ಉಡುಪಿ ಜಿಲ್ಲೆಯಲ್ಲಿ ಮೇ5ರಿಂದ ಬೆ7 ರಿಂದ ರಾತ್ರಿ 7ರವರೆಗೆ ಲಾಕ್ ಡೌನ್ ಸಡಿಲಿಕೆ – ಜಿಲ್ಲಾಧಿಕಾರಿ ಜಿ ಜಗದೀಶ್
ಉಡುಪಿ : ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ವಿಧಿಸಲ್ಪಟ್ಟ ಲಾಕ್ಡೌನ್ ಮೇ 17ರವರೆಗೆ ಮುಂದುವರಿದಿದ್ದು ಉಡುಪಿ ಜಿಲ್ಲೆಯಲ್ಲಿ ಮೇ 5ರಿಂದ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಲಾಕ್ಡೌನ್ ಸಡಿಲಿಸಲಾಗಿದೆ. ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಲಾಕ್ಡೌನ್ ಮುಂದುವರಿಯಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಎಲ್ಲಾ ಅಂಗಡಿಗಳ ವ್ಯವಹಾರದ ಸಮಯವನ್ನು ಬೆಳಗ್ಗೆ 7.00 ರಿಂದ 11,00 ರವರೆಗಿದ್ದುದನ್ನು 2ಗಂಟೆ ಹೆಚ್ಚಿಸಿ 7.00 ರಿಂದ ಅಪರಾಹ್ನ 1.00 ರವರೆಗೆ ವಿಸ್ತರಿಸಲಾಗಿತ್ತು .ಅದೇ ರೀತಿ ಮದ್ಯ ಮಾರಾಟಕ್ಕೆ ಬೆಳಿಗ್ಗೆ 7.00 ರಿಂದ ಅಪರ ಕೈ 1.00 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿತ್ತು,
ಈ ಬಗ್ಗೆ ಈ ದಿನ ವಸ್ತುಸ್ಥಿತಿ ಪರಿಶೀಲಿಸಲಾಗಿ ಈ ಸಮಯದಲ್ಲಿ ಎಲ್ಲಾ ಅಂಗಡಿಗಳಲ್ಲಿ , ಜನ ದಟ್ಟಣೆ ಉಂಟಾಗುತ್ತಿದ್ದು ಇದರಿಂದ ಸಾಮಾಜಿಕ ಅಂತರ ಕಾಪಾಡಲು ತೊಂದರೆಯಾಗುವುದನ್ನು ಗಮನಿಸಲಾಗಿದೆ, ಈ ಹಿನ್ನಲೆಯಲ್ಲಿ ಅಂಗಡಿಗಳ ಸಮಯವನ್ನು ಸರಕಾರದ ಆದೇಶದಲ್ಲಿ ತಿಳಿಸಿರುವಂತೆ ವಿಸ್ತರಿಸುವುದು ಸಮಂಜಸವಾಗಿದೆ. ಆದುದರಿಂದ ಈ ಹಿಂದೆ ನಿಗದಿ ಪಡಿಸಿದ ಸಮಯವನ್ನು ಪರಿಷ್ಕರಿಸಿ ಸರ್ಕಾರದ ಆದೇಶದಂತೆ ಬೆಳಿಗ್ಗೆ 7.00 ರಿಂದ ಸಂಜೆ 7.00 ಗಂಟೆಯ ವರಗೆ ಮತ್ತು ಮದ್ಯ ಮಾರಾಟಕ್ಕೆ ಸರಕಾರದ ಆದೇಶದಂತ ಬೆಳಿಗ್ಗೆ 9.00 ರಿಂದ ಸಂಜೆ 7.00 ಗಂಟೆಯ ವರಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.