ಐಡಿಇ ಗ್ಲೋಬಲ್‍ನ `ವ್ಹಿಜನರಿ ಹೊಟೇಲ್ ಓನರ್ ಆಫ್ ದ ಈಯರ್’ ಸರ್ವೋತ್ಕೃಷ್ಟ ಪ್ರಶಸ್ತಿಗೆ ಭಾಜನರಾದ ಪ್ರಕಾಶ್ ಶೆಟ್ಟಿ  

Spread the love

ಐಡಿಇ ಗ್ಲೋಬಲ್‍ನ `ವ್ಹಿಜನರಿ ಹೊಟೇಲ್ ಓನರ್ ಆಫ್ ದ ಈಯರ್’ ಸರ್ವೋತ್ಕೃಷ್ಟ ಪ್ರಶಸ್ತಿಗೆ ಭಾಜನರಾದ ಪ್ರಕಾಶ್ ಶೆಟ್ಟಿ  
 
ಮುಂಬಯಿ: ರಾಷ್ಟ್ರದ ಪ್ರತಿಷ್ಠಿತ ಐಡಿಇ ಗ್ಲೋಬಲ್ ಪ್ರಸ್ತಿತಿಯ ಹಾಸ್ಪಿಟ್ಯಾಲಿಟಿ ಲೀಡರ್’ಸ್ ಇಂಡಸ್ಟೀ ಚಾಯ್ಸ್ ಅವಾರ್ಡ್‍ಸ್ ಇದರ ನಾಲ್ಕನೇ ವಾರ್ಷಿಕ ಪ್ರಶಸ್ತಿ ಪ್ರದಾನ ಭವ್ಯ ಸಮಾರಂಭ ಇಂದಿಲ್ಲಿ ಮಂಗಳವಾರ ರಾತ್ರಿಮುಂಬಯಿ ಮಹಾನಗರದ ಸಾಂತಕ್ರೂಜ್ ಪೂರ್ವದ ಗ್ರ್ಯಾಂಡ್ ಹೈಯ್ಯತ್ ಸಭಾಗೃಹದÀಲ್ಲಿ ನೇರವೇರಿತು.

ಬಂಜಾರ-ಗೋಲ್ಡ್‍ಫಿಂಚ್ ಪ್ರಕಾಶಣ್ಣ ಪ್ರಸಿದ್ಧಿಯ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ (ಉಡುಪಿ) ಜಿಲ್ಲೆಯ ಪಡುಬಿದ್ರಿ ಮೂಲದ ಪ್ರಸಿದ್ಧ ಉದ್ಯಮಿ, ಎಂಆರ್‍ಜಿ (ಮಾಧವ್ ರತ್ನಾ ಗೌರವ್) ಸಮೂಹದ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಕೊರಂಗ್ರಪಾಡಿ ಅವರಿಗೆ ಈ ಬಾರಿ `ವರ್ಷದ ಕನಸುಗಾರ ಹೊಟೇಲು ಮಾಲಕ’  ಪ್ರಾಪ್ತಿಯಾಗಿದ್ದು, ಇಂದಿಲ್ಲಿ ನಡೆಸಲ್ಪಟ್ಟ 2018ನೇ ಐಡಿಇ ಗ್ಲೋಬಲ್ ವಾರ್ಷಿಕ ಪ್ರಶಸ್ತಿ ಪ್ರದಾನ ಭವ್ಯ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಐಡಿಇ ಗ್ಲೋಬಲ್ ನಿರ್ದೇಶಕರುಗಳಾದ ಕೆ.ಸುರೇಶ್ ಮತ್ತು ಎಸ್.ಗಣೇಶ್ ಅವರು ಪ್ರಕಾಶ್ ಶೆಟ್ಟಿ ಅವರಿಗೆ `ವ್ಹಿಜನರಿ ಹೊಟೇಲ್ ಓನರ್ ಆಫ್ ದ ಈಯರ್’ ಪ್ರಶಸ್ತಿ ಫಲಕ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗೌರವ ಅತಿಥಿüಗಳಾಗಿ ಸ್ಪ್ರಿಂಗ್‍ಏರ್ ಸಂದೀಪ್ ಮೆನನ್, ನಿತೀನ್ ನಾಗ್ರಾಲೆ, ಡೋನ್ ಕಬಿರಾಜ್, ರಾಜೇಶ್ ನಾಯರ್, ಪ್ರೇಮ್ ರುವೇರಿ ಮತ್ತು ಐಡಿಇ ಗ್ಲೋಬಲ್ ಮುಖ್ಯಸ್ಥರು ಉಪಸ್ಥಿತರಿದ್ದು ನೆರೆದ ರಾಷ್ಟ್ರದಾದ್ಯಂತದ ನೂರಾರು ಗಣ್ಯರ ಉಪಸ್ಥಿತಿಯಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ರತ್ನಾಕರ ಆರ್.ಶೆಟ್ಟಿ ಮುಂಡ್ಕೂರು ಹಾಜರಿದ್ದು ಪ್ರಶಸ್ತಿ ಸ್ವೀಕೃತ ಪ್ರಕಾಶ್ ಶೆಟ್ಟಿ ಅವರ ಮಹತ್ತರ ಸಾಧನೆಯನ್ನು ಪ್ರಶಂಸಿಸಿ ಶುಭಾರೈಸಿದರು.

ಕೆ.ಸನೀಲ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಪ್ರಶಸ್ತಿಗೆ ಭಾಜನರಾದ ಸರ್ವರಿಗೂ ಶುಭಾರೈಸಿ ಕಾರ್ಯಕ್ರಮ ನಿರೂಪಿಸಿದರು.

ಪ್ರಕಾಶ್ ಶೆಟ್ಟಿ ಕೊರಂಗ್ರಪಾಡಿ
ಉಡುಪಿ ಜಿಲ್ಲೆಯ ಪಡುಬಿದ್ರಿ ಮೂಲದ ಕೊರಂಗ್ರಪಾಡಿ ಮನೆತನದ ಪ್ರಕಾಶ್ ಎಂ.ಶೆಟ್ಟಿ ಅವರು ಕೆ. ಮಾಧವ ಶೆಟ್ಟಿ ಮತ್ತು ರತ್ನಾ ಎಂ.ಶೆಟ್ಟಿ ಸುಪುತ್ರರಾಗಿರುವರು. ತನ್ನ ಕಾಲೇಜು ಶಿಕ್ಷಣ ಪೂರೈಸಿ ಹೊಟೇಲು ಉದ್ಯಮಕ್ಕೆ ನಾಂದಿಯನ್ನಾಡಿದರು. ನಂತರ ಎಂಆರ್‍ಜಿ ಸಮೂಹ ರೂಪಿಸಿ ದೇಶವಿದೇಶಗಳಲ್ಲಿ ಹೊಟೇಲು ಉದ್ಯಮವನ್ನು ಪಸರಿಸಿದರು. ಸರಳ ಸಜ್ಜನಿಕೆಯ, ಅಪಾರ ಶಿಕ್ಷಣ ಪ್ರೇಮವುಳ್ಳ ಪ್ರಕಾಶ್ ಓರ್ವ ಕೊಡುಗೈದಾನಿ ಆಗಿಯೂ ಪರಿಚಯಿತರು.

1997ರಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆಸಲ್ಪಟ್ಟ 4ನೇ ನೇಶನಲ್ ಗೇಮ್ಸ್ ಮತ್ತು 1999ರಲ್ಲಿ ಮಣಿಪುರಾದಲ್ಲಿ ನಡೆಸಲ್ಪಟ್ಟ 5ನೇ ನೇಶನಲ್ ಗೇಮ್ಸ್‍ಗಳ ಆಹಾರವನ್ನು ಪೂರೈಸಿ ಹೊಟೇಲು ಉದ್ಯಮದಲ್ಲಿ ತನ್ನದೇಆದ ಸ್ವಂತಿಕೆಯ ಛಾಪು ಮೂಡಿಸಿ ಕೊಂಡವರಾಗಿದ್ದಾರೆ. ಸದ್ಯ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ, ಟ್ರಸ್ಟೀ, ಪದಾಧಿಕಾರಿಯಾಗಿ ಸೇವಾ ನಿರತರಾಗಿದ್ದಾರೆ. ಬೆಂಗಳೂರು, ಮಂಗಳೂರು, ಡೆಲ್ಲಿ, ಮುಂಬಯಿ, ಗೋವಾ ನಗರಗಳಲ್ಲಿ ಗೋಲ್ಡ್‍ಫಿಂಚ್ ಹೊಟೇಲುಗಳನ್ನು ಹೊಂದಿರುವ ಇವರು ಪಂಚತಾರಾ ಹೊಟೇಲು, ವಸತಿಗೃಹ, ವ್ಯಾಪಾರ ಸಂಕೀರ್ಣ, ಕಟ್ಟಡ ನಿರ್ಮಾಣ ಸಂಸ್ಥೆಗಳನ್ನು ಮುನ್ನಡೆಸಿ ಸಾವಿರಾರು ಜನರಿಗೆ ಉದ್ಯೋಗ, ಉದ್ಯಮ ಒದಗಿಸಿ ಜನಮಾನ್ಯರಾಗಿದ್ದಾರೆ.

