ಉಳ್ಳಾಲ ಅಕ್ರಮ ಮರಳು ಅಡ್ಡೆಗೆ ದಾಳಿ16 ನಾಡ ದೋಣಿಗಳು ಮತ್ತು 30 ಲೋಡ್ ಮರಳು ವಶ

Spread the love

ಉಳ್ಳಾಲ ಅಕ್ರಮ ಮರಳು ಅಡ್ಡೆಗೆ ದಾಳಿ16 ನಾಡ ದೋಣಿಗಳು ಮತ್ತು 30 ಲೋಡ್ ಮರಳು ವಶ

ಮಂಗಳೂರು: ಅಕ್ರಮ ಮರಳು ದಾಸ್ತಾನು ಅಡ್ಡೆಗಳನ್ನು ಪತ್ತೆ ಮಾಡಿ ಅಕ್ರಮ ಮರಳುಗಾರಿಕೆ ನಡೆಸಲು ಉಪಯೋಗಿಸಿದ ಒಟ್ಟು 16 ನಾಡ ದೋಣಿಗಳು ಮತ್ತು 30 ಲೋಡ್ ಸಾಮಾನ್ಯ ಮರಳನ್ನು ಉಳ್ಳಾಲ ಪೋಲಿಸರು ಬುಧವಾರ ವಶಪಡಿಸಿಕೊಂಡಿದ್ದಾರೆ.

ಅಕ್ಟೋಬರ್ 24 ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ತಲಪಾಡಿ ಪೆರಿ ರಸ್ತೆ ಬಳಿ, ಸಸಿಹಿತ್ಲು, ಕಲ್ಪನೆ . ತಲಪಾಡಿ ನಿವಾಸಿಗಳಾದ ಹನೀಫ್, , ಶಕೀಲ್ ಯಾನೆ ಶಾಕೀರ್, ರಘುನಾಥ ಎಂಬವರುಗಳು ಈ ಮರಳನ್ನು ಮತ್ತು ನಾಡದೋಣಿಗಳನ್ನು ಮರಳುಗಾರಿಕೆಗೆ ಸಂಗ್ರಹಿಸಿಟ್ಟಿರುತ್ತಾರೆ ಎಂಬ ಬಗ್ಗೆ ಖಚಿತವಾದ ಮಾಹಿತಿಯ ಮೂಲಕ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಅರ್. ರವರ ನೇತೃತ್ವದ ತಂಡ ಪತ್ತೆ ಮಾಡಿ ಮುಂದಿನ ಕಾನೂನು ಕ್ರಮದ ಬಗ್ಗೆ ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ರವರಿಗೆ ಹಸ್ತಾಂತರಿಸಿರುತ್ತಾರೆ.

ವಶಪಡಿಸಿಕೊಂಡ ಮರಳು ಮತ್ತು ನಾಡ ದೋಣಿಗಳ ಸಮೇತವಾಗಿ ಅಂದಾಜು ಮೌಲ್ಯ 17,00,000/- ಆಗಿರುತ್ತದೆ. ಅಕ್ರಮ ಮರಳು ಸಂಗ್ರಹಿಸಿರುವ ಸ್ಥಳವು ಯಾರಿಗೆ ಸಂಬಂಧಪಟ್ಟಿರುತ್ತದೆ ಎಂಬ ಬಗ್ಗೆ ಮತ್ತು ಆರೋಪಿತರುಗಳು ಮರಳನ್ನು ಎಲ್ಲಿಗೆ ಸಾಗಾಟ ಮಾಡಲು ಸಂಗ್ರಹಿಸಿಟ್ಟಿರುತ್ತಾರೆ ಎಂಬ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತನಿಖೆಯಿಂದ ತಿಳಿದುಕೊಳ್ಳಬೇಕಾಗಿರುತ್ತದೆ.

ಪೊಲೀಸ್ ಅಯುಕ್ತರು, ಮಂಗಳೂರು ನಗರ ರವರ ನಿರ್ದೇಶನದಂತೆ ಹಾಗೂ ಉಪ – ಪೊಲೀಸ್ ಆಯುಕ್ತರು (ಕಾ&ಸು) ಮತ್ತು ಉಪ – ಪೊಲೀಸ್ ಅಯುಕ್ತರು,(ಅಪರಾಧ ಮತ್ತು ಸಂಚಾರ) ರವರುಗಳ ಮಾರ್ಗದರ್ಶನದಂತೆ ಮಂಗಳೂರು ದಕ್ಷಿಣ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಅಯುಕ್ತರಾದ ಶ್ರೀ ರಾಮರಾವ್ ಕೆ ರವರ ಸೂಚನೆಯಂತೆ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಅರ್. ಅವರ ನೇತೃತ್ವದಲ್ಲಿ ಠಾಣಾ ಪಿಎಸ್ಐ ಗಳಾದ ವಿನಾಯಕ ತೋರಗಲ್ ಮತ್ತು ಗುರಪ್ಪ ಕಾಂತಿ, ಹಾಗೂ ಸಿಬ್ಬಂದಿಗಳಾದ ರಾಧಕೃಷ್ಣ ಎಎಸ್ಐ, ವಿಶ್ವನಾಥ ರೈ ಎಎಸ್ಐ, ದಿನೇಶ್ ಹೆಚ್ಸಿ 443, ಮನೋಹರ್ ಹೆಚ್ಸಿ 1112, ಪ್ರಶಾಂತ್ ಪಿಸಿ 561, ಪಿಸಿ 901 ಸುದರ್ಶನ್, 560 ಪೂರ್ವಾಚಾರ್, ಪಿಸಿ 386 ರಂಜಿತ್, ಲಿಂಗರಾಜ್ ಪಿಸಿ 553, ಆಶೋಕ್ ಪಿಸಿ 556 ರವರುಗಳು ಪತ್ತೆ ಕಾರ್ಯದಲ್ಲಿ ಸಹಕರಿಸಿರುತ್ತಾರೆ.


Spread the love