Spread the love
ಏಳೆಂಜೆ ಜೋಡಿ ಕೊಲೆ: ಘಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಭೇಟಿ
ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೊಳಿ ಸಮೀಪದ ಏಳೆಂಜೆ ಎಂಬಲ್ಲಿ ಕೊಲೆಗೀಡಾದ ದಂಪತಿಯ ಮನೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬುಧವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದರು.
ನೆರೆಮನೆಯವರಿಂದ ಕೊಲೆಗೆಡಾದ ಗಂಡ ವಿಲ್ಸನ್ ಡಿ ಸೋಜಾ , ಹೆಂಡತಿ ಹೆಲೇನ್ ಡಿ ಸೋಜಾ ಇವರು ಅಲ್ಪೊನ್ ಇವರಿಂದ ಚೂರಿ ಇರಿತಕ್ಕೆ ಕೊಲೆಗೆಡಾದ ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ನಡೆದ ಮನೆಗೆ ಮತ್ತು ಸ್ಥಳಕ್ಕೆ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ಭೇಟಿ ನೀಡಿ ಮೃತರ ಮಕ್ಕಳಿಗೆ ಸಾಂತ್ವನ ಹೇಳಿ, ಕೋಲೆ ಪ್ರಕರಣದ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ.
ಕೊಲೆಯಾದ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಮೃತರ ಕುಟುಂಬಕ್ಕೆ ಸರಕಾರದಿಂದ ಸಹಾಯ ಧನ ಒದಗಿಸುವಂತೆ ಐವನ್ ಡಿಸೋಜ ಆಗ್ರಹಿಸಿದ್ದಾರೆ.
Spread the love