ಉಡುಪಿ: ರಾಜ್ಯ ಸರಕಾರದ ಸಂಸದೀಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿ ಮೊದಲ ಬಾರಿಗೆ ತನ್ನ ಕ್ಷೇತ್ರಕ್ಕೆ ಆಗಮಿಸಿದ ಉಡುಪಿ ಕ್ಷೇತ್ರಕ್ಕೆ ಆಗಮಿಸಿದ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಪಕ್ಷದ ಕಾರ್ಯಕರ್ತರು ಶುಕ್ರವಾರ ಅದ್ದೂರಿಯಾಗಿ ಸ್ವಾಗತಿಸಿದರು.
ಮಂಗಳೂರು ವಿಮಾನ ನಿಲ್ದಾಣದಿಂದ ಆಗಮಿಸಿದ ಶಾಸಕರನ್ನು ಪಕ್ಷದ ಕಾರ್ಯಕರ್ತರು ಉದ್ಯಾವರ ಬಲಾಯಿಪಾದೆ ಜಂಕ್ಷನ್ ಬಳಿ ಹೂ ಹಾರ ಹಾಕಿ ಪಟಾಕಿ ಸಿಡಿಸಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶೀರ್ವಾದಿಂದ ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಂಸದೀಯ ಕಾರ್ಯದರ್ಶಿಯ ಹುದ್ದೆ ಲಭಿಸಿದ್ದು, ಕಂದಾಯ ಇಲಾಖೆಯಲ್ಲಿ ಕೆಲಸಗಳಿಗೆ ಸಹಕಾರಿಯಾಗುವಂತೆ ಮುಖ್ಯಮಂತ್ರಿಗಳು ತನ್ನ ಮೇಲೆ ತುಂಬಾ ವಿಶ್ವಾಸವಿಟ್ಟು ಈ ಹುದ್ದೆಯನ್ನು ನೀಡಿದೆ. ಸರಕಾರ ತನ್ನ ಮೇಲೆ ಇರಿಸಿದ ಭರವಸೆಯನ್ನು ಹಾಳಾಗದಂತೆ ಪ್ರಾಮಾಣಿಕವಾಗಿ ಕಂದಾಯ ಮಂತ್ರಿಗಳಾದ ಶ್ರೀನಿವಾಸ ಪ್ರಸಾದ್ ಜೊತೆ ಸೇರಿಕೊಂಡು ಕೆಲಸ ನಿರ್ವಹಿಸುವುದಾಗಿ ಹೇಳಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜನಾರ್ದನ ತೋನ್ಸೆ, ನಗರಸಭೆಯ ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷರಾದ ಅಮೃತಾ ಕೃಷ್ಣ ಮೂರ್ತಿ, ಕಾಂಗ್ರೆಸ್ ನಾಯಕರಾದ ಪ್ರಶಾಂತ್ ಪೂಜಾರಿ, ಸುಜಯ ಪೂಜಾರಿ, ಅಮೃತ್ ಶೆಣೈ, ಲಕ್ಷಣ್ ಶೆಣೈ, ರಮೇಶ್ ಕಾಂಚನ್, ಐಡಾ ಗಿಬ್ಬಾ ಡಿ’ಸೋಜಾ, ಸೆಲಿನಾ ಕರ್ಕಡ, ಚಂದ್ರಿಕಾ ಶೆಟ್ಟಿ, ಜನಾರ್ದನ ಭಂಡಾರ್ಕರ್, ನಗರಸಭೆಯ ಸದಸ್ಯರು ಹಾಗೂ ನೂರಾರು ಸಂಖ್ಯೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.