಿವೆ ಡಾ.ಜಯಮಾಲಾ

ಉಡುಪಿ: ಪರಿಸರ ಸಂರಕ್ಷಣೆಯ ಉದ್ದೇಶದಿಂದ ಜಿಲ್ಲೆಯಲ್ಲಿ ಈ ವರ್ಷ 20 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮತ್ತು ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.

ಅವರು ಮಂಗಳವಾರ, ಬ್ರಹ್ಮಾವರ ಬಂಟರ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಉಡುಪಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ, ಸ್ವಚ್ಛಮೇವ ಜಯತೇ ಮತ್ತು ಜಲಾಮೃತ ಆಂದೋಲನ 2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಕುಲದ ಉಳಿವಿಗಾಗಿ, ಪ್ರಾಣಿ ಪಕ್ಷಿ ಸಂಕುಲ, ಜಲಚರಗಳ ಉಳಿವಿಗಾಗಿ ಪರಿಸರವನ್ನು ಸಂರಕ್ಷಿಸಬೇಕಿದೆ, ಪರಿಸರ ಸಂರ್ಷಕಣೆಯ ಕಾರ್ಯದಲ್ಲಿ ಪ್ರತಿಯೊಬ್ಬ ನಾಗರೀಕರು ಕೈ ಜೋಡಿಸಬೇಕಿದೆ, ಪರಿಸರ ಸಂರಕ್ಷಣೆ ಮತ್ತು ಜಲ ಸಂರಕ್ಷಣೆ ಉದ್ದಶದಿಂದ ರಾಜ್ಯದಲ್ಲಿ 20 ಸಾವಿರ ಚೆಕ್ ಡ್ಯಾಂ ಗಳ ನಿರ್ಮಣ, 14000 ಕೆರೆ, ಕಟ್ಟೆ , ಕಲ್ಯಾಣಿ, ಗೋ ಕಟ್ಟೆಗಳ ಪುನ:ಶ್ಚೇತನಕ್ಕೆ ಕ್ರಮ ಕೈಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಈ ವರ್ಷ 20 ಲಕ್ಷ ಗಿಡ ನಡೆವ ಉದ್ದೇಶ ಹೊಂದಿದ್ದು, ಜಿಲ್ಲೆಯಲ್ಲಿರುವ , ಬಾವಿ, ಕರೆ ಮುಂತಾದ ಎಲ್ಲಾ ಬಗೆಯ ಜಲ ಮೂಲಗಳ ಹೊಳು ತೆಗೆಯುವ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.

ಪ್ರಸ್ತುತ ಇರುವ ಜಲ ಮೂಲಗಳನ್ನು ಸಂರಕ್ಷಿಸಿಕೊಂಡು ನೀರಿನ ಸದ್ಬಳಕೆ ನಡೆಯಬೇಕು, ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಕಟ್ಟಡ ಹಾಗೂ ಮನೆಗಳಲ್ಲಿ ಸಹ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವುದರಿಂದ ನೀರಿನ ಕೊರತೆ ತಪ್ಪಿಸಬಹುದು , ಸಾರ್ವಜನಿಕರಲ್ಲಿ ಜಲ ಸಂರಕ್ಷಣೆ , ನೀರಿನ ಸದ್ಬಳಕೆ ಮತ್ತು ಹಸಿರೀಕರಣದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಡಾ. ಜಯಮಾಲಾ ಹೇಳಿದರು.

