ಮ0ಗಳೂರು ;- ಮಂಗಳೂರಿನ ವೈವಿದ್ಯಮಯ ಜೀವನ ಪದ್ದತಿಗಳನ್ನು ನಾಡಿಗೆ ಪರಿಚಯಿಸುವ ದಿಕ್ಕಿನಲ್ಲಿ ಏಪ್ರಿಲ್ 2 ಮತ್ತು 3 ರಂದು ನಗರದ ಕರಾವಳಿ ಮೈದಾನ ಮತ್ತು ಮಹಾತ್ಮಾಗಾಂಧಿ ರಸ್ತೆಯಲ್ಲಿ ಮಂಗಳೂರು ಹಬ್ಬ ಆಚರಿಸಲು ಸೋಮವಾರ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದರು.
ಆಹಾರ ಮೇಳ, ಹಣ್ಣು ತರಕಾರಿಗಳ ಪ್ರದರ್ಶನ, ಕ್ಯಾಶ್ಯೂ, ಕೇಕ್, ಮ್ಯಾಂಗೋ, ಪಿಶ್ ಕಾರ್ನರ್ ಇರಲಿದೆ.ಜಾನಪದ ನೃತ್ಯ, ಜಾನಪದ ಗೀತೆಗಳು, ಡ್ಯಾನ್ಸ್, ಡ್ರಾಮಾ, ಮ್ಯೂಸಿಕ್, ಯಕ್ಷಗಾನ, ಪ್ರದರ್ಶನಗಳು, ವಾಲಿಬಾಲ್, ಪ್ರೊ ಕಬಡ್ಡಿ, ಮ್ಯಾಜಿಕ್ ಷೋ, ಹುಲಿವೇಶ, ಕಲಾಪ್ರದರ್ಶನ ಸೇರಿದಂತೆ 50ಕ್ಕೂ ಹೆಚ್ಚು ಮನರಂಜನಾತ್ಮಕ ಪ್ರದರ್ಶನಗಳನ್ನು ಏರ್ಪಡಿಸುವುದಾಗಿ ಪ್ರವಾಸೋಧ್ಯಮ ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರ) ಕ್ಲಿಫರ್ಡ್ ಲೋಬೋ ಸಭೆಗೆ ತಿಳಿಸಿದರು.
ಮಂಗಳುರು ಹಬ್ಬ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಉಪಸಮಿತಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಮಹನಗರಪಾಲಿಕೆ ಆಯುಕ್ತ ಗೋಪಾಲಕೃಷ್ಣ, ಕೈಗಾರಿಕಾ ಇಲಾಖೆ, ಜಂಟಿ ನಿರ್ದೇಶಕ ಗೋಕುಲ್‍ದಾಸ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ಮುಂತಾದವರು ಹಾಜರಿದ್ದರು.
ಏಪ್ರಿಲ್ 3 ರಂದು ಮಂಗಳೂರು ಹಬ್ಬ- ಎ.ಬಿ. ಇಬ್ರಾಹಿಂ
Spread the love
Spread the love