ಉಡುಪಿಯಲ್ಲಿ ಮೂರು ಅಂತಸ್ತಿನ ನರ್ಮ್, ಹೈಟೆಕ್ ಬಸ್ಸ್ ನಿಲ್ದಾಣ ಪ್ರಕ್ರಿಯೆ ಆರಂಭ; ಪ್ರಮೋದ್ ಮಧ್ವರಾಜ್
ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಉಡುಪಿ ಸಿಟಿ ಬಸ್ಸ್ ನಿಲ್ದಾಣದ ಬಳಿ 0.41 ಸೆಂಟ್ಸ್ ಜಾಗದಲ್ಲಿ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನಗರ ಸಾರಿಗೆ (ನರ್ಮ್) ಬಸ್ಸ್ ನಿಲ್ದಾಣದ ನಿರ್ಮಾಣ ಕಾಮಗಾರಿಯ ಪ್ರಕ್ರಿಯೆ ಚಾಲನೆಯಲ್ಲಿದ್ದು. ಸದ್ರಿ ಕಾಮಗಾರಿಯ ಸ್ಥಳದಲ್ಲಿ ಮೂರು ಅಂತಸ್ತಿನ ಹೈಟೆಕ್ ಬಸ್ಸ್ ನಿಲ್ದಾಣವು ನಿರ್ಮಾಣಗೊಳ್ಳಲಿದೆ.
ನೆಲಮಾಳಿಗೆ ವಾಹನಗಳ ನಿಲುಗಡೆಗಾಗಿ ನೆಲ ಅಂತಸ್ತಿನಲ್ಲಿ ಕೆ. ಎಸ್. ಆರ್.ಟಿ.ಸಿ ಬಸ್ಸ್ ನಿಲ್ದಾಣ, ಮೊದಲ ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ಮೀಸಲು ಇಡಲಾಗಿದೆ. ತಾರೀಖು:05-05-2017 ರಂದು ಟೆಂಡರ್ ಪ್ರಕ್ರಿಯೆ ಫ್ರಾರಂಭವಾಗಲಿದೆ. Technical bid ಹಾಗೂ financial bid ತೆರೆದ ನಂತರ ಗುತ್ತಿಗೆದಾರರನ್ನು ನೇಮಿಸಿ ಕಾಮಗಾರಿಯನ್ನು ಪ್ರಾರಂಭಿಸಲು ಕಾರ್ಯಾದೇಶ ಕೊಟ್ಟ 15 ದಿನದೊಳಗೆ ಬಸ್ಸ್ ನಿಲ್ದಾಣ ಕಾಮಗಾರಿಯು ಪ್ರಾರಂಭವಾಗಲಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.