ಹೊಟೇಲ್ ಉದ್ಯಮಶ್ರೀ ಪುರಸ್ಕಾರ, ಭಾರತ್ ಗೌರವ ರತ್ನ ಪುರಸ್ಕಾರ, ಇಂಟರ್‍ನ್ಯಾಷನಲ್ ಗೋಲ್ಡ್‍ಸ್ಟಾರ್ ಮಿಲಿನಮ್ ಪುರಸ್ಕಾರ, ಬೆಸ್ಟ್ ಇಂಟೆಲ್‍ಕ್ಚುಅಲ್ ಆವಾರ್ಡ್ ಆಫ್ ಕಾಪೆರ್Çರೇಟ್ ಲೀಡರ್‍ಶೀಫ್, ರಾಜೀವ್ ಗಾಂಧಿ ಶೀರೋಮನಿ ಪುರಸ್ಕಾರ, ಟಿಪ್ಪು ಸುಲ್ತಾನ್ ಪುರಸ್ಕಾರ, ನ್ಯಾಷನಲ್ ಆವಾರ್ಡ್ ಫಾರ್ ಓವರ್ ಆಲ್ ಅಚೀವ್‍ಮೆಂಟ್, ಒಕ್ಕಲಿಗ ರತ್ನ ಪ್ರಶಸ್ತಿ, ತೌಳವ ಶ್ರೀ ಪ್ರಶಸ್ತಿ, ಕರಾವಳಿ ರತ್ನ ಆವಾರ್ಡ್, ನಾಡಪ್ರಭು ಕೆಂಪೇಗೌಡ ಇಂಟರ್‍ನ್ಯಾಷನಲ್ ಆವಾರ್ಡ್ ದುಬಾಯಿಯಲ್ಲಿ ಮತ್ತು ಕರ್ನಾಟಕ ಪ್ರದೇಶ ಹೊಟೇಲ್ ಆ್ಯಂಡ್ ರಿಟರ್ನ್ ಅಸೋಸಿಯೇಶನ್‍ನಿಂದ ಉದ್ಯಮರತ್ನ ಪುರಸ್ಕಾಗಳು ಒಲಿದು ಬಂದಿವೆ. ಪತ್ನಿ ಆಶಾ ಪ್ರಕಾಶ್ ಶೆಟ್ಟಿ, ಸುಪುತ್ರ ಗೌರವ್ ಪ್ರಕಾಶ್ ಶೆಟ್ಟಿಯೊಂದಿಗೆ ಜೀವನ ನಡೆಸುತ್ತಿರುವ ಇವರು ಸದಾ ಸಮಾಜಮುಖಿ ಚಿಂತನೆಯ ಇವರು ಸರಳ, ಸಜ್ಜನಿಕೆ ಮತ್ತು ಸೌಮ್ಯ ಸ್ವಾಭಾವದವರಾಗಿದ್ದು ಜಾತಿಮತ ಬೇಧವಿಲ್ಲದೆ ತೆರೆಮರೆಯಲ್ಲಿದ್ದೇ ಆರೋಗ್ಯ ಮತ್ತು ಶೈಕ್ಷಣಿಕ ಸೇವೆಗೆ ಪೆÇ್ರೀತ್ಸಾಹಿಸುತ್ತಿದ್ದಾರೆ. ಬಂಟರ ಸಂಘ ಮುಂಬಯಿ ಸಂಸ್ಥೆಯ ನಿಕಟವರ್ತಿಯಾಗಿರುವ ಪ್ರಕಾಶ್ ಶೆಟ್ಟಿ ಅವರು ಬಂಟರ ಸಂಘ ಮುಂಬಯಿ ತನ್ನ ಶಿಕ್ಷಣ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಸಮಿತಿಯು ವಾರ್ಷಿಕವಾಗಿ ನಡೆಸುವ ಸಂಘದ ಬೃಹತ್ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಲ್ಲೋರ್ವರಾಗಿದ್ದಾರೆ.

ಗಣ್ಯರ ಅಭಿನಂದನೆ-ಶುಭಾರೈಕೆ:
`ವ್ಹಿಜನರಿ ಹೊಟೇಲ್ ಓನರ್ ಆಫ್ ದ ಈಯರ್’ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಶೆಟ್ಟಿ ಅವರಿಗೆ ಚರಿಷ್ಮಾ ಬಿಲ್ಡರ್ಸ್‍ನ ಆಡಳಿತ ನಿರ್ದೇಶಕ ಸುಧೀರ್ ವಿ.ಶೆಟ್ಟಿ, ತುಂಗಾ ಹೊಟೇಲು ಸಮೂಹÀದ ಆಡಳಿತ ನಿರ್ದೇಶಕ ಸುಧಾಕರ್ ಎಸ್.ಹೆಗ್ಡೆ, ಸಂಸದ ಗೋಪಾಲ ಸಿ.ಶೆಟ್ಟಿ, ಆಲ್‍ಕಾರ್ಗೋ ಸಮೂಹದ ಶಶಿಕಿರಣ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಭವಾನಿ ಫೌಂಡೇಶನ್‍ನ ಸಂಸ್ಥಾಪಕಾಧ್ಯಕ್ಷ ಕೆ.ಡಿ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ಬಿ.ವಿವೇಕ್ ಶೆಟ್ಟಿ, ರಘುರಾಮ ಕೆ.ಶೆಟ್ಟಿ (ಬೆಳಗಾಂ), ಸಿಎ| ಶಂಕರ್ ಬಿ.ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಜಯರಾಮ ಎನ್.ಶೆಟ್ಟಿ, ಸಿಎ| ಐ.ಆರ್ ಶೆಟ್ಟಿ, ಮಹೇಶ್ ಎಸ್.ಶೆಟ್ಟಿ ಸೇರಿದಂತೆ ನೂರಾರು ಗಣ್ಯರು ಅಭಿನಂದಿಸಿ ಶುಭಾರೈಸಿದ್ದಾರೆ.


Spread the love