ಉಡುಪಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಹಾವಳಿ; ಶನಿವಾರ 13 ಮಂದಿಗೆ ಪಾಸಿಟಿವ್ ದೃಢ

Spread the love

ಉಡುಪಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಹಾವಳಿ; ಶನಿವಾರ 13 ಮಂದಿಗೆ ಪಾಸಿಟಿವ್ ದೃಢ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೊರೋನಾ ಹಾವಳಿ ಮುಂದುವರೆದಿದ್ದು, ಶನಿವಾರ ಒಟ್ಟು 13 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1063 ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ 9 ಮಂದಿ ಪುರುಷರು, ಮೂರು ಮಕ್ಕಳು ಹಾಗೂ ಒಂದು ಮಹಿಳೆ ಸೇರಿದ್ದಾರೆ. ಸೋಂಕಿತರಲ್ಲಿ 10 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಓರ್ವ ವ್ಯಕ್ತಿ ಬೆಂಗಳೂರು, ಓರ್ವ ವ್ಯಕ್ತಿಗೆ ಪೇಶಂಟ್ ಸಂಖ್ಯೆ 5451 ಹಾಗೂ ಮತ್ತೋಬ್ಬರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಎಲ್ಲಾ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ


Spread the love