ಸ್ವಚ್ಚತೆ ಇದ್ದರೆ ರೋಗಗಳು ಬರುವುದಿಲ್ಲ, ಸ್ವಚ್ಚತೆಯಿಂದ ಆರೋಗ್ಯಯುತ ಸಮಾಣ ನಿರ್ಮಾಣ ಸಾಧ್ಯ ಆದ್ದರಿಂದ ಮನೆಯಿಂದ ಪ್ರಾರಂಭಗೊಂಡು ಎಲ್ಲೆಡೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಸಮರ್ಪಕ ರೀತಿಯಲ್ಲಿನ ತ್ಯಾಜ್ಯ ವಿಲೇವಾರಿ ಕಾರ್ಯಕ್ರಮದಲ್ಲಿ ಎಸ್.ಎಲ್.ಆರ್.ಎಂ ಘಟಕದ ಸದಸ್ಯರು ನಿರ್ವಸುತ್ತಿರುವ ಕಾರ್ಯವನ್ನು ಶ್ಲಾಘಿಸಿ, ಸ್ವಚ್ಛಮೇವ ಜಯತೇ ಮೂಲಮಂತ್ರದ ಮೂಲಕ ಜಿಲ್ಲೆಯನ್ನು ಸ್ವಚ್ಛವಾಗಿಡೋಣ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲೆಯಲ್ಲಿ ನೀರಿನ ಮಹತ್ವ ಕುರಿತು ಬಗ್ಗೆ ಅರಿವು ಮೂಡಿಸಿ, ಸಾರ್ವಜನಿಕರನ್ನು ಜಲಸಾಕ್ಷರರನ್ನಾಗಿ ಮಾಡುವ ಉದ್ದೇಶ ಹೊಂದಿದ್ದು, ಪ್ರತಿ ಗ್ರಾಮ ಪಂಚಾಯತ್ ನಲ್ಲಿ 500 ಗಿಡ ನೆಡಲಾಗುವುದು, ಸ್ವಚ್ಛತೆಯ ಕುರಿತಂತೆ ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಸ್ವಚ್ಛತಾ ರಥದ ಮೂಲಕ ಅರಿವು ಮೂಡಿಸುವ ಕಾರ್ಯ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಸ್ವಚ್ಛತೆಯ ಕುರಿತಂತೆ ಅರಿವು ಮೂಡಿಸಲು 150 ಮಂದಿ ಗೈಡ್ ಗಳಿಗೆ ತರಬೇತಿ ನೀಡಿದ್ದು, ಒಂದು ತಿಂಗಳ ಕಾಲ ನಿರಂತರವಾಗಿ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಗ್ರಾಮ ಸಭೆ ಸಹ ನಡೆಯಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಎಸ್.ಎಲ್.ಆರ್.ಎಂ ಘಟಕ ಪ್ರಾರಂಭವಾದಾಗಿನಿಂದ ಇದುವರೆವಿಗೆ, 2.5 ಸಾವಿರ ಟನ್ ಒಣ ತ್ಯಾಜ್ಯ ಮತ್ತು 3.5 ಸಾವಿರ ಟನ್ ಹಸಿ ತ್ಯಾಜ್ಯ ಸಂಗ್ರಹಸಿದ್ದು, ಗ್ರಾಮ ಪಂಚಾಯತ್ ಗಳಿಗೆ 35 ರಿಂದ 40 ಲಕ್ಷ ರೂ ಆದಾಯ ದೊರೆತಿದ್ದು, ರಾಜ್ಯಕ್ಕೆ ಇದು ಮಾದರಿ ಅನುಷ್ಠಾನ ಕಾರ್ಯಕ್ರಮವಾಗಿದೆ ಎಂದು ಶ್ರೀನಿವಾಸ ರಾವ್ ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸ್ವಚ್ಛತಾ ರಥಕ್ಕೆ ಚಾಲನೆ ನೀಡಿದರು, ಉಪಾಧ್ಯಕ್ಷೆ ಶೀಲಾ ಶೆಟ್ಟಿ ಹಸಿರೀಕರಣಕ್ಕೆ ಚಾಲನೆ ನೀಡಿದರು, ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಸ್ಪರ್ದಾ ವಿಜೇತರಿಗೆ ಬಹುಮಾತನ ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜನರ್ಧನ ತೋನ್ಸೆ, ಮೈರ್ಮಾಡಿ ಸುಧಾಕರ ಶೆಟ್ಟಿ, ಶಿಲ್ಪಾ ಸುವರ್ಣ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಚಂದ್ರ ನಾಯಕ್, ಉಪಾಧ್ಯಕ್ಷೆ ಗಾಯತ್ರಿ, ತಾಲೂಕು ಪಂಚಾಯತ್ ಸದಸ್ಯೆ ಗಾಯತ್ರಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ಜಿಲ್ಲಾ ಪೊಲೀಶ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜು , ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇರ್ಶ ರಾಯ್ಕರ್, ಸಿಡಿಪಿಓ ವೀಣಾ ಮತ್ತಿತರರು ಉಪಸ್ಥಿತರಿದ್ದರು.

ವಾರಂಬಳ್ಳಿ ಗ್ರಾ.ಪಂ. ಸದಸ್ಯ ರಾಜೇಶ್ ಶೆಟ್ಟಿ ಸ್ವಾಗತಿಸಿದರು, ಪಿಡಿಓ ಮಹೇಶ್ ನಿರೂಪಿಸಿದರು.


Spread the love