ಉಡುಪಿ: ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆ

Spread the love

ಉಡುಪಿ: ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆ

ಉಡುಪಿ: ಕ್ಷೇತ್ರ ಸಂಪನ್ಮೂಲ ಕೇಂದ್ರ ಅಜ್ಜರಕಾಡು ಉಡುಪಿ ವತಿಯಿಂದ ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ ರವರು ವಹಿಸಿ ಮಕ್ಕಳಿಗೆ ಪ್ರೋತ್ಸಾಹದ ಮಾತನಾಡಿದರು.

ವಿಶೇಷ ಸಾಧನೆ ಮಾಡಿದ ಮಕ್ಕಳು ಮತ್ತು ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿಲ್ಲಾ ಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ 5 ಮಕ್ಕಳಿಗೆ ಸನ್ಮಾನ ಕಾರ್ಯಕ್ರಮವನ್ನು ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಇವರ ಸಹಯೋಗದೊಂದಿಗೆ ನಡೆಸಲಾಯಿತು. ಉಡುಪಿ ನಗರಸಭೆಯ ಇಂಜಿನಿಯರ್ ದಿವಾಕರ ಅವರು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನವನ್ನು ನೀಡಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿದರು,ಈ ಸಂದರ್ಭದಲ್ಲಿ40 ವಿಶೇಷ ಚೇತನ ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಿದರು.

ಸ.ಹಿ.ಪ್ರಾ ಶಾಲೆ ಕಾಜಾರಗುತ್ತು ಶಾಲೆಯ ವಿದ್ಯಾರ್ಥಿ ಅಮೃತ್ ನಾಯಕ್ ಪ್ರಾರ್ಥನೆ ಮಾಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಉಷಾ ಕಿರಣ್, ನಿವೃತ್ತ ಬಿಐಇಆರ್‌ಟಿ ಗಂಗೆ ಶಾನುಭಾಗ್, ಕೆಎಂಸಿಯ ಅಕ್ಯುಪೇಶನ್ ಥೆರಪಿಸ್ಟ್ ಡಾಕ್ಟರ್ ಕೇಶವ ರಾಮ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಅಸಿಸ್ಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್ ತಂಝೀಮ್ ಶಿರ್ವ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬಿ.ಆರ್. ಪಿ ಮೀನಾ ಸ್ವಾಗತಿಸಿ, ಬಿ ಆರ್ ಪಿ ಉಷಾ ವಂದಿಸಿದರು.

ಮ.ಬಿ.ಆರ್.ಪಿ ಸುನಿತಾ ರವರು ಕಾರ್ಯಕ್ರಮ ನಿರೂಪಿಸಿದರು.


Spread the love