ಎಪಿಡಿ ಫೌಂಡೇಶನ್ ಉಸಿರಾಟ ಕ್ರಿಯೆಯ ಪರೀಕ್ಷೆ – ಹಂತ 2

Spread the love

ಎಪಿಡಿ ಫೌಂಡೇಶನ್ ಉಸಿರಾಟ ಕ್ರಿಯೆಯ ಪರೀಕ್ಷೆ – ಹಂತ 2

  • ಆಟೋ ರಿಕ್ಷಾ ಚಾಲಕರ ತಪಾಸಣೆ

ಮಂಗಳೂರು: ಮಂಗಳೂರು ಟ್ರಾಫಿಕ್ ಪೋಲಿಸರ ಉಸಿರಾಟ ಕ್ರಿಯೆಯ ಪರೀಕ್ಷೆ (ಪಿಎಫ್‍ಟಿ) ಸಂಘಟಿಸಿದ ನಂತರ, ಆಂಟಿ ಪಲ್ಯೂಶನ್ ಡ್ರೈವ್ (ಎಪಿಡಿ) ಫೌಂಡೇಶನ್ ನಗರದ ಆಟೋ ರಿಕ್ಷಾ ಚಾಲಕರ ಮೇಲೆ ವಾಯು ಮಾಲಿನ್ಯದ ಪರಿಣಾಮವನ್ನು ಅಳೆಯಲು ಹಂತ-2ನ್ನು ಪ್ರಾರಂಭಿಸಿದೆ. ಈ ಪ್ರಾಜೆಕ್ಟ್ ಅನ್ನು ಎಪಿಡಿ ಫೌಂಡೇಶನ್‍ನಲ್ಲಿ ಶಿಷ್ಯವೃತ್ತಿಯನ್ನು ಪಡೆಯುತ್ತಿರುವ ಬೆಂಗಳೂರಿನ ಐಎಫ್‍ಐಎಮ್‍ನ ವಿದ್ಯಾರ್ಥಿ ವೃಂದದವರೊಂದಿಗೆ ಕಳೆದ ವಾರ ಪ್ರಾರಂಭಿಸಲಾಯಿತು.

ಈ ಅಧ್ಯಯನವನ್ನು ಫಾ|| ಮುಲ್ಲರ್ಸ್‍ನ ಉಸಿರಾಟ ತಜ್ಞರಾಗಿರುವ ಡಾ. ಡಾನ್ ಗ್ರೆಗೋರಿಯವರ ಮಾರ್ಗದರ್ಶನದಲ್ಲಿ ಸಂಘಟಿಸಲಾಯಿತು, ರಿಕ್ಷಾ ಚಾಲಕರು ಹೊರಗಡೆ ಕೆಲಸ ಮಾಡುವವರರಾಗಿದ್ದು ಇವರು ನಿರಂತರವಾಗಿ ವಾಯು ಮಾಲಿನ್ಯಕ್ಕೆ ಮತ್ತು ಅದರ ಮಾರಣಾಂತಿಕ ಕಾಯಿಲೆಗಳಿಗೆ ಒಡ್ಡಿಕೊಳ್ಳುತ್ತಾರೆ. ಲ್ಯೂಪಿನ್ ಫಾರ್ಮಾಸಿಯುಟಿಕಲ್ಸ್‍ನ ಸುಜಿತ್ ಕುಮಾರ್‍ರವರು ಸ್ಪಿರೋಮೀಟರ್‍ನೊಂದಿಗೆ ಡೇಟಾವನ್ನು ಸಂಗ್ರಹ ಮಾಡುತ್ತಿದ್ದಾರೆ. ಈ ಅಧ್ಯಯನವು ನಮಗೆ ಭವಿಷ್ಯದಲ್ಲಿ ಮಂಗಳೂರು ನಗರದ ಮೇಲೆ ವಾಯು ಮಾಲಿನ್ಯದ ಪರಿಣಾಮವನ್ನು ಮೌಲ್ಯಮಾಪನ ಮಾಡುಲು ಸಹಕಾರಿಯಾಗುತ್ತದೆ.

