ಉಡುಪಿ : ಹಿರಿಯ ನಾಗರೀಕರಿಗೆ ಹಗಲು ಯೋಗಕ್ಷೇಮ ಕೇಂದ್ರ- ವಿನಯ ಕುಮಾರ್ ಸೊರಕೆ

Spread the love

ಉಡುಪಿ :- ಜಿಲ್ಲೆಯ ಹಿರಿಯ ನಾಗರೀಕರ ಬೇಡಿಕೆಗನುಗುಣವಾಗಿ, 2016-17 ನೇ ಸಾಲಿನ ಆಯವ್ಯಯದಲ್ಲಿ ಜಿಲ್ಲೆಯಲ್ಲಿ ಹಿರಿಯ ನಾಗರೀಕರಿಗೆ ಹಗಲು ಯೋಗಕ್ಷೇಮ ಕೇಂದ್ರಕ್ಕೆ ಮಂಜೂರಾತಿ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

seniorcitizenday_udupi 01-10-2015 09-49-58 seniorcitizenday_udupi 01-10-2015 09-50-07 seniorcitizenday_udupi 01-10-2015 10-03-25 seniorcitizenday_udupi 01-10-2015 10-03-34 seniorcitizenday_udupi 01-10-2015 10-03-43 seniorcitizenday_udupi 01-10-2015 10-03-51 seniorcitizenday_udupi 01-10-2015 10-04-00 seniorcitizenday_udupi 01-10-2015 10-04-24 seniorcitizenday_udupi 01-10-2015 10-04-33 seniorcitizenday_udupi 01-10-2015 10-06-02 seniorcitizenday_udupi 01-10-2015 10-08-20 seniorcitizenday_udupi 01-10-2015 10-20-57

ಅವರು ಗುರುವಾರ ಎಂಜಿಎಂ ಕಾಲೇಜಿ ನ ರವೀಂದ್ರ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಹಿರಿಯ ನಾಗರೀಕರ ಸಂಸ್ಥೆ- ಉಡುಪಿ, ಕುಂದಾಪುರ, ಕಾರ್ಕಳ ಮತ್ತು ಸಿದ್ದಾಪುರ, ಉಡುಪಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ(ರಿ.) ,ಮತ್ತು ವೃದ್ದಾಶ್ರಮಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದೇಶಗಳಲ್ಲಿ ಹಿರಿಯ ನಾಗರೀಕರನ್ನು ವೃದ್ದಾಶ್ರಮಕ್ಕೆ ಸೇರಿಸುವ ಪರಿಪಾಠವಿದೆ, ಆದರೆ ನಮ್ಮಲ್ಲಿ ಪರಸ್ಪರ ಮಾನವ ಸಂಬಂದಗಳಿಗೆ ಹೆಚ್ಚಿನ ಗೌರವ ಇದೆ, ಆದರೆ ಇಂದಿನ ಆಧುನಿಕ ಯುಗದಲ್ಲಿ ಮಾನವ ಸಂಬಂದಗಳು ದೂರವಾಗುತ್ತಿದ್ದು, ಹಿರಿಯ ನಾಗರೀಕರನ್ನು ಗೌರವಿಸುವುದು ಸಮಾಜದ ಎಲ್ಲರ ಕರ್ತವ್ಯ ಎಂದು ಸಚಿವರು ಹೇಳಿದರು.
ಜಿಲ್ಲೆಯು ಈಗಾಗಲೇ ರಕ್ತದಾನಿಗಳ ಜಿಲ್ಲೆಯಾಗಿ ಘೋಷಣೆಯಾಗಿದೆ, ಹಿರಿಯ ನಾಗರೀಕರ ಕ್ಷೇತ್ರದಲ್ಲಿ ಸೇವೆ ನೀಡಿದ ಉತ್ತಮ ಜಿಲ್ಲಾ ಪಂಚಾಯತ್ ಗೆ ನೀಡುವ ರಾಷ್ಟ್ರ ಪ್ರಶಸ್ತಿಯು ಉಡುಪಿ ಜಿಲ್ಲಾ ಪಂಚಾಯತ್ ಗೆ ಲಭಿಸಿದ್ದು, ಜಿಲ್ಲೆಯಲ್ಲಿ ಹಿರಿಯ ನಾಗರೀಕರಿಗೆ 11426 ಗುರುತಿನ ಚೀಟಿಗಳನ್ನು ವಿತರಿಸಲಾಗಿದ್ದು, ಇದರಿಂದ ಸರಕಾರಿ ಬಸ್ಸಿನ ಪ್ರಯಾಣ ದರದಲ್ಲಿ ಶೇ.25 ರಿಯಾಯತಿ ಪಡೆಯಬಹುದಾಗಿದ್ದು, ಜಿಲ್ಲೆಯಲ್ಲಿ ಹಿರಿಯ ನಾಗರೀಕರ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದ್ದು ಈ ವರೆಗೆ 536 ಕರೆಗಳನ್ನು ಮತ್ತು 85 ದೂರು ಅರ್ಜಿ ಸ್ವೀಕರಿಸಿ 54 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ, ರೂ.8 ಲಕ್ಷ ಜಿ.ಪಂ.ಅನುದಾನದಲ್ಲಿ ಕೆದೂರುನಲ್ಲಿ ವೃದ್ಧಾಶ್ರಮ ಪ್ರಾರಂಭಿಸಲಾಗಿದ್ದು, ಹಿರಿಯ ನಾಗರೀಕರ ಸಹಾಯವಾಣಿ, ಹಿರಿಯ ನಾಗರೀಕರ ಸಂಸ್ಥೆಗಳು ಹಾಗೂ ಇಲಾಖೆಯ ಸಹಯೋಗದಲ್ಲಿ, ಜಿಲ್ಲೆ, ತಾಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ಇಲಾಖಾ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಹಾಗೂ ಆರೋಗ್ಯ ಮತ್ತು ಕಾನೂನು ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿಠೋಬಾ ಕಾಮತ್ , ಹಿರಿಯ ಕ್ರೀಡಾಪಟು ಅರುಣ ಕಲಾ ಎಸ್ ರಾವ್ ಸೇರಿದಂತೆ 11 ಮಂದಿ ಹಿರಿಯ ನಾಗರೀಕರಿಗೆ ಮತ್ತು ಹಿರಿಯ ನಾಗರೀಕರ ಸಂಸ್ಥೆ (ರಿ) ಉಡುಪಿ ಯನ್ನು ಸನ್ಮಾನಿಸಲಾಯಿತು.ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀನಿವಾಸ ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪ ನಿರ್ದೇಶಕರಾದ ಗ್ರೇಸಿ ಗೊನ್ಸಾಲ್ವಿಸ್, ಉಡುಪಿ ಜಿಲ್ಲಾ ಹಿರಿಯ ನಾಗರೀಕ ಸಂಸ್ಥೆಯ ಅಧ್ಯಕ್ಷ ಎ.ಪಿ. ಕೊಡಂಚ, ಉಡುಪಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷ ಸರಳಾ ಕಾಂಚನ್, ಕಾರ್ಕಳ ಹಿರಿಯ ನಾಗರೀಕರ ಸಂಸ್ಥೆಯ ರಾಮಕೃಷ್ಣ ನಾಯಕ್, ಕುಂದಾಪುರದ ಸೋಮಶೇಖರ ಶೆಟ್ಟಿ, ಕೆದೂರು ವೃದ್ಧಾಶ್ರಮದ ಡಾ.ಕೇಶವ ಕೋಟೇಶ್ವರ ಉಪಸ್ಥಿತರಿದ್ದರು.
ಮನೋವೈದ್ಯ ವಿರೂಪಾಕ್ಷ ದೇವರಮನೆ , ಹಿರಿಯ ನಾಗರೀಕರಿಗೆ ಆರೋಗ್ಯ ಮಾಹಿತಿಯನ್ನು ಮತ್ತು ಗುರುರಾಜ ಐತಾಳ್ , ವಕೀಲರು ಕಾನೂನು ಮಾಹಿತಿಯನ್ನು ನೀಡಿದರು.
ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ನಿರಂಜನಭಟ್ ಸ್ವಾಗತಿಸಿ, ನಿರೂಪಿಸಿದರು, ಹಿರಿಯ ನಾಗರೀಕರ ಸಹಾಯವಾಣಿಯ ಯೋಜನಾ ಸಂಯೋಜಕ ಗಣೇಶ್ ವಂದಿಸಿದರು.
ಇದೇ ಸಂದರ್ಭದಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅನುದಾಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ಸಚಿವರು ವಿತರಿಸಿದರು.


Spread the love