ಎಪಿಡಿ ಪ್ರತಿಷ್ಠಾನಕ್ಕೆ ಯುನ್-ಹೆಬಿಟೇಟ್ ಅನುದಾನ

Spread the love

ಎಪಿಡಿ ಪ್ರತಿಷ್ಠಾನಕ್ಕೆ ಯುನ್-ಹೆಬಿಟೇಟ್ ಅನುದಾನ

ಯುನ್-ಹೆಬಿಟೇಟ್ ಮತ್ತು ನರೊತ್ತಮ್ ಸೆಕ್ಸರಿಯ ಪ್ರತಿಷ್ಠಾನ ಪ್ರತಿಷ್ಠಾಪಿಸಿದ ಪ್ರತಿಷ್ಠಿತ ಇಂಡಿಯ ಯೂತ್ ಫಂಡ್ ಪ್ರಶಸ್ತಿಯನ್ನು ನಗರದ ಲಾಭರಹಿತ ಸಂಸ್ಥೆ ಆಂಟಿ ಪೊಲ್ಯುಷನ್ ಡ್ರೈವ್ ಪ್ರತಿಷ್ಠಾನ ಪಡೆದುಕೊಂಡಿದೆ.

ಎಪಿಡಿ ಪ್ರತಿಷ್ಠಾನದ ಸ್ಮಾರ್ಟ್ ಸ್ವಚ್ಛ ಮಂಗಳೂರು ಅಭಿಯಾನಕ್ಕಾಗಿ ನೀಡಲಾದ ಪ್ರಶಸ್ತಿಯನ್ನು ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ಯಂಗ್ ಸೋಶಿಯಲ್ ಇನೊವೆಟರ್ಸ್ ಕಾನ್ ಕ್ಲೇವ್ ನಲ್ಲಿ ಪ್ರದಾನ ಮಾಡಲಾಯಿತು.

apd-foundation

ನರೊತ್ತಮ್ ಸೆಕ್ಸರಿಯ ಪ್ರತಿಷ್ಠಾನದ ನಿರ್ದೇಶಕ ಪದ್ಮಿನಿ ಸೊಮಾನಿ ಅವರಿಂದ ಎಡಿಪಿ ಫೌಂಡೇಶನ್ ಸ್ಥಾಪಕ ಅಬ್ದುಲ್ಲಾ ಎ ರೆಹಮಾನ್ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು ಗರಿಷ್ಠ ಎಂಟು ಲಕ್ಷ ರೂಪಾಯಿ ಅನುದಾನ ಹೊಂದಿದೆ.

ದೇಶಾದ್ಯಂತದ ಭಾಗವಹಿಸಿದ 550 ಸ್ಪರ್ಧಿಗಳಲ್ಲಿ ಪ್ರಶಸ್ತಿಗೆ ಭಾಜನರಾದ ಏಳು ಸಂಸ್ಥೆಗಳಲ್ಲಿ ಮಂಗಳೂರಿನ ಎಡಿಪಿ ಫೌಂಡೇಶನ್ ಒಂದಾಗಿದೆ. ಭೋಪಾಲದ ಅವಾಜ್ ಜನ ಕಲ್ಯಾಣ್ ಸಮಿತಿ, ದೆಹಲಿಯ ಮೈಕ್ರೊಎಕ್ಸ್ ಫೌಂಡೇಶನ್, ಗ್ರೀನ್ ಕ್ರಾಸ್ ಭಾರತ ತಿರುವನಂತಪುರ, ಬೋರ್ನ್ ಟು ವಿನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್, ಚೆನ್ನೈ, ಶೈಶವ್ ಗುಜರಾತ್ ಮತ್ತು ಪುಣೆಯ ಫ್ರೆಂಡ್ಸ್ ಯೂನಿಯನ್ ಫಾರ್ ಎನರ್ಜೈಸಿಂಗ್ ಲೈವ್ಸ್ ಇತರ ಪುರಷ್ಕೃತರು.

ಸ್ಮಾರ್ಟ್ ಸ್ವಚ್ಛ ಮಂಗಳೂರು ಅಭಿಯಾನಕ್ಕಾಗಿ ಮೂಲದಲ್ಲೇ ಕಸವನ್ನು ವಿಂಗಡಿಸಿ ನೀಡುವ ಜನಜಾಗೃತಿಗಾಗಿ ಕಾರ್ಯಾಗಾರಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಎಪಿಡಿ ನಡೆಸುತ್ತಿದೆ. ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಕಂಪೆನಿಯ ಐಇಸಿ ಚಟುವಟಿಕಗೆಳೊಂದಿಗೆ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

apd-foundation1

ನಿರ್ದಿಷ್ಟ ಸಹಭಾಗಿಗಳನ್ನು ಗುರಿಯಾಗಿರಿಸಿಕೊಂಡು ಮೂಲದಲ್ಲೇ ಕಸವನ್ನು ವಿಂಗಡಿಸಿ ನೀಡಲು ಕಾರ್ಯಗಾರ ಮತ್ತು ತರಬೇತಿಗಳನ್ನು ನಿರಂತರವಾಗಿ ನಡೆಸಿಕೊಂಡಿ ಬರಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು, ಸರಕಾರಿ ಕಟ್ಟಡಗಳು, ಕಚೇರಿ, ಮಾಲ್ ಇತ್ಯಾದಿಗಳಲ್ಲಿ ಸುಸ್ಥಿರ ಘನ ತ್ಯಾಜ್ಯ ವಿಲೇವಾರಿ ತಾಂತ್ರಿಕತೆಗಳನ್ನು ಕಾರ್ಯಗಾರ ಮತ್ತು ಟೂಲ್ ಕಿಟ್ ಮೂಲಕ ಪರಿಚಯಿಸಲಾಗುವುದು ಎಂದು ಎಪಿಡಿಯ ತಂತ್ರಜ್ಞ ಸೋಬಿಯ ತಿಳಿಸಿದ್ದಾರೆ.

ತ್ಯಾಜ್ಯ ಸಂಸ್ಕರಣ ತಾಂತ್ರಿಕತೆಯನ್ನು ತೈವಾನ್, ಜಪಾನ್, ಲಂಡನ್, ಸಿಂಗಾಪುರದಂತಹ ನಗರಗಳಲ್ಲಿ ಅಳವಡಿಸಲಾಗಿದೆ. ಇವನ್ನು ಮಂಗಳೂರು ನಗರದಲ್ಲಿ ಅಳವಡಿಸುವುದು ಒಂದು ಸವಾಲಾಗಿದೆ. ಮಂಗಳೂರಿನ ಜನತೆ ಘನತ್ಯಾಜ್ಯ ವಿಲೇವಾರಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಈ ಪ್ರಶಸ್ತಿಯು ಉತ್ತೇಜನ ನೀಡಲಿದೆ ಎಂದು ಎಪಿಡಿ ಪ್ರತಿಷ್ಠಾನದ ಸ್ಥಾಪಕ ಅಬ್ದುಲ್ಲಾ ಎ ರೆಹಮಾನ್ ಅಶಿಸಿದ್ದಾರೆ.


Spread the love