ಉಡುಪಿಯಲ್ಲಿ ಕೊರೋನಾ ಸ್ಪೋಟ: ಆತಂಕದ ನಡುವೆ ನೆಮ್ಮದಿಯ ಬೆಳವಣಿಗೆ – 132 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್

Spread the love

ಉಡುಪಿಯಲ್ಲಿ ಕೊರೋನಾ ಸ್ಪೋಟ: ಆತಂಕದ ನಡುವೆ ನೆಮ್ಮದಿಯ ಬೆಳವಣಿಗೆ – 132 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 204 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾದ ಆತಂಕದ ನಡುವೆಯೂ ನೆಮ್ಮದಿಯ ಬೆಳವಣಿಗೆ ಎಂಬಂತೆ ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯ ತನಕ ಒಟ್ಟು 132 ಕೊರೋನಾ ಸೋಂಕಿನ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಶುಕ್ರವಾರ ಮಾಹಿತಿ ನೀಡಿರುವ ಅವರು ಜಿಲ್ಲೆಯಲ್ಲಿ ಸಕ್ರಿಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ 634 ಕ್ಕೆ ಇಳಿಕೆಯಾಗಿದ್ದು, ಇನ್ನು ಕೇವಲ 769 ಮಂದಿಯ ವರದಿ ಬರಲು ಬಾಕಿ ಇದೆ. ಶುಕ್ರವಾರ ಪತ್ತೆಯಾದ 204 ಪ್ರಕರಣಗಳಲ್ಲಿ ಬೈಂದೂರು ತಾಲೂಕಿನಲ್ಲೇ ಅತೀ ಹೆಚ್ಚು 161 ರೋಗಿಗಳು ಪತ್ತೆಯಾಗಿದ್ದು ಎಲ್ಲಾ ರೋಗಿಗಳನ್ನು ಈಗಾಗಲೇ ಕೊಲ್ಲೂರಿನಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಆಸ್ಪತ್ರೆ ಗೆ ಶಿಫ್ಟ್ ಮಾಡಲಾಗಿದೆ. ಅದಲ್ಲದೆ ಉಡುಪಿ-01, ಬ್ರಹ್ಮಾವರ- 01, ಕಾಪು-02, ಕಾರ್ಕಳ-04, ಹೆಬ್ರಿ-02, ಕುಂದಾಪುರ- 34 ರೋಗಿಗಳು ಪತ್ತೆಯಾಗಿದ್ದು ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 137 ಕಂಟೈನ್ಮೆಂಟ್ ಝೋನ್ ನಿರ್ಮಿಸಲಾಗಿದ್ದು ಕೋವಿಡ್ ಸೋಂಕಿತ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ 1200 ಬೆಡ್ ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


Spread the love