ಏ. ಜೆ. ದಂತ ವೈದ್ಯಕೀಯ ಕಾಲೇಜಿನ ೧೦ ನೇಯ ಘಟಿಕೋತ್ಸವ ಹಾಗು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ
ಮಂಗಳೂರಿನ ಏ ಜೆ ವೈದ್ಯಕೀಯ ಕಾಲೇಜಿನ ೧೦ ನೇಯ ಘಟಿಕೋತ್ಸವ ಹಾಗು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ನವೆಂಬರ್ ೨೩ ರಂದು ಸಂಜೆ ೫.೦೦ ಘಂಟೆಗೆ ಏ ಜೆ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಜರಗಿತು.
“ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ” ಎಂದು ಶ್ರೀ ಅರುಣ್ ಚಕ್ರವರ್ತಿ, ಐ. ಪಿ. ಎಸ್ , ಐ. ಜಿ. ಪಿ. ಪಶ್ಚಿಮ ವಲಯ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂದರ್ಭದಲ್ಲಿ ಹೇಳಿದರು. ತಂತ್ರಜ್ಞಾನವನ್ನು ವೃತ್ತಿ ಜೀವನದಲ್ಲಿ ಪ್ರಗತಿಗಾಗಿ ಉಪಯೋಗಿಸಬೇಕೆಂದು ಕರೆ ನೀಡಿದರು. ತಮ್ಮ ವೃತ್ತಿ ಜೀವನದಲ್ಲಿ ಸೇವಾಮನೋಭಾವವನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಅರ್ಥೈಸಿದರು.
“ದಂತ ವೈದ್ಯಕೀಯದಲ್ಲಿ ವಿವಿಧ ಉದ್ಯೋಗ ಅವಕಾಶಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗು ವಿಭಿನ್ನವಾಗಿ ಯೋಚಿಸಬೇಕು” ಎಂದು ಪ್ರೊ. ಡಾ. ಯು. ಎಸ್. ಕೃಷ್ಣ ನಾಯಕ್ ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿದ ಪ್ರೊ. ಡಾ. ಎಸ್. ಕೃಷ್ಣ ನಾಯಕ್ ಗ್ರಾಮೀಣ ಸೇವೆಯ ಬಗ್ಗೆ ಕಾಳಜಿ ವಹಿಸುವಂತೆ ವಿದ್ಯಾರ್ಥಿಗಳ ಮನವೊಲಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಅರುಣ್ ಚಕ್ರವರ್ತಿ, ಐ. ಪಿ. ಎಸ್. , ಐ. ಜಿ. ಪಿ. ಪಶ್ಚಿಮ ವಲಯ, ಗೌರವ ಅತಿಥಿಗಳಾಗಿ ಪ್ರೊ. ಡಾ. ಯು. ಎಸ್. ಕೃಷ್ಣ ನಾಯಕ್, ಡೀನ್, ಏ ಬಿ ಶೆಟ್ಟಿ ಮೆಮೋರಿಯಲ್ ಡೆಂಟಲ್ ಕಾಲೇಜು. ಭಾಗವಹಿಸಿದ್ದರು. ಹಾಗು ಡಾ. ಏ. ಜೆ ಶೆಟ್ಟಿ, ಅಧ್ಯಕ್ಷರು – ಲಕ್ಷ್ಮಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ವೈ. ಭರತ್ ಶೆಟ್ಟಿ ಸಭೆಯನ್ನು ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಪ್ರೊ. ಡಾ. ರಾಘವೇಂದ್ರ ಕಿಣಿ, ವಾರ್ಷಿಕ ವರದಿಯನ್ನು ಸಲ್ಲಿಸಿದರು. ಪ್ರೊ. ಡಾ. ನಿಲನ್ ಶೆಟ್ಟಿ ವಂದನಾರ್ಪಣೆ ಗೈದರು.
ಕಾಲೇಜಿನ ೧೦೦ ರಷ್ಟು ವಿದ್ಯಾರ್ಥಿಗಳು ಬಿ.ಡಿ. ಎಸ್ ಹಾಗು ೪೦ ರಷ್ಟು ವಿದ್ಯಾರ್ಥಿಗಳು ಸ್ನಾತಕೋತ್ತರ ಎಂ. ಡಿ. ಎಸ್ ಪದವಿಯನ್ನು ಪಡೆದರು.