ಉಡುಪಿ: ವ್ಯಕ್ತಿತ್ವ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಿ: ವೈಸಿಎಸ್ ವೈಎಸ್‍ಎಮ್ ಸಮಾವೇಶ ಸಮಾರೋಪದಲ್ಲಿ ಬಿಷಪ್ ಜೆರಾಲ್ಡ್ ಲೋಬೊ

Spread the love

ಉಡುಪಿ: ಪ್ರತಿಯೊಬ್ಬ ವಿದ್ಯಾರ್ಥಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ವ್ಯಕ್ತಿತ್ವ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

YCS_YSM_Convention conclude 20-10-2015 12-39-43

YCS_YSM_Convention conclude 20-10-2015 12-41-30

YCS_YSM_Convention conclude 20-10-2015 12-46-12

YCS_YSM_Convention conclude 20-10-2015 12-44-46 YCS_YSM_Convention conclude 20-10-2015 12-43-14 YCS_YSM_Convention conclude 20-10-2015 12-23-14 YCS_YSM_Convention conclude 20-10-2015 12-19-37 YCS_YSM_Convention conclude 20-10-2015 11-42-21

ಅವರು ಮಂಗಳವಾರ ಯುವ ವಿದ್ಯಾರ್ಥಿ ಸಂಚಾಲನ ಭಾರತದಲ್ಲಿ ಕಾರ್ಯಾರಂಭಗೊಳಿಸಿ 50 ವರುಷಗಳನ್ನು ಪೊರೈಸಿದ ಸಂಧರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಹಯೋಗದೊಂದಿಗೆ ಆಯೋಜಿಸಿದ ಕರ್ನಾಟಕ ಪ್ರಾಂತಿಯ ಮಟ್ಟದ ವೈಸಿಎಸ್ ವೈಎಸ್‍ಎಮ್ ರಾಜ್ಯ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು.

ನವ ಸಮಾಜದ ನಿರ್ಮಾಣದಲ್ಲಿ ಯುವ ವಿದ್ಯಾರ್ಥಿಗಳೂ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಆ ನವ ಸಮಾಜ ಪ್ರತಿಯೊಬ್ಬ ವಿದ್ಯಾರ್ಥಿಯ ಸ್ವಂತ ಜೀವನದ ವ್ಯಕ್ತಿತ್ವದ ವಿಕಸನದೊಂದಿಗೆ ನಡೆದಾಗ ಮಾತ್ರ ಯಶಸ್ವಿ ನವ ಸಮಾಜ ನಿರ್ಮಾಣ ಸಾಧ್ಯವಿದೆ. ಇಂದಿನ ಶಿಕ್ಷಣ ವಿದ್ಯಾರ್ಥಿಗಳು ಹಲವಾರು ವಿಷಯಗಳನ್ನು ಅವರ ತಲೆಯಲ್ಲಿ ತುಂಬಿಸುವ ಕೆಲಸ ಮಾಡುತ್ತಿದ್ದು ಇದರಿಂದ ಹೃದಯ ಸಂಕುಚಿತಗೊಳ್ಳುತ್ತದೆ ವಿನಃ ಸಮರ್ಪಕವಾದ ಜ್ಞಾನ ತುಂಬಿಸಲು ಪೂರಕವಾಗುವುದಿಲ್ಲ. ಮಕ್ಕಳ ಮನಸ್ಸಿನ ಸತ್ಯ, ಸಂಸ್ಕಾರ, ದೇಶಪ್ರೇಮಗಳು ಬೆಳೆದಾಗ ಪ್ರತಿಯೊಬ್ಬರು ಪರಸ್ಪರ ಸಹೋದರ ಸಹೋದರಿಯರು ಎನ್ನುವ ಸದ್ಗುಣಗಳು ಬೆಳೆದಾಗ ತಾವು ಪಡೆದ ಶಿಕ್ಷಣಕ್ಕೆ ನಿಜವಾದ ಅರ್ಥಲಭಿಸಿ ಜೀವನ ಸಾರ್ಥಕಗೊಳ್ಳಲು ಸಹಕಾರಿಯಾಗುತ್ತದೆ. ಚಿಕ್ಕ ಪ್ರಾಯದಲ್ಲಿ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಂಡು ಅದನ್ನು ನನಸಾಗುವತ್ತ ಪ್ರಯತ್ನ ಮಾಡುವುದರೊಂದಿಗೆ ನವಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಕರ್ನಾಟಕ ಯುವಜನ ಆಯೋಗದ ಸಂಚಾಲಕ ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ ಡಾ ಹೆನ್ರಿ ಡಿ’ಸೋಜಾ ಮಾತನಾಡಿ ಯುವ ಮನಸ್ಸುಗಳಲ್ಲಿ ಕನಸುಗಳನ್ನು ತುಂಬಿ ಅವರುಗಳನ್ನು ಮೌಲ್ಯಭರಿತರಾಗಿ ಬೆಳೆಸಿ ಪೋಷಿಸುವುದರೊಂದಿಗೆ ಇತರರ ಕಷ್ಟಗಳಿಗೆ ಸ್ಪಂದಿಸುವ ಗುಣಗಳನ್ನು ಅವರಲ್ಲಿ ಬೆಳೆಸಬೇಕು. ಕಣ್ಣಲ್ಲಿ ಕರುಣೆ, ಮುಖದಲ್ಲಿ ಕಳೆ, ಮನಸ್ಸಿನಲ್ಲಿ ಕನಸು, ಬಾಯಿಯಲ್ಲಿ ಸತ್ಯ, ಹೃದಯದಲ್ಲಿ ಪ್ರೀತಿ, ಕೈಕಾಲುಗಳಲ್ಲಿ ಸೇವೆಯ ಗುಣವನ್ನು ಹೊಂದಿದ ಪ್ರತಿಯೊಬ್ಬ ವ್ಯಕ್ತಿ ನಿಜವಾದ ನಾಯಕನಾಗಲು ಯೋಗ್ಯನಾಗುತ್ತಾನೆ ಎಂದರು.

ಕಾರ್ಯಕ್ರಮದಲ್ಲಿ ಸಮಾವೇಶದ ನಿರ್ಣಯಗಳು ಹಾಗೂ ಬೇಡಿಕೆಗಳನ್ನು ರಾಜ್ಯದ ಶಿಕ್ಷಣ ಸಚಿವರಿಗೆ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ ಡೆನಿಸ್ ಡೆಸಾ ಮುಖಾಂತರ ಹಸ್ತಾಂತರಿಸಲಾಯಿತು. ಸುದರ್ಶನ್ ನಾಯಕ್ ಮತ್ತು ಜಸ್ವಿಟಾ ಕ್ವಾಡ್ರಸ್ ಸಮಾವೇಶದ ಧ್ಯೇಯದ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಂ ಡೆನಿಸ್ ಡೆಸಾ ಪಿಆರ್‍ಒ ಉಡುಪಿ ಧರ್ಮಪ್ರಾಂತ್ಯ, ವಂ ಲೋರೆನ್ಸ್ ಡಿ’ಸೋಜಾ ಕಾರ್ಯದರ್ಶಿ, ಕೆಥೊಲಿಕ್ ಶಿಕ್ಷಣ ಸೊಸೈಟಿ, ವಂ ದೀಪಕ್ ಥೊಮಸ್ ಕೆಜೆ ರಾಷ್ಟ್ರೀಯ ನಿರ್ದೇಶಕರು, ವಂ ಎಡ್ವಿನ್ ಡಿ’ಸೋಜಾ, ಸಿಸ್ಟರ್ ಐರಿನ್ ತಾವ್ರೊ, ಜಿಲ್ಲಾ ಪಂಚಾಯತ್ ಸದಸ್ಯೆ ಐಡಾ ಗಿಬ್ಬಾ ಡಿಸೋಜ, ಉಡುಪಿ ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಆಲ್ಫೊನ್ಸ್ ಡಿಕೋಸ್ತಾ ರಾಜ್ಯ ಯುವ ನಿರ್ದೇಶಕ ವಂ ಮರಿ ಜೋಸೇಫ್, ವೈಸಿಎಸ್ ವೈಎಸ್ ಎಮ್ ರಾಜ್ಯಾಧ್ಯಕ್ಷೆ ಹೆಝೆಲ್ ಮಾರ್ಟಿಸ್, ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾದ ಪ್ರಿಯಾಂಕ ಎಸ್ ನೊರೊನ್ಹಾ, ಸುದರ್ಶನ್ ನಾಯಕ್, ಪರ್ಲ್ ಲೋಪಿಸ್, ಸಚೇತಕರಾದ ಜೋನ್ ಕ್ಯಾಸ್ತಲಿನೊ, ಲೀನಾ ಮೆಂಡೊನ್ಸಾ, ರಾಜ್ಯ, ರಾಷ್ಟ್ರೀಯ, ಧರ್ಮಪ್ರಾಂತ್ಯದ ಪದಾಧಿಕಾರಿಗಳೂ ಉಪಸ್ಥಿತರಿದ್ದರು.


Spread the love