ಉಡುಪಿ: ಮಾನವ ಸಂಪನ್ಮೂಲ ಸಚಿವಾಲಯ ಜಿಲ್ಲೆಯನ್ನು ಗುರುತಿಸಿ ಶೈಕ್ಷಣಿಕ ರಂಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ನೀಡಿದೆ. ಅದನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದ್ದು, ಅದಕ್ಕಾಗಿ ಎಲ್ಲಾ ರೀತಿಯ ಮೂಲ ಸೌರ್ಕಗಳು ವಿದ್ಯಾರ್ಥಿಗಳಿಗೆ ಸಿಗಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಶನಿವಾರ ಹಿರಿಯಡ್ಕದಲ್ಲಿ ಹರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೊದಲ ಅಂತಸ್ತಿನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ಕಾಲೇಜುಗಳಿಗೆ ಸಮನಾಗಿ ಸರ್ಕಾರಿ ಶಾಲೆ-ಕಾಲೇಜುಗಳೂ ಉತ್ತಮ ಫಲಿತಾಂಶ ನೀಡುತ್ತಿದೆ. ಶೇ. 100 ಅಂಕ ಪಡೆದ ವಿದ್ಯಾರ್ಥಿಳಿಂದ ಉತ್ತಮ ಸಾಧನೆ ಮಾಡಿಸಿ ಫಲಿತಾಂಶ ಪಡೆಯುವುದು ಉತ್ತಮ ಸಾಧನೆಯಲ್ಲ. ಶೇ.35 ಅಂಕ ಪಡೆದ ವಿದ್ಯಾರ್ಥಿಗಳಿಂದ ಶೇ.100 ಫಲಿತಾಂಶ ಪಡೆಯುವುದು ಉತ್ತಮ ಸಾಧನೆ. ಸರ್ಕಾರಿ ಶಾಲೆಗಳು ಈ ಸಾಧನೆಯನ್ನು ಮಾಡುತ್ತಿದೆ ಎಂದರು.
ಶಾಲಾ ಕಾಲೇಜುಗಳಲ್ಲಿ ಉತ್ತಮ ಮೂಲಕ ಸೌಕರ್ಯವಿದ್ದರೆ ಪರಿಸರದ ಅಭಿವೃದ್ಧಿಯೂ ಆಗುತ್ತದೆ. ಕಾಲೇಜು ಉತ್ತಮವಾಗಿದ್ದರೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ ಇದು ಸ್ಥಳೀಯ ಪರಸರದ ಅಭಿವೃದ್ದಿಗೂ ಕಾರಣವಾಗುತ್ತದೆ ಎಂದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಆರು ಸ್ಮಾರ್ಟ್ ಸಿಟಿಗಳನ್ನು ಘೋಷಣೆ ಮಾಡಿದ್ದು, ಯಾವ ನಗರಗಳು ಅದರ ಗೈಡ್ಲೈನ್ಸ್ನಲ್ಲಿ ಬರುತ್ತದೆಯೋ ಅವುಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ದೊರೆಯಲಿದೆ. 24 ಗಂಟೆ ನೀರು ಸರಬರಾಜು, ಒಳ ಚರಂಡಿ ವ್ಯವಸ್ಥೆ, ವಾತಾವರಣದ ನೈರ್ಮಲ್ಯತೆ ಮೊದಲಾದ ಹಲವು ಅಂಶಗಳನ್ನು ಒಳಗೊಂಡಿದೆ. ಶೀಘ್ರ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳನ್ನು ಕರೆಸಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಯಾರಿಗೆ ಹೆಚ್ಚು ಅಂಕ ಪಡೆಯುತ್ತಾರೋ ಅವರಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಗಲಿದೆ.
ಉಡುಪಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುನೀತಾ ನಾಯ್ಕ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪೆÇ್ರ. ಶಿವಮೂರ್ತಿ ಎಚ್.ಕೆ., ಬೊಮ್ಮರ ಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ನಾಯಕ್ ಮುಂಡುಜೆ, ಕಾಲೇಜು ಅಭಿವೃದ್ಧಿ ಸಮಿತಿಯ ನಟರಾಜ್ ಹೆಗಡೆ, ಉದ್ಯಮಿ ವಿನೋದ್ ಕುಮಾರ್, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಡಿ.ವಿ. ಹೆಗಡೆ ಉಪಸ್ಥಿತರಿದ್ದರು.
ಹಿರಿಯಡ್ಕ ಕಾಲೇಜಿನ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಭಟ್ಟ ಪ್ರಸ್ತಾವಿಸಿ, ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಆಶಾ ವಂದಿಸಿದರು. ಸಹ ಪ್ರಾಧ್ಯಾಪಕ ಸೋಜನ್ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು.