ಉಡುಪಿ: ಸಾಲು ಮರದ ತಿಮ್ಮಕ್ಕನಿಗೆ `ನೆರಳು -ನೆರವು’ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ

Spread the love

 ಉಡುಪಿ: ಪರಿಸರ ಪ್ರೇಮಿ, ಗಿಡಮರಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಸಾಲು ಮರದ ತಿಮ್ಮಕ್ಕನಿಗೆ ಆರ್ಥಿಕ ಸಹಾಯ ಮಾಡುವ `ನೆರಳು -ನೆರವು’ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಶನಿವಾರ   ಚಾಲನೆ ದೊರೆಯಿತು.

ಯುವ ಪತ್ರಕರ್ತ ಅವಿನಾಶ್ ಕಾಮತ್ ನೇತೃತ್ವದ ತಂಡ ನೆರಳು-ನೆರವು ಅಭಿಯಾನದ ಮೂಲಕ ಉಡುಯಲ್ಲಿ ದೇಣಿಗೆ ಸಂಗ್ರಹ ಜಾಥ ನಡೆಸಿತು.

Neralu_neravu_salumaradathimmakka 10-10-2015 16-16-36 Neralu_neravu_salumaradathimmakka 10-10-2015 16-16-43 Neralu_neravu_salumaradathimmakka 10-10-2015 16-18-04 Neralu_neravu_salumaradathimmakka 10-10-2015 16-18-35 Neralu_neravu_salumaradathimmakka 10-10-2015 16-21-20 Neralu_neravu_salumaradathimmakka 10-10-2015 16-33-38 Neralu_neravu_salumaradathimmakka 10-10-2015 16-34-24 Neralu_neravu_salumaradathimmakka 10-10-2015 16-40-45 Neralu_neravu_salumaradathimmakka 10-10-2015 16-43-31 Neralu_neravu_salumaradathimmakka 10-10-2015 16-45-05 neralu_neravu_thimmakka 10-10-2015 18-20-58 neralu_neravu_thimmakka 10-10-2015 18-21-40

ಅವಿನಾಶ್ ಕಾಮತ್ ಮಾತನಾಡಿ ಸಂಗ್ರಹವಾದ ದೇಣಿಗೆಯನ್ನು ಶೇ.100ರಷ್ಟು ಪಾರದರ್ಶಕವಾಗಿ ಸಾಲುಮರದ ತಿಮ್ಮಕ್ಕ ಅವರಿಗೇ ತಲುಪಿಸಲಾಗುವುದು. ಅದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿ ಸಂಗ್ರಹವಾದ ಮೊತ್ತದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಮೊತ್ತವನ್ನು ಡಿಡಿ ಮೂಲಕ ತಿಮ್ಮಕ್ಕ ಇರುವಲ್ಲಿಗೆ ಹೋಗಿ ಅಥವಾ ಅವರನ್ನು ಉಡುಪಿಗೆ ಕರೆಸಿ ನೀಡಲಾಗುತ್ತದೆ.

ಜಾಥಾ ಆರಂಭಕ್ಕೆ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ನಗರಸಭಾ ಅಧ್ಯಕ್ಷ ಯುವರಾಜ್ ಮಾತನಾಡಿ, ಯುವಕರ ತಂಡದಿಂದ ಉಡುಪಿಗೆ ಹೆಮ್ಮೆ ತರುವ ಕೆಲಸ ಮಾಡುತ್ತಿದೆ. ದೊಡ್ಡ ವ್ಯಕ್ತಿಗಳು ಎಲ್ಲರ ಗಮನಕ್ಕೂ ಬರುತ್ತದೆ. ಅವರನ್ನು ಎಲ್ಲರೂ ಗುರುತಿಸುತ್ತಾರೆ. ಆದರೆ ಸಾಲುಮರದ ತಿಮ್ಮಕ್ಕನಂತಹವರನ್ನು ಗುರುತಿಸುವುದು ಮಾತ್ರವಲ್ಲ ಅವರಿಗೆ ಆರ್ಥಿಕ ಸಹಾಯ ಮಾಡುವುದು ಉತ್ತಮ ಕೆಲಸವಾಗಿದೆ. ಉಡುಪಿ ನಗರವೂ ಹಸಿರಿನಿಂದ ಕಂಗೊಳಿಸಬೇಕು. ಸಾರ್ವಜನಿಕರು ಸಹಕಾರ ಮಾಡಿದರೆ ಇದು ಸಾಧ್ಯ ಎಂದರು.

ಉಡುಪಿ ರೋಬೋ ಸಾಫ್ಟ್ ಖಾಸಗಿ ಕಂಪೆನಿಯ ಉದ್ಯೋಗಿಗಳು ತಮ್ಮ ಸಂಸ್ಥೆಯಲ್ಲಿ ಸಂಗ್ರಹವಾದ 41 ಸಾವಿರ ರೂ. ಮೊತ್ತವನ್ನು ನೀಡಿದರು. ಕರ್ನಾಟಕ ಕಾರ್ಮಿಕ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಶೆಟ್ಟಿ ತಮ್ಮ ವೇದಿಕೆಯಿಂದ 10 ಸಾವಿರ, ಉದ್ಯಮಿ ಅಮೃತ್ ಶೆಣೈ 10 ಸಾವಿರ ರೂ. ದೇಣಿಗೆ ನೀಡಿದರು. ಬಿಗ್ ಬಝಾರ್‍ನ ಸ್ಟೋರ್ ಮ್ಯಾನೇಜರ್‍ಗಳಾದ ಸುಶೀಲ್ ಹಾಗೂ ಶಿವಕುಮಾರ್ ಬಿಗ್ ಬಝಾರ್ ವತಿಯಿಂದ ತಮ್ಮ ದೇಣಿಗೆ ನೀಡಿದರು. ಕೃಷ್ಣ ಜನ್ಮಾಷ್ಟಮಿಗೆ ವೇಷ ಹಾಕಿ ಅಶಕ್ತರಿಗೆ ಸಹಾಯಹಸ್ತ ನೀಡಿದ ರವಿ ಅವರು ತಮ್ಮ ಗೆಳೆಯರಿಂದ ಸಂಗ್ರಹಿಸಿದ ಮೊತ್ತವನ್ನು ದೇಣಿಗೆಯಾಗಿ ನೀಡಿದರು. ಜಿಎಸ್‍ಬಿ ಹಿತರಕ್ಷಣಾ ವೇದಿಕೆಯಿಂದ 10 ಸಾವಿರ ರೂ. ದೇಣಿಗೆ ನೀಡಲಾಯಿತು. ಬಳಿಕ ಜಾಥಾದಲ್ಲಿ ನಗರದ ವಿವಿಧೆಡೆ ಸಂಚರಿಸಿ ದೇಣಿಗೆ ಸಂಗ್ರಹಿಸಲಾಯಿತು.

ಉಡುಪಿಯ ಪ್ರಸಾದ್ ನೇತ್ರಾಲಯದ ಡಾ. ಕೃಷ್ಣ ಪ್ರಸಾದ್, ಡಾ. ಎ.ವಿ.ಬಾಳಿಗೆ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರ ಮನೆ, ರೈಲ್ವೆ ಯಾತ್ರಿ ಸಂಘದ ರಾಮಚಂದ್ರ ಆಚಾರ್ಯ,  ನೆರಳು ನೆರವು ತಂಡದ ಗುರುರಾಜ್ ಸನಿಲ್, ಶ್ರೀಕಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


Spread the love