ಎಸ್.ಡಿ.ಎಮ್. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ (ಮಂಜುಶ್ರೀ ಬ್ಲಾಕಿನ ) ಉದ್ಘಾಟನಾ ಸಮಾರಂಭ: 29-08-2015

Spread the love

ಧರ್ಮಸ್ಥಳ: ಎಸ್.ಡಿ.ಎಮ್. ಆಸ್ಪತ್ರೆಯು ಹನ್ನೆರಡು ವರ್ಷಗಳ ಅಮೋಘ ಸೇವೆಯನ್ನು ಸಂಪೂರ್ಣಗೊಳಿಸಿದೆ. ಕೇವಲ 300 ಹಾಸಿಗೆಗಳಿಂದ ಪ್ರಾರಂಭವಾದ ಈ ಆಸ್ಪತ್ರೆಯಲ್ಲಿ ಇಂದು ಹೆಚ್ಚಿನ ಮೂಲಭೂತ ಸೌಕರ್ಯಗಳು ಇದ್ದು – 1300 ಒಳರೋಗಿಗಳ ಹಾಸಿಗೆಗಳು, 20 ಶಸ್ತ್ರಚಿಕಿತ್ಸಾ ಮಂದಿರಗಳು, 170 ತೀವ್ರನಿಗಾ ಹಾಸಿಗೆಗಳು, 24 ವಿಶೇಷ ವಿಭಾಗಗಳು ಹಾಗೂ ಸೂಪರ್ ಸ್ಪೆಷಾಲಿಟಿಗಳನ್ನು ಒಳಗೊಂಡಿದೆ. ವರ್ಷದಿಂದ ವರ್ಷಕ್ಕೆ 15% ರಿಂದ 30% ಪ್ರತಿಶತ ಬೆಳವಣಿಗೆಯನ್ನು ಕಂಡ ಈ ಆಸ್ಪತ್ರೆಯು ವೈದ್ಯಕೀಯ ರಂಗದಲ್ಲಿ ವಿಶೇಷ ಹೆಸರು ಮಾಡಿದೆ.

ಪ್ರತಿ ವರ್ಷ 4 ಲಕ್ಷ ಹೊರರೋಗಿಗಳು ಮತ್ತು 45 ಸಾವಿರ ಒಳರೋಗಿಗಳು ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳಿಂದ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ.

ಸೂಪರ್ ಸ್ಪೆಷಾಲಿಟಿ ಸೇವೆಗಳು ಅವಶ್ಯಕ ಇರುವ ರೋಗಿಗಳ ಹೆಚ್ಚಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮಂಜುಶ್ರೀ ಸೂಪರ್ ಸ್ಪೆಷಾಲಿಟಿ ವಿಭಾಗವನ್ನು ತೆರೆಯಲಾಯಿತು. ಮೂರು ಲಕ್ಷ 60 ಸಾವಿರ ಚದರಡಿ ವಿಸ್ತಾರದ ಇಲ್ಲಿ 400 ಒಳರೋಗಿ ಹಾಸಿಗೆಗಳು ಇವೆ. ಉತ್ತರ ಕರ್ನಾಟಕದ ಕಡು ಬಡವರಿಗೂ ಸೂಪರ್ ಸ್ಪೆಷಾಲಿಟಿ ಸೇವೆಗಳು ನಿಲುಕುವಂತಾಗಬೇಕೆಂಬ ರಾಜರ್ಷಿ ವೀರೇಂದ್ರ ಹೆಗ್ಗಡೆಯವರ ಆಶಯವು ಇಲ್ಲಿ ಸಾರ್ಥಕವಾಗಿದೆ. ಹೆಸರಾಂತ ವಾಸ್ತುಶಿಲ್ಪಿ ಶ್ರೀಯುತ ಶಿರೀಶ್ ಬೆರ್ರಿಯವರ ವಿನ್ಯಾಸ ಇರುವ ಈ ಆಸ್ಪತ್ರೆಯ – ಸೌಧದಲ್ಲಿ ರೋಗಿಯು ಗುಣಮುಖನಾಗಲು ಬೇಕಾಗುವ ಎಲ್ಲಾ ಸೌಲಭ್ಯಗಳು, ಸ್ವಾಭಾವಿಕವಾದ ಬೆಳಕು, ಗಾಳಿ, ಹಸಿರು, ನೀರಿನ ಪುನರ್ಬಳಕೆ, ವಿದ್ಯುತ್‍ನ್ನು ಮಿತವಾಗಿ ಬಳಸುವ ಬೆಳಕು ಮತ್ತು ಶಾಖದ ಉಪಯೋಗ ಹೀಗೆ ಒಟ್ಟಾರೆ ಹಸಿರು ಮೂಲತತ್ವವನ್ನು ಆಧರಿಸಿದ ಆಧುನಿಕ ವೈಶಿಷ್ಟ್ಯಗಳು ಇವೆ. ಇನ್ನೊಂದು ವಿಶೇಷವೆಂದರೆ; ಪ್ರತಿ ಮಜಲಿನಲ್ಲಿ ಇರುವ ಸ್ಪೆಷಾಲಿಟಿ ಸೇವೆಗೆ ಬೇಕಾದ ಸೌಲಭ್ಯಗಳು ಆಯಾ ಮಹಡಿಯಲ್ಲಿಯೇ ದೊರೆಯುವಂತೆ ಮಾಡಿರುವುದು ರೋಗಿಗಳ ಹಿತದೃಷ್ಟಿಯಿಂದ ರಚಿಸಲಾದ ದೂರದೃಷ್ಟಿಯ ಪ್ರತೀಕವಾಗಿದೆ.