ಸುಮಾರು 500 ರಿಕ್ಷಾ ಚಾಲಕರುಗಳ ಗುರಿಯನ್ನು ಹೊಂದಿದ್ದು, ಅದರ ಪೈಕಿ 250 ಚಾಲಕರನ್ನು ಈಗಾಗಲೇ ತಪಾಸಣೆ ಮಾಡಲಾಗಿದೆ ಮತ್ತು ಅವರ ವಯಸ್ಸು, ಸೇವೆಯ ವರ್ಷಗಳು, ಧೂಮಪಾನಿಗಳು / ಧೂಮಪಾನಿಗಳಲ್ಲದವರು, ಅಸ್ತಮಾ ಇತಿಹಾಸ, ಕುಟುಂಬದ ಉಸಿರಾಟದ ಇತಿಹಾಸ ಮತ್ತು ತೂಕದಂತಹ ಡೇಟಾವನ್ನು ಸಂಗ್ರಹಣೆ ಮಾಡಲಾಯಿತು. ಉಳಿದ ಚಾಲಕರನ್ನು ತಪಾಸಣೆ ಮಾಡಲಾಗುವುದು.

ಇತ್ತೀಚೆಗೆ ಆಂಟಿ-ಪಲ್ಯೂಶನ್ ಡ್ರೈವ್ (ಎಪಿಡಿ) ಫೌಂಡೇಶನ್ ತಮ್ಮ ಯೋಜನೆಯಾಗಿರುವ ಶುದ್ಧ ಗಾಳಿ ಎನ್ನುವ ಪ್ರಾಜೆಕ್ಟ್‍ನ ಅಡಿಯಲ್ಲಿ ಮಂಗಳೂರಿನ ವಾಯು ಗುಣಮಟ್ಟವನ್ನು ಮೌಲ್ಯಮಾಪನ ಮಾಡಿತ್ತು ಮತ್ತು ನಗರದ ಹಲವಾರು ಪ್ರದೇಶಗಳಲ್ಲಿ ಕಳಪೆಯಾಗಿರುವ ವಾಯು ಗುಣಮಟ್ಟವನ್ನು ಗಮನಿಸಲಾಗಿತ್ತು.
“ವಾಯು ಮಾಲಿನ್ಯವು ದೇಶದಲ್ಲಿ ಬೃಹತ್ತಾಗಿ ಬೆಳೆಯುತ್ತಿರುವ ಸಮಸ್ಯೆಯಾಗಿದೆ. ನಮ್ಮ ಪರಿಸರ ಮತ್ತು ಅದರ ಜನತೆಯ ಮೇಲೆ ಆದ ಪರಿಣಾಮವನ್ನು ತೋರಿಸುವ ಯಾವುದೇ ಡೇಟಾ ಲಭ್ಯವಿಲ್ಲದೇ ಇರುವುದು ನಮ್ಮ ಕಳಕಳಿಗೆ ಕಾರಣವಾಗಿದೆ. ನಮ್ಮ ಡೇಟಾ ಮತ್ತು ಅಂಕಿ-ಅಂಶಗಳು ವ್ಯವಸ್ಥೆಯಲ್ಲಿನ ಕೊರತೆಯನ್ನು ನೀಗಿಸಬಹುದು. ನಮ್ಮ ಕಾನೂನು ಮತ್ತು ನೀತಿ ನಿರೂಪಕರಿಗೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ ನಗರದ ಮೇಲೆ ವಾಯು ಮಾಲಿನ್ಯ ಮತ್ತು ಅದರ ಏರುಗತಿಯ ಪರಿಣಾಮಗಳನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ನಾವು ನಂಬಿದ್ದೇವೆ,” ಎಂದು ಎಪಿಡಿ ಫೌಂಡೇಶನ್‍ನ ಸಂಸ್ಥಾಪಕರಾದ ಶ್ರೀಯುತ ಅಬ್ದುಲ್ಲಾ ಎ. ರೆಹಮಾನ್‍ರವರು ತಿಳಿಸಿದರು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಶ್ರೀಯುತ ಅಬ್ದುಲ್ಲಾ ಎ. ರೆಹಮಾನ್ 9740000008


Spread the love