ಉಡುಪಿ ಜಿಲ್ಲೆಯಲ್ಲಿ ಪೊಲೀಸರಿಗೆ ಕೊರೊನ, ರಕ್ಷಣೆಗಾಗಿ ಫೇಸ್ ಶೀಲ್ಡ್ ಪಿ ಪಿ ಇ ಕಿಟ್ ನೀಡಿದ ಜಿ. ಶಂಕರ್

Spread the love

ಉಡುಪಿ ಜಿಲ್ಲೆಯಲ್ಲಿ ಪೊಲೀಸರಿಗೆ ಕೊರೊನ, ರಕ್ಷಣೆಗಾಗಿ ಫೇಸ್ ಶೀಲ್ಡ್ ಪಿ ಪಿ ಇ ಕಿಟ್ ನೀಡಿದ ಜಿ. ಶಂಕರ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನ ಹೆಚ್ಚುತ್ತಿದ್ದು, ಪ್ರಾರಂಭದ ದಿನದಿಂದಲೂ ಕೊರೊನ ಹರಡುವಿಕೆ ಹತ್ತಿಕುವಲ್ಲಿ ಉಡುಪಿ ಜಿಲ್ಲಾ ಪೊಲೀಸರ ಸ್ವ ರಕ್ಷಣೆಗಾಗಿ ಎನ್ 95 ಮಾಸ್ಕ್, ಟ್ರಿಪಲ್ ಲೇಯರ್ ಫೇಸ್ ಮಾಸ್ಕ್ ಗಳನ್ನು ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಜಿಲ್ಲಾ ಪೊಲೀಸ್ ಇಲಾಖೆಗೆ ವಿತರಿಸಿತ್ತು. ಕೊರೊನ ವಿರುದ್ದ ನಿರಂತರ ಹೋರಾಟ ನಡೆಸುತ್ತಿರುವ ಪೊಲೀಸರಿಗೂ ಕೊರೊನ ಬಾದಿಸಿರುವುದರಿಂದ , ಪೋಲೀಸರ ಸ್ವ ರಕ್ಷಣೆಗೆ ಬೇಕಾದ ಸುಮಾರು ಐದು ಲಕ್ಷ ಮೌಲ್ಯ ದ ಪಿಪಿಇ ಕಿಟ್ ಮತ್ತು ಫೇಸ್ ಶೀಲ್ಡ್ ಗಳನ್ನು ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಪರವಾಗಿ ದ ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಮತ್ತು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶಿವರಾಮ್ ಕೆ ಎಮ್ ರವರು ಜಿಲ್ಲಾ ಪೊಲೀಸ್ ಅಧೀಕ್ಷರಾದ ವಿಷ್ಣುವರ್ಧನ್ ರವರಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿ ಶಂಕರ್ ರವರು ಪ್ರಾರಂಭದಿಂದಲೂ ಅಪಾರ ಪ್ರಮಾಣದ ಆರೋಗ್ಯ ರಕ್ಷಣಾ ಪರಿಕರಗಳನ್ನು ನಮ್ಮ ಪೊಲೀಸ್ ಇಲಾಖೆಗೆ ನೀಡಿದ್ದು, ಅವರ ಮಾನವೀಯ ಸೇವೆಗೆ ತಮ್ಮ ಇಲಾಖೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ನಮ್ಮ ರಕ್ಷಣೆಗಾಗಿ ಜೀವದ ಹಂಗುತೊರೆದು ಹಗಲು ಇರುಳೆನ್ನದೆ ಹೋರಾಡುತ್ತಿರುವ ಪೊಲೀಸರಿಗೆ ಅವರ ಆರೋಗ್ಯ ರಕ್ಷಣೆಯೂ ಕೂಡ ಮುಖ್ಯ, ಆ ನಿಟ್ಟಿನಲ್ಲಿ ಎನ್ 95 ಮಾಸ್ಕ್, ಟ್ರಿಪಲ್ ಲೇಯರ್ ಫೇಸ್ ಮಾಸ್ಕ್ ನೀಡಿದ್ದು ಈಗ ಸಂಪೂರ್ಣ ಸುರಕ್ಷೆಗಾಗಿ ಪಿಪಿಇ ಕಿಟ್ ಮತ್ತು ಫೇಸ್ ಶೀಲ್ಡ್ ಗಳನ್ನು ನೀಡಲಾಗಿದೆ. ಅದನ್ನು ಉಪಯೋಗಿಸಿ ಕೊಂಡು ಸಮಾಜದ ಆರೋಗ್ಯ ಕಾಯುವ ಜೊತೆಗೆ ತಮ್ಮ ಆರೋಗ್ಯವನ್ನು ಪೊಲೀಸರು ಕಾಯ್ದುಕೊಳ್ಳುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ಅಡಿಷನಲ್ ಎಸ್ ಪಿ ಕುಮಾರ ಚಂದ್ರ, ಡಿವೈಸ್ಪಿ ಜಯಶಂಕರ್, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಸದಸ್ಯರಾದ ಶಂಕರ್ ಸಾಲ್ಯಾನ್, ಚಂದ್ರೇಶ್ ಪಿತ್ರೋಡಿ ಉಪಸ್ಥಿತರಿದ್ದರು.


Spread the love