ಉಡುಪಿ: ಜಿಲ್ಲೆಯಲ್ಲಿ ಬೇಸಗೆಯ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪಶ್ಚಿಮ ವಾಹಿನಿ ಯೋಜನೆಗೆ ಡಿಪಿಆರ್ (ಡೈರೆಕ್ಟ್ ಪ್ರಾಜೆಕ್ಟ್ ರಿಪೋಟರ್್) ಮಾಡಿ ಸಕರ್ಾರದಿಂದ ಅನುಮತಿ ಪಡೆದು ಎರಡರಿಂದ ಮೂರು ಕೋಟಿ ರೂ. ವೆಚ್ಚದಲ್ಲಿ ಅದಕ್ಕಾಗಿ ಸವರ್ೆ ಮಾಡಲು ತೀಮರ್ಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ತಿಳಿಸಿದರು.
ಮಂಗಳವಾರ ಜಿಲ್ಲಾ ಪಂಚಾಯಿತಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ 21ನೇ ಜಿಲ್ಲಾ ಪಂಚಾಯಿತಿ ಸಮಾನ್ಯ ಸಭೆಯಲ್ಲಿ ಜಿಲ್ಲೆಯ ನೀರಿನ ಸಮಸ್ಯೆಬಗ್ಗೆ ನಡೆದ ಸಭೆಯ ವೇಳೆ ತಿಳಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಮಾತನಾಡಿದ, ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, 146 ಗ್ರಾಮ ಪಂಚಾಯಿತಿಗಳ ಪೈಕಿ 65 ಗ್ರಾಪಂಗಳಲ್ಲಿ ಟ್ಯಾಂಕರ್ನಲ್ಲಿ ಕುಡಿಯುವ ನೀರನ್ನು ಒದಗಿಸುವ ಪರಿಸ್ಥಿತಿಯಿದೆ. ಅದರ ಬದಲು ಸ್ಥಳೀಯ ನೀರಿನ ಮೂಲಗಳನ್ನು ಉಪಯೋಗಿಸಿ ಗ್ರಾಮಗಳಲ್ಲಿಯೇ ಓವರ್ಹೆಡ್ ಟ್ಯಾಂಕ್ಗಳನ್ನು ನಿಮರ್ಿಸಿ ಗ್ರಾಮಗಳಿಗೆ ನೀರು ಒದಗಿಸಬಹುದು ಎಂದರು.
ಸದಸ್ಯ ಕಟಪಾಡಿ ಶಂಕರ ಪೂಜಾರಿ ಮಾತನಾಡಿ, ಉದ್ಯಾವರ ಕಟಪಾಡಿ ವ್ಯಾಪ್ತಿಯಲ್ಲಿನ ಬಹುಗ್ರಾಮ ಕುಡಿಯುವ ನೀರಿನ ಯೋಜಯನ್ನು ಕೈಗೆತ್ತಿಗೊಳ್ಳಲಾಗಿದೆ. ಅದರಲ್ಲಿ ಉದ್ಯಾವರ ಹೊಳೆಯ ವ್ಯಾಪ್ತಿಯ ಕುಕರ್ಾಲು, ಮಣರ್ೆ, ಬೆಳ್ಳೆ, ಕಟ್ಟಿಂಗೇರಿ, ಏಣಗುಡ್ಡೆ, ಕೋಟೆ, ಮಟ್ಟು ಮೊದಲಾದ 9 ಗ್ರಾಮಗಳನ್ನು ಸೇರಿಸಿಕೊಳ್ಳಲಾಗಿಲ್ಲ ಎಂದರು. ಕುಕರ್ಾಲು ಅಣೆಕಟ್ಟಿನಿಂದ ಕಾಪುವಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ನೀರಿನ ಪೈಪ್ಲೈನ್ ಹಾದು ಹೋಗುವ ಈ ಗ್ರಾಮಗಳಿಗೆ ನೀರನ್ನು ಕೊಡಲಾಗುತ್ತಿಲ್ಲ. ಪೈಪ್ಲೈನ್ ಹಾದು ಹೋಗುವ ಎಲ್ಲಾ ಗ್ರಾಮಗಳಿಗೂ ನೀರನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ನೀರನ್ನು ಒದಗಿಸುವಂತೆ ನೀರು ಸರಬರಾಜು ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.
ನೀರು ಸರಬರಾಜು ಯೋಜನೆ ಕಾಮಗಾರಿಗಳಿಗೆ ಹಣ ಪಾವತಿಯಾಗಿಲ್ಲ ಎಂದು ಸದಸ್ಯ ಅನಂತ ಮಾವಾಡಿ ಆರೋಪಿಸಿದರು. ಅದರಲ್ಲೂ ಉಡುಪಿ ತಾಲೂಕಿನ ಯೋಜನೆಗಳಿಗೆ ಮಾತ್ರ ಪಾವತಿಯಾಗಿದೆ. ಕುಂದಾಪುರ, ಕಾರ್ಕಳ ತಾಲೂಕಿನ ಯೋಜನೆ ಕಾಮಗಾರಿಗಳಿಗೆ ಹಣ ಪಾವತಿಯನ್ನು ತಡೆ ಹಿಡಿಯಲಾಗಿದೆ. ಯಾಕೆ ಈ ರೀತಿ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧಿಕಾರಿ ಹಣಪಾವತಿ ತಡೆಹಿಡಿಯಲಾಗಿಲ್ಲ. ಬ್ಯಾಂಕ್ನಲ್ಲಿ ಸಿಬ್ಬಂದಿ ಕೊರತೆಯಿಂದ ವಿಳಂಬವಾಗುತ್ತಿದೆ. ಮುಂದಿನ 4-5 ದಿನಗಳಲ್ಲಿ ಪಾವತಿಯಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಮಾತನಾಡಿ, ನೀರು ಸರಬರಾಜು ಮಂಡಳಿಗೆ ಬೇರೆ ಇಲಾಖೆಯಿಂದ ಜೆಇ ಹಾಗೂ ಎಇಗಳು ಬಂದು ಕೆಲಸ ಮಾಡುತ್ತಾರೆ. ಪ್ರತ್ಯೇಕ ಎಂಜಿನಿಯರ್ಗಳ ನೇಮಕಾತಿ ಮಾಡಬೇಕಾಗಿದೆ ಎಂದರು.
ಸದಸ್ಯೆ ಮಮತಾ ಅಧಿಕಾರಿ ಮಾತನಾಡಿ, ಮಣರ್ೆ ಪಂಚಾಯಿತಿ ಪಿಡಿಓ ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಇದೀಗ ಸುದೀರ್ಘ ರಜೆಯಲ್ಲಿ ತೆರಳಿದ್ದಾರೆ. ತಾಪಂ ಕಾರ್ಯನಿರ್ವಹಣಾಧಿಕಾರಿಯರ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಜೆಯಲ್ಲಿ ತೆರಳಿದ್ದರೂ ತಾತ್ಕಾಲಿಕವಾಗಿ ಬೇರೆ ಗ್ರಾಮದ ಪಿಡಿಓಗೂ ಅಧಿಕಾರ ನೀಡಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಉತ್ತರಿಸಿ ಪ್ರಕರಣವನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರ ಗಮನಕ್ಕೆ ತಂದು ಶೋಕಾಸ್ ನೀಡಲು ಸೂಚಿಸಿದರು.
ಸದಸ್ಯ ಉಪೇಂದ್ರ ನಾಯಕ್ ಮಾತನಾಡಿ, ರಾಜ್ಯ ಮಟ್ಟದಲ್ಲಿಯೇ ಆರ್ಟಿಇ ಬಗ್ಗೆ ಗೊಂದಲಗಳಿದ್ದು, ಕೆಲವರಿಗೆ ಸೇರ್ಪಡೆಯ ಬಗ್ಗೆ ಮೆಸೇಜ್ ಬಂದರೂ ಶಾಲೆಗಳಿಗೆ ಹೋದರೆ ಸೀಟ್ ಇಲ್ಲ ಎಂದು ತಿಳಿಸುತ್ತಾರೆ ಯಾಕೆ ಈ ರೀತಿ ಗೊಂದಲಾಗುತ್ತಿದೆ ಎಂದರು ಪ್ರಶ್ನಿಸಿದರು.
ಜಿಲ್ಲೆಯ 73 ಶಾಲೆಗಳಲ್ಲಿ ಆರ್ಟಿಇಯಲ್ಲಿ ದಾಖಲಾತಿ ಮಾಡಲಾಗುತ್ತಿದೆ. ಯಾವುದೇ ಗೊಂದಲವಾಗಿಲ್ಲ. ಜಿಲ್ಲೆಯಲ್ಲಿ 1073 ಆರ್ಟಿಇ ಸೀಟ್ಗಳಿವೆ. ಅದಕ್ಕೆ 5,748 ಅಜರ್ಿಗಳು ಬಂದಿವೆ. ಮೊದಲ ಹಂದಲ್ಲಿ 828 ಅಡ್ಮಿಷನ್ ಮಾಡಲಾಗಿದೆ. ಎರಡನೇ ಪಟ್ಟಿ ಬಿಡುಗಡೆಯಾಗಿದ್ದು ಅಡ್ಮಿಶನ್ ಏ.30ರೊಳಗೆ ಮುಗಿಯಲಿದೆ ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ. ಕನಗವಲ್ಲಿ ರಜೆಯಲ್ಲಿ ತೆರಳಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಭೆ ನಡೆಸಿದರು.
ಜಿಲಾ ಪಂಚಾಯಿತಿ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್, ಉಪಾಧ್ಯಕ್ಷ ಪ್ರಕಾಶ್ ಟಿ. ಮೆಂಡನ್, ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಇಂದಿರಾ ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು, ಮುಖ್ಯ ಯೋಜನಾಧಿಕಾರಿ ವಿಜಯ್ ಕುಮಾರ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.