Spread the love
ಉಡುಪಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ
ಉಡುಪಿ: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ನಡೆಸಿದ ಸ್ಮಾರ್ಟ್ ಸ್ಕಾಲರ್ಶಿಪ್ ಪರೀಕ್ಷೆ -24 ಇದರಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ರಹ್ಮಾನಿಯ ಮದ್ರಸ ದೊಡ್ಡಣ್ಣಗುಡ್ಡೆಯ ವಿದ್ಯಾರ್ಥಿ ಮುಹಮ್ಮದ್ ತಸೀನ್ ಹಾಗೂ ಸುನ್ನಿ ಜಂ-ಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ ರಾಜ್ಯಮಟ್ಟದ ಪ್ರತಿಭಾ ಸಂಗಮದಲ್ಲಿ ಗ್ರೌಂಡ್ ಝೋನ್ ವಿಭಾಗದ ಮೆಮೊರಿ ಟೆಸ್ಟ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ಮಹಮ್ಮದ್ ರುಮಾನ್ ಇವರಿಗೆ ರಹ್ಮಾನಿಯ ಮದ್ರಸ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಕೆ. ಎಸ್ ಎಂ ಅಬ್ದುಲ್ ಖಾದರ್ ಹಾಜಿ, ಕಾರ್ಯದರ್ಶಿ ಮಹಮ್ಮದ್ ಕಾಸಿಂ, ಮಸೀದಿ ಖತೀಬರಾದ ಕಾಸಿಂ ಸಅದಿ, ಸದರ್ ಉಸ್ತಾದ್ ಅಬ್ದುಲ್ ರಹಮಾನ್ ಸಅದಿ, ಅಧ್ಯಾಪಕರಾದ ಹಸನ್ ಹನೀಫಿ, ರಝಾಕ್ ಉಸ್ತಾದ್, ಮುಂತಾದ ಗಣ್ಯರು ಉಪಸ್ಥಿತರಿದ್ದರು.
Spread the love