ಎಸ್ಪಿಬಿಗೆ ಕೊರೋನಾ ನೆಗೆಟಿವ್ ಬಂದಿರೋದು ಸುಳ್ಳು! ವದಂತಿ ಹರಡಬೇಡಿ ಎಂದ ಪುತ್ರ ಚರಣ್
ಖ್ಯಾತ ಹಿನ್ನೆಲೆ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ (ಎಸ್ಪಿಬಿ) ಅವರಿಗೆ ಕೊರೋನಾ ನೆಗೆಟಿವ್ ಬಂದಿದೆ ಎಂಬ ವದಂತಿಗಳು ಹರಿದಾಡಿದ ಕೆಲವೇ ಗಂಟೆಗಳ ಬಳಿಕ ಇದೀಗ ಅವರ ಪುತ್ರ ಎಸ್ಪಿ ಚರಣ್ ಸ್ಪಷ್ಟೀಕರಣ ನೀಡಿದ್ದಾರೆ.
ಫೇಸ್ಬುಕ್ ನಲ್ಲಿ ವೀಡಿಯೊ ಹೇಳಿಕೆ ಬಿಡುಗಡೆ ಮಾಡುವ ಮೂಲಕ “ಅಪ್ಪನಿಗೆ ಕೋವಿಡ್ ನೆಗೆಟಿವ್ ಬಂದಿದೆ ಎಂಬ ಮಾಹಿತಿ ನನ್ನಿಂದ ಹೇಳಲ್ಪಟ್ಟದ್ದಲ್ಲ. ವದಂತಿಗಳನ್ನು ಹರಡದಿರಿ, ವದಂತಿಗಳಿಗೆ ಕಿವಿ ಕೊಡದಿರಿ” ಎಂದು ಚರಣ್ ಹೇಳಿದ್ದಾರೆ.
ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಎಸ್ಪಿ ಚರಣ್ ಅವರು ಆಸ್ಪತ್ರೆಯಿಂದ ಎಸ್ಪಿಬಿಯ ಆರೋಗ್ಯ ಸ್ಥಿತಿಯ ಬಗ್ಗೆ ನೇರ ಮಾಹಿತಿ ಪಡೆಯುವ ಏಕೈಕ ವ್ಯಕ್ತಿ ನಾನು. . “ನಾನು ಸಾಮಾನ್ಯವಾಗಿ ಆಸ್ಪತ್ರೆಯ ವೈದ್ಯಕೀಯ ತಂಡದೊಂದಿಗೆ ಚರ್ಚಿಸಿದ ನಂತರ ಅಪ್ಪನವರ ಆರೋಗ್ಯ ಸ್ಥಿತಿಯ ಬಗೆಗೆ ಪೋಸ್ಟ್ ಮಾಡುತ್ತೇನೆ. ಆದರೆ ದುರದೃಷ್ಟವಶಾತ್, ನಾನು ಬೆಳಿಗ್ಗೆ ಒಂದು ಪೋಸ್ಟ್ ಹಾಕಲು ಒತ್ತಡದಲ್ಲಿದ್ದೆ”
ಸೋಮವಾರ, ಎಸ್ಪಿಬಿ ಕೊರೋನಾವೈರಸ್ ನೆಗೆಟಿವ್ ವರದಿ ಸಿಕ್ಕಿದೆ ಎನ್ನುವ ವದಂತಿ ಎಲ್ಲೆಡೆ ಹರಡುತ್ತಿದೆ. ಇದು ದುರದೃಷ್ಟಕರ. “ಕೋವಿಡ್ ನೆಗೆಟಿವ್ ಅಥವಾ ಪಾಸಿಟಿವ್ ಏನೇ ಆಗಿದ್ದರೂ ಆರೋಗ್ಯ) ಸ್ಥಿತಿ ಇನ್ನೂ ಹಾಗೆಯೇ ಇದೆ, ” ಎಂದು ಅವರು ಹೇಳಿದರು. ಎಸ್ಪಿಬಿ ಅವರಿಗೆ ಲೈಫ್ ಸಪೋರ್ಟ್ ಅನ್ನು ಮುಂದುವರಿಸಲಾಗಿದೆ. , ಆದರೆ ಅವರ ಪ್ರಮುಖ ಆರೋಗ್ಯ ಸ್ಥಿತಿ ಸ್ಥಿರವಾಗಿವೆ. ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ತಂಡದೊಂದಿಗೆ ಚರ್ಚಿಸಿದ ನಂತರ ಇಂದು ಸಂಜೆ ಗಾಯಕನ ಆರೋಗ್ಯದ ಬಗ್ಗೆ ವಿವರ ನೀಡುತ್ತೇನೆ ಎಂದು ಅವರು ಹೇಳಿದರು.
ಗಾಯಕ ಎಸ್ಪಿಬಿ ಆಗಸ್ಟ್ 5 ರಂದು ಚೆನ್ನೈನ ಎಂಜಿಎಂ ಹೆಲ್ತ್ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಎದೆಯ ನೋವಿನ ಸಾಂಬಂಧ ಸಮಸ್ಯೆ ತೋರಿದ ನಂತರ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ವೇಳೆ ಗಾಯಕನಿಗೆ ಕೊರೋನಾ ಇರುವುದು ದೃಢವಾಗಿತ್ತು.