ಒಂಟಿ ಮಹಿಳೆಯನ್ನು ಸುಲಿಗೆಗೈದು ಕೊಲೆಗೈದ ಆರೋಪಿಗೆ ಶಿಕ್ಷೆ
ಉಡುಪಿ : ಬ್ರಹ್ಮಾವರ ಪೋಲಿಸ್ ಠಾಣಾ ವ್ಯಾಪ್ತಿಯ ಹೇರೂರು ಎಂಬಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ಲೂಟಿಗೈದ ಪ್ರಕರಣದ ಅಪರಾಧಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಲಯವು ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ.
ಬ್ರಹ್ಮಾವ ಹೇರೂರು ನಿವಾಸಿ ಯೋಗಿಶ್ (34) ಎಂಬಾತ ಶಿಕ್ಷೆಗೆ ಒಳಗಾದ ಅಪರಾಧಿ ಎಂದು ಗುರುತಿಸಲಾಗಿದೆ.
ಘಟನೆ ಪೂರ್ವ ವರ್ಷದ ಹಿಂದೆ ಹೇರೂರು ಗ್ರಾಮದಲ್ಲಿ ಜನರಲ್ ಸ್ಟೋರ್ ಅಂಗಡಿಯನ್ನು ತೆರೆದಿದ್ದು ಅಂಗಡಿ ಪ್ರಾರಂಭಿಸಲು ಬೇರೆ ಬೇರೆ ಬ್ಯಾಂಕುಗಳಲ್ಲಿ ತುಂಬಾ ಸಾಲ ಮಾಡಿದ್ದು, ವ್ಯಾಪಾರದಲ್ಲಿ ನಷ್ಟವಾಗಿರುವುದರಿಂದ ಸಾಲದ ಹಣ ಮರು ಪಾವತಿಸದೇ ಕೋರ್ಟ್ ನೋಟೀಸ್ ಆಗಿ ತುಂಬಾ ಹಣದ ಅಡಚಣೆಯಲ್ಲಿರುತ್ತಾ ತನ್ನ ಮನೆಯ ಸಮೀಪ ಇರುವ ಸುನಂದ ಶೆಟ್ಟಿಯವರು ತುಂಬಾ ಚಿನ್ನಾಭರಣ ಧರಿಸಿಕೊಂಡು ತಿರುಗುವುದನ್ನು ಹಾಗೂ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಅವರನ್ನು ಕೊಲೆ ಮಾಡಿ ಅವರ ಮೈಮೇಲಿನ ಚಿನ್ನಾಭರಣವನ್ನು ಸುಲಿಗೆ ಮಾಡುವ ಉದ್ದೇಶದಿಂದ ದಿ: 20-12-2010 ರಂದು ಸಂಜೆ ಸುಮಾರು 07-00 ಗಂಟೆಗೆ ಮಾನ್ಯ ನ್ಯಾಯಾಲಯದ ಹಾಗೂ ಬ್ರಹ್ಮಾವರ ಪೋಲೀಸ್ ಠಾಣೆ ವ್ಯಾಪ್ತಿಯ 52ನೇ ಹೇರೂರು ಗ್ರಾಮದ ಹೇರೂರು ಎಂಬಲ್ಲಿ ಪಿರ್ಯಾದುದಾರರಾದ ಜ್ಞಾನವಸಂತ ಶೆಟ್ಟಿಯವರ ಅತ್ತೆ ಶ್ರೀಮತಿ ಸುನಂದ ಎ. ಶೆಟ್ಟಿಯವರ ವಾಸದ ಮನೆಯಾದ ಆರಾಧನಾದ ಬಳಿಗೆ ತನ್ನ ಬಾಬ್ತು ಕೆಎ 20 ಯು 4468 ಮೋಟಾರು ಸೈಕಲ್ನಲ್ಲಿ ಹೋಗಿ ಮನೆಯ ಕಂಪೌಂಡ್ ಹಾರಿ ಸಂಜೆ ಸುಮಾರು 7-30 ಗಂಟೆಗೆ ಮನೆಯ ಮೆಟ್ಟಿಲಿನಲ್ಲಿ ಮನೆ ಕಡೆಗೆ ಮುಖ ಮಾಡಿ ನೆಲ ಒರೆಸುತ್ತಿದ್ದ ಸುನಂದ ಎ. ಶೆಟ್ಟಿಯವರ ಹಿಂದಿನಿಂದ ಹೋಗಿ ಅವರ ಕುತ್ತಿಗೆಯನ್ನು ಕೈಯಿಂದ ಒತ್ತಿ ಕೊಲೆ ಮಾಡಿ ಅವರ ಮೈಮೇಲಿದ್ದ ರೂ .1,80,000/- ಮೌಲ್ಯದ ಒಟ್ಟೂ 120.600 ಗ್ರಾಂ ತೂಕದ ಚಿನ್ನಾಭರಣಗಳಾದ ಕರಿಮಣಿ ಸರ, 4 ಬಳೆ, 1 ಜೊತೆ ಬೆಂಡೋಲೆ, ಕಿವಿಯ ಚೈನು ಮತ್ತು ಲಕ್ಷ್ಮೀ ಪೆಂಡೆಂಟ್ ಇರುವ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾನೆ ಎಂಬಿತ್ಯಾದಿಯಾಗಿದೆ..
ಈ ಪ್ರಕರಣದ ತನಿಖೆಯನ್ನು ಅಂದಿನ ವೃತ್ತ ನಿರೀಕ್ಷಕರಾದ, ಜಿ. ಕೃಷ್ಣಮೂರ್ತಿಯವರು ತನಿಖೆ ನಡೆಸಿ, ಆರೋಪಿತನ ವಿರುದ್ಧ ಭಾ.ದಂ.ಸಂ. ಕಲಂ 302, 397 ಕಾಯ್ದೆಯಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆಪಟ್ಟಿ ಸಲ್ಲಿಸಿದ್ದು ಇರುತ್ತದೆ.
ಉಡುಪಿಯ ಮಾನ್ಯ ಜಿಲ್ಲಾ ವiತ್ತು ಸತ್ರ ನ್ಯಾಯಾಲಯವು ಸಾಕ್ಷಿಗಳನ್ನು ವಿಚಾರಣೆ ನಡೆಸಿ ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಯು ಆತನ ಮೇಲೆ ಆಪಾದಿಸಿದಂತೆ ಅಪರಾಧವೆಸಗಿದ್ದು ಪ್ರಕರಣದಲ್ಲಿ ಸಾಬೀತಾಗಿದೆಯೆಂದು ಪರಿಗಣಿಸಿ ಮಾನ್ಯ ನ್ಯಾಯಾಧೀಶರಾದ ಶ್ರೀ ಟಿ. ವೆಂಕಟೇಶ ನಾಯ್ಕರವರು ದಿನಾಂಕ: 24-5-2017 ರಂದು ಪ್ರಕರಣದ ಆರೋಪಿಗೆÀ ಭಾ. ದಂ.ಸಂ. ಕಲಂ 302ಕ್ಕೆ ಜೀವಾವಧಿ ಶಿಕ್ಷೆ ಭಾ. ದಂ. ಸಂ. ಕಲಂ 397 ಅಪರಾಧಕ್ಕೆ 7 ವರ್ಷ ಕಠಿಣ ಶಿಕ್ಷೆ ಮತ್ತು ಒಟ್ಟು ರೂ. 25,000/- ದಂಡಕ್ಕೆ ಗುರಿಪಡಿಸಿದ್ದು ಅದೆ.
ಪ್ರಾಸಿಕ್ಯುಷನ್ ಪರವಾಗಿ ಅಂದಿನ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀ ಟಿ. ಎಸ್. ಜಿತೂರಿ, ಪ್ರಕರಣ ದಲ್ಲಿ ಪ್ರಾಥಮಿಕ ಸಾಕ್ಷಿ ವಿಚಾರಣೆ ಮಾಡಿದ್ದು ಮತ್ತು ಪ್ರಸ್ತುತ ಶ್ರೀಮತಿ ಶಾಂತಿಬಾಯಿ, ಪಬ್ಲಿಕ್ ಪ್ರಾಸಿಕ್ಯೂಟರ್, ಉಡುಪಿ ಇವರು ಸಾಕ್ಷಿ ವಿಚಾರಣೆ ಮತ್ತು ವಾದವನ್ನು ಮಂಡಿಸಿರುತ್ತಾರೆ.