ಒಂದು ದಿನ ದೇಶದ ಪ್ರಧಾನಿಯಾಗುವುದು ಖಚಿತ; ಮೋದಿ ಮಾತ್ರ ನನ್ನ ಪ್ರತಿಸ್ಪರ್ಧಿ – ಹುಚ್ಚ ವೆಂಕಟ್
ಮಂಗಳೂರು: ನಾನು ಈ ಬಾರಿಯ ವಿಧಾನಸಭಾ ಚುನಾವಣೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನಾನೇನು ಸೀರೆ, ನೀರು ಹಂಚುವುದಿಲ್ಲ. ನಾನು ಯಾವುದೇ ಪ್ರಚಾರಕ್ಕಾಗಿ ಮನೆ ಮನೆಗೆ ತೆರಳುವುದಿಲ್ಲ. ಜನ ನನ್ನ ಕೆಲಸದ ಬಗ್ಗೆ ತಿಳಿದುಕೊಂಡಿದ್ದು ಅವರು ನನಗೆ ಮತ ನೀಡಲಿದ್ದಾರೆ. ನಾನು ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಲಿದ್ದೆನೆ ಈ ಮಾತನ್ನು ಬೇಕಾದರೆ ಬರೆದಿಟ್ಟುಕೊಳ್ಳಿ. ಅಲ್ಲದೆ ನಾನು ಒಂದು ದಿನ ದೇಶದ ಪ್ರಧಾನಿ ಕೂಡ ಆಗುತ್ತೇನೆ ನನಗೆ ಮೋದಿ ಮಾತ್ರ ಪ್ರತಿಸ್ಪರ್ಧಿಯಾಗಬಲ್ಲವರು ಹೀಗೆಂದು ಹೇಳೀದವರು ಬೇರ್ಯಾರು ಅಲ್ಲ ಬದಲಾಗಿ ನಟ ನಿರ್ದೇಶಕ ಹುಚ್ಚ ವೆಂಕಟ್.
ಅವರು ಬುಧವಾರ ನಗರದ ಪ್ರೆಸ್ ಕ್ಲಬ್ಬಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನಾನು ಪ್ರಧಾನಿಯಾದರೆ ದೇಶದ ವ್ಯವಸ್