 ಸೌಲಭ್ಯಗಳು:

  • ಎನ್.ಎ.ಬಿ.ಎಚ್. ಗೆ ಅನುಗುಣವಾದ 8 ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಮಂದಿರಗಳು – ಇವು ಲ್ಯಾಮಿನಾರ್ ಫ್ಲೋ ಹಾಗೂ ಹೆಪಾ ಫಿಲ್ಟರ್‍ಗಳನ್ನು ಹೊಂದಿದ್ದು, ಸಂಕೀರ್ಣವಾದ ಹೃದಯ ಶಸ್ತ್ರಚಿಕಿತ್ಸೆಗಳು, ಅತಿ ಸೂಕ್ಷ್ಮ ಧಮನಿಗಳ ಶಸ್ತ್ರಚಿಕಿತ್ಸೆಗಳು (ಒiಛಿಡಿo-ಗಿಚಿsಛಿuಟಚಿಡಿ Suಡಿgeಡಿies) ಕೀಲಿನ ಪುನರ್ಜೋಡಣೆ, ಅರ್ಬುದಕ್ಕೆ ಶಸ್ತ್ರಕ್ರಿಯೆ (ಅಚಿಟಿಛಿeಡಿ Suಡಿgeಡಿಥಿ) ಹಾಗೂ ಮೂತ್ರ ಜನಕಾಂಗ ಮತ್ತು ಹೃದಯದ ಕಸಿಮಾಡುವ ಶಸ್ತ್ರಚಿಕಿತ್ಸೆಗಳು.
  • ಹೃದಯದ ಧಮನಿ ನಳಿಕಾ ಪರೀಕ್ಷೆಯ 2 ಪ್ರಯೋಗ ಶಾಲೆಗಳು (ಅಚಿಡಿಜiಚಿಛಿ ಅಚಿಣheಣeಡಿizಚಿಣioಟಿ ಐಚಿb)
  •  90 ಅತ್ಯಾಧುನಿಕ ತೀವ್ರನಿಗಾ ಘಟಕದ ಭಾಗಗಳು
  • 90 ವಿಶೇಷ ಹಾಗೂ ಐಷಾರಾಮಿ ಕೊಠಡಿಗಳು
  • ಕೇಂದ್ರೀಯ ಹವಾನಿಯಂತ್ರಣ, ವೈದ್ಯಕೀಯ ಅನಿಲಗಳ ನಳಿಕಾ ಸರಬರಾಜಿನ ವ್ಯವಸ್ಥೆ, ಜೊತೆಗೆ 100 ಪ್ರತಿಶತ ಪರ್ಯಾಯ ವಿದ್ಯುತ್

ವ್ಯವಸ್ಥೆ.

  •  ಸ್ಟೆಮ್ ಜೀವಕೋಶಗಳ ಸಂಶೋಧನೆ, ಮತ್ತು ಸ್ಟೆಮ್ ಜೀವಕೋಶ ಚಿಕಿತ್ಸಾ ಘಟಕ
  • 250 ಆಸನಗಳುಳ್ಳ ಸಭಾಂಗಣ
  • ಭೌತಿಕ ಚಿಕಿತ್ಸಾ ಘಟಕಗಳು
  • ನೆಲಮಾಳಿಗೆಯಲ್ಲಿ 150 ವಾಹನ ನಿಲುಗಡೆ
  • ಸೂಪರ್ ಸ್ಪೆಷಾಲಿಟಿಯಲ್ಲಿ ತರಬೇತಿ ವ್ಯವಸ್ಥೆ
  • ದೇಶದ ಅತ್ಯುತ್ತಮ ಕೇಂದ್ರಗಳಲ್ಲಿ ನುರಿತ ವೈದ್ಯ ವಿಶೇಷಜ್ಞರು

ಸೂಪರ್ ಸ್ಪೆಷಾಲಿಟಿ ಸೇವೆಗಳು:

  1. ಸ್ವರೂಪ ಶಸ್ತ್ರಚಿಕಿತ್ಸೆ ಮತ್ತು ಪುನರ್ರಚನಾ ಶಸ್ತ್ರಚಿಕಿತ್ಸಾ ವಿಭಾಗ:

ಜನ್ಮಜಾತ ನ್ಯೂನತೆಗಳ ಸರಿಪಡಿಸುವ ಸೌಲಭ್ಯ, ಮುಖದ ಆಘಾತ, ರಕ್ತನಾಳ / ನರದ ಗಾಯಗಳು, ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳು, ಅರ್ಬುದ ರೋಗದ ವಿಕಾರಕ್ಕೆ ಅಂಗಾಂಶ ಜೋಡಣೆ.

  1. ನರಗಳ ಶಸ್ತ್ರಚಿಕಿತ್ಸೆ:  ಶಿರ ಮತ್ತು ಬೆನ್ನುಹುರಿಯ ಆಘಾತಗಳಿಗೆ ಚಿಕಿತ್ಸೆ, ಮೆದುಳು ಮತ್ತು ಬೆನ್ನು ಹುರಿಯ ಗಡ್ಡೆ-ಗಂಟುಗಳು, ಜನ್ಮಜಾತ ತೊಂದರೆಗಳು, ಸ್ಥೂಲಗಾತ್ರದ ರಕ್ತನಾಳ ಇವುಗಳ ಶಸ್ತ್ರಚಿಕಿತ್ಸೆಗಳಿಗಾಗಿ ಆಧುನಿಕ ವ್ಯವಸ್ಥೆ, ಶಸ್ತ್ರಚಿಕಿತ್ಸಾ ಸೂಕ್ಷ್ಮದರ್ಶಕ ಹಾಗೂ ನರಗಳ ಅಂತರ್‍ದರ್ಶಕಗಳು.
  1. ನರರೋಗ ಚಿಕಿತ್ಸೆ: ತಲೆನೋವು, ಲಕ್ವಾ, ಚಲನೆಯ ಅವ್ಯವಸ್ಥೆಯ ಕಾಯಿಲೆ, ನರದ ಮಾಂಸಪೇಶಿಯ ಅವ್ಯವಸ್ಥೆಯ ಕಾಯಿಲೆ ಹಾಗೂ ಮರೆವಿನ ಕಾಯಿಲೆಗಳಿಗೆ ಚಿಕಿತ್ಸೆ. ಇ.ಇ.ಜಿ, ಎನ್.ಸಿ.ಎಸ್., ಇ.ಎಮ್.ಜಿ., ವಿ.ಇ.ಪಿ., ಮತ್ತು ನಿದ್ರಾಪರೀಕ್ಷೆಯ ಯಂತ್ರ ಸೌಲಭ್ಯಗಳು ಇವೆ.
  1. ಮೂತ್ರಜನಕಾಂಗ ಶಸ್ತ್ರಚಿಕಿತ್ಸೆ: ಮೂತ್ರಜನಕಾಂಗದ ಹರಳುಗಳು, ಪ್ರಾಸ್ಟೇಜ್ ತೊಂದರೆ, ಅರ್ಬುದ ಶಸ್ತ್ರಚಿಕಿತ್ಸೆ, ಮೂತ್ರಾಂಗ ವ್ಯೂಹದ ನರಗಳ ಹಿಡಿತ, ಪುರುಷ ಬಂಜೆತನ, ಮೂತ್ರಕೋಶದ ಕ್ರಿಯಾ ಅವ್ಯವಸ್ಥೆ ಇವುಗಳಿಗೆ ಚಿಕಿತ್ಸಾ ಸೌಲಭ್ಯಗಳು, ಚಿಕಿತ್ಸೆಗೆ ಪೂರಕವಾಗಿ ಅಂತರ್ದರ್ಶಕ, ಉದರದರ್ಶಕ, ಮೂತ್ರಕೋಶದ ಹರಳುಗಳ ಅಶ್ಮರೀನುರಿಕೆ ಮತ್ತು ಮೂತ್ರಾಂಗ ವ್ಯೂಹದ ಕ್ರಿಯಾತ್ಮಕ ಲ್ಯಾಬ್.
  1. ಮುಂದುವರಿದ ಮೂಳೆ ಚಿಕಿತ್ಸೆ: ಭುಜದ ಕೀಲು, ಮೊಣಕಾಲು, ಸೊಂಟ ಮತ್ತು ಪಾದದ ಕೀಲುಗಳ ದರ್ಶಕ ಹಾಗೂ ಸ್ಕೋಪುಗಳು, ಭುಜ, ಮೊಣಕಾಲು ಮತ್ತು ಸೊಂಟದ ಕೀಲುಗಳ ಪುನರ್ಜೋಡಣೆ, ಕ್ರೀಡಾ ವೈದ್ಯಕೀಯ, ಬೆನ್ನುಹುರಿಯ ಶಸ್ತ್ರಚಿಕಿತ್ಸೆ, ಮಕ್ಕಳ ಮೂಳೆ / ಕೀಲುಗಳ ಶಸ್ತ್ರಚಿಕಿತ್ಸೆ.

ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ಈ ಕೆಳಕೆಂಡ ಸೇವೆಗಳನ್ನು ನೀಡಲಾಗುತ್ತದೆ:

  1. ಹೃದಯರೋಗ ಚಿಕಿತ್ಸೆ:

ಸೌಲಭ್ಯಗಳು:

*     ಈಕೋ ಕಾರ್ಡಿಯೋಗ್ರಫಿ, ಒತ್ತಡ ಪರೀಕ್ಷೆ / ಟಿ.ಎಮ್.ಟಿ., ಹೊಲ್ಟರ್ ಅವಲೋಕನ

*     ಎಲೆಕ್ಟ್ರೋ ಫಿಜಿಯೋಲಾಜಿ

*      ಹೃದಯದ ತೀವ್ರನಿಗಾ ಘಟಕ

*      ಪೇಸ್‍ಮೇಕರ್ ಅಳವಡಿಕೆ

ಹೃದಯದ ನಳಿಕಾ ಅವಲೋಕನದ ಲ್ಯಾಬ್‍ನಲ್ಲಿ – ಆಂಜಿಯೋಗ್ರಫಿ, ಆಂಜಿಯೋಪ್ಲಾsಸ್ಟಿ, ವ್ಯಾಲ್ವುಲೋಪ್ಲಾಸ್ಟಿ, ರೇಡಿಯೋಫ್ರೀಕ್ವೆನ್ಸಿ ಅಬ್ಲೇಷನ್ ಹಾಗೂ ಡಿವೈಸ್ ಕ್ಲೋಜರ್ಸ್ ಇತ್ಯಾದಿ.

7. ಹೃದಯ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸೆ:

ಇಲ್ಲಿ ಹೃದಯದ ಬೈಪಾಸ್ ಸರ್ಜರಿ, ಮಿಡಿಯುತ್ತಿರುವ ಹೃದಯದ ಶಸ್ತ್ರಚಿಕಿತ್ಸೆ, ಹೃದಯದ ಕವಾಟಗಳ ಶಸ್ತ್ರಚಿಕಿತ್ಸೆ, ಸಂಕೀರ್ಣ ಜನ್ಮಜಾತ ಹೃದಯದ ಶಸ್ತ್ರಚಿಕಿತ್ಸೆ, ಎದೆಗೂಡಿನ ಶಸ್ತ್ರಚಿಕಿತ್ಸೆ, ರಕ್ತನಾಳಗಳ ಶಸ್ತ್ರಚಿಕಿತ್ಸೆ ಹಾಗೂ ಕನಿಷ್ಟ ಆಘಾತದ ಹೃದಯದ ಶಸ್ತ್ರಚಿಕಿತ್ಸೆ ಇವುಗಳನ್ನು ಮಾಡಲಾಗುತ್ತದೆ.

ಉಪಸಂಹಾರ:-

ಎಸ್.ಡಿ.ಎಮ್. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 30% ಪ್ರತಿಶತ ರೋಗಿಗಳಿಗೆ ನಾನಾತರದ ಸರ್ಕಾರಿ ವಿಮಾ ಸೌಲಭ್ಯಗಳಾದ – ಯಶಸ್ವಿನಿ, ಆರೋಗ್ಯಭಾಗ್ಯ, ಬಾಲಸಂಜೀವಿನಿ, ಇ.ಎಸ್.ಐ. – ಇವುಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 60% ಪ್ರತಿಶತ  ರೋಗಿಗಳಿಗೆ ಹೆಚ್ಚಿನ ರಿಯಾಯ್ತಿ ದರದಲ್ಲಿ ಸೇವೆ ಮಾಡುತ್ತಿರುವುದರಿಂದ ಉತ್ತರ ಕರ್ನಾಟಕದ ಭಾಗದಲ್ಲಿರುವ ಜನ ಸಾಮಾನ್ಯರಿಗೆ ಅತ್ಯಂತ ಉತ್ತಮ ಗುಣಮಟ್ಟದ ಸೇವೆಗಳು ಲಭ್ಯವಾಗಿವೆ.


Spread the love