ಐಟಿಐ ಉಪನ್ಯಾಸಕ ಕೊಲೆ ಪ್ರಕರಣ – ಮತ್ತೋರ್ವನ ಬಂಧನ
ಮಂಗಳೂರು: ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ಐಟಿಐ ಉಪನ್ಯಾಸಕ ವಿಕ್ರಮ್ ಜೈನ್ ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಇನ್ನೋರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧೀತ ವ್ಯಕ್ತಿಯನ್ನು ಪುಂಜಾಲಕಟ್ಟೆ ನಿವಾಸಿ ನಾಗೇಶ್ ಪೂಜಾರಿ ಅಣ್ಣ ಗಣೇಶ್ ಪೂಜಾರಿ(34) ಎಂದು ಗುರುತಿಸಲಾಗಿದೆ.
ಮೇ 27 ರಂದು ಆರೋಪಿಗಳಾದ ನಾಗೇಶ್ ಪೂಜಾರಿ, ಡೀಕಯ್ಯ ನಲ್ಕೆ ಎಂಬವರು ಉಪನ್ಯಾಸಕ ವಿಕ್ರಮ್ ಜೈನ್ ಅವರಿಗೆ ಮೊಬೈಲ್ ಕರೆ ಮಾಡಿ ನಿಮ್ಮ ಬಳಿ ಮಾತನಾಡಲಿದೆ, ಮುಂಡೂರಿನ ಕೋಟಿಕಟ್ಟೆ ಬಳಿ ಬನ್ನಿ ಎಂಬುದಾಗಿ ತಿಳಿಸಿದ್ದು, ರಾತ್ರಿ 11:30 ಗಂಟೆ ಸಮಯಕ್ಕೆ ತನ್ನ ಕಾರಿನಲ್ಲಿ ವಿಕ್ರಂ ಜೈನ್ ಎಂಬವರು ಗುರುವಾಯನಕೆರೆ ಪೇಟೆಯಲ್ಲಿರುವ ಬಾರ್ವೊಂದರಲ್ಲಿ ಮದ್ಯ ಸೇವನೆ ಮಾಡಿ ಕೋಟಿಕಟ್ಟೆಗೆ ಬಂದಿರುತ್ತಾರೆ. ಈ ಸಮಯ ಆರೋಪಿಗಳು ವಿಕ್ರಂ ಜೈನ್ ರವರ ಬಳಿ ಜಾಗದ ವಿಚಾರದಲ್ಲಿ ಹಾಗೂ ಹೆಣ್ಣಿನ ವಿಚಾರದಲ್ಲಿ ಚರ್ಚೆ ಮಾಡಿ ಗಲಾಟೆ ಮಾಡಿ ಬಳಿಕ ಹೊಟ್ಟೆಗೆ ಚಾಕುವಿನಿಂದ ತಿವಿದು ಮುಖದ ಭಾಗಕ್ಕೆ ತಲವಾರಿನಿಂದ ಕಡಿದು ಕೊಲೆ ಮಾಡಿರುತ್ತಾರೆ. ನಂತರ ಆರೋಪಿ ನಾಗೇಶನು ಮಾಲಾಡಿ ಊರ್ಲ ಎಂಬಲ್ಲಿರುವ ತನ್ನ ಅಣ್ಣ ಗಣೇಶ್ ಪೂಜಾರಿಗೆ ಕರೆ ಮಾಡಿ ನಾವು ನಿನ್ನಲ್ಲಿಗೆ ಬರುತ್ತಿರುವಾಗಿ ತಿಳಿಸಿ ದ್ವಿಚಕ್ರ ವಾಹನದಲ್ಲಿ ಗಣೇಶ್ ಪೂಜಾರಿ ಮನೆಗೆ ತೆರಳಿರುತ್ತಾರೆ. ಅಲ್ಲಿಂದ ಬೆಳಗ್ಗೆ ಆರೋಪಿಗಳು ಮಂಗಳೂರಿಗೆ ತೆರಳಿ ರೈಲಿನ ಮೂಲಕ ಮುಂಬಾಯಿಗೆ ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಆರೋಪಿತರನ್ನು ಪತ್ತೆ ಹಚ್ಚಿ ಬೈಂದೂರು ರೈಲ್ವೇ ಸ್ಟೇಷನ್ನಲ್ಲಿ ರೈಲು ನಿಂತಾಗ ವಶಕ್ಕೆ ಪಡೆದಿರುವುದಾಗಿದೆ. ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಗಳಿಗೆ ಆಶ್ರಯ ನೀಡಿದ ನಾಗೇಶ್ ಪೂಜಾರಿ ಅಣ್ಣ ಗಣೇಶ್ ಪೂಜಾರಿಯನ್ನು ವಶಕ್ಕೆ ಪಡೆದಿದ್ದು ಈತನ ಮನೆಯಿಂದ ಪ್ರಕರಣಕ್ಕೆ ಆರೋಪಿಗಳು ಉಪಯೋಗ ಮಾಡಿದ ಯಮಹಾ ಮೋಟಾರ್ ಸೈಕಲ್ ನ್ನು ಮತ್ತು ಕೃತ್ಯ ನಡೆದ ಸಮಯದಲ್ಲಿ ಆರೋಪಿಗಳು ಧರಿಸಿದ್ದ ಬಟ್ಟೆಬರೆಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿನ ಆರೋಪಿಗಳನ್ನು ಪ್ರಕರಣ ದಾಖಲಾದ 8 ಗಂಟೆಯೊಳಗೆ ಪತ್ತೆ ಹಚ್ಚಿ ದಸ್ತಗಿರಿ ಮಾಡಿರುವುದಾಗಿದೆ ಈ ಕೃತ್ಯಗಳಿಗೆಲ್ಲ ಸಹಕರಿಸಿದ ಹಾಗೂ ಆಶ್ರಯ ನೀಡಿದ ಗಣೇಶ್ ಪೂಜಾರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ತನಿಖೆ ಮುಂದುವರಿದಿರುತ್ತದೆ.