ಉಳ್ಳಾಲ ಪ್ರೀಮಿಯರ್ ಲೀಗ್-2018; ಉಳ್ಳಾಲ ರೋಯಲ್ ಚಾಲೆಂಜ್ ತಂಡ ಪ್ರಥಮ

Spread the love

ಉಳ್ಳಾಲ ಪ್ರೀಮಿಯರ್ ಲೀಗ್-2018; ಉಳ್ಳಾಲ ರೋಯಲ್ ಚಾಲೆಂಜ್ ತಂಡ ಪ್ರಥಮ

ಉಳ್ಳಾಲ: ಉಳ್ಳಾಲ ಕ್ರಿಕೆಟ್ ಬೋರ್ಡ್ ವತಿಯಿಂದ ಉಳ್ಳಾಲ ಪ್ರೀಮಿಯರ್ ಲೀಗ್-2018,ಸೀಸನ್ 5 ಮತ್ತುs ಯು.ಟಿ.ಫರೀದ್ ಮೆಮೋರಿಯಲ್ ಟ್ರೋಫಿ2018,ಶಾಂತಿಗಾಗಿ ಕ್ರೀಡೆ ಎಂಬ ಘೋಷಣೆಯೊಂದಿಗೆ ನಡೆದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಆಹಾರ ಸಚಿವ ಯು.ಟಿ,ಖಾದರ್ ಪಾಲ್ಗೊಂಡು ಬ್ಯಾಟಿಂಗ್ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಬಳಿಕ ಮಾತನಾಡಿದ ಅವರು ಈ ಕ್ರಿಕೆಟ್ ಪಂದ್ಯಾಟವು ಉಳ್ಳಾಲದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಡೆದ ಅದ್ದೂರಿಯಾದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವಾಗಿದೆ,ಈ ಪಂದ್ಯಾಟವು ಉಳ್ಳಾಲ ಕ್ಷೇತ್ರದ ಯುವಜನ ಸಮೂಹದ ಕಿರೀಟಕ್ಕೆ ಗರಿ ಆಗಿ ಪರಿವರ್ತನೆಯಾಗಿದೆ ಎಂದರು.

ರಾಜೀವ ಗಾಂಧಿ ಯುನಿವರ್ಸಿಟಿ ಸೆನೆಟ್ ಸದಸ್ಯ ಡಾ| ಇಫ್ತಿಕಾರ್ ಆಲಿ, ಉಳ್ಳಾಲ ನಗರ ಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಕಲ್ಲಾಪು,ಸದಸ್ಯರಾದ ಮುಸ್ತಫ ಅಬ್ದುಲ್ಲ, ಫಾರೂಕ್ ಉಳ್ಳಾಲ್, ಫಾರೂಕ್.ಯು.ಎಚ್, ಇಸ್ಮಾಯಿಲ್ ಪೊಡಿಮೋನು, ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್ ಉಳ್ಳಾಲ್,ಉಪಾಧ್ಯಕ್ಷ ಇಕ್ಬಾಲ್ ಕೆನರಾ,ಹನೀಫ್ ಬಿ.ಎಫ್.ಸಿ, ಪ್ರಧಾನ ಕಾರ್ಯದರ್ಶಿ ಫಯಾಝ್ ಪಟ್ಲ, ಜೊತೆ ಕಾರ್ಯದರ್ಶಿ ಅಬ್ದುಲ್ ರಝಾಕ್ ಸರ್ಮದ್, ಇಂತಿಯಾಝ್ ಬಿ.ಎಫ್.ಸಿ, ಕೋಶಾಧಿಕಾರಿ ನಝೀರ್ ಅಲ್ಫಾ , ಜಾತ್ಯಾತೀತ ಜನತಾ ದಳ ಉಳ್ಳಾಲ ನಗರ ಅಧ್ಯಕ್ಷ ಪುತ್ತುಮೋನು, ಉದ್ಯಮಿ ಹಸೈನಾರ್, ಆಸೀಫ್, ಕರಾವಳಿ ವಲಯ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಯು.ಬಿ ಸಲೀಂ, ಕಾಂಗ್ರೆಸ್ ಮುಖಂಡ ಫೈರೋಝ್ ಉಳ್ಳಾಲ್, ಮಂಗಳ ಸ್ಟೇಡಿಯಂ ಅಭಿವೃದ್ಧಿ ಸಮಿತಿಯ ನಿರ್ದೇಶಕ ಸಾಜಿದ್ ಉಳ್ಳಾಲ್ ಉಪಸ್ಥಿತರಿದ್ದರು.

ಉಳ್ಳಾಲ ರೋಯಲ್ ಚಾಲೆಂಜ್ ತಂಡ ಪ್ರಥಮ ಬಹುಮಾನ 1 ಲಕ್ಷ ಹಾಗೂ ಟ್ರೋಫಿ, ದ್ವಿತೀಯ ಬಹುಮಾನವನ್ನು ರಿಹಾ ವಾರಿಯರ್ಸ್ ತಂಡ 60 ಸಾವಿರ ರೂಪಾಯಿ ಹಾಗೂ ಟ್ರೋಪಿಯನ್ನು ಪಡೆಯಿತು.

ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು, ಸತ್ತಾರ್ ಉಳ್ಳಾಲ್ ದನ್ಯವಾದ ಗೈದರು.


Spread the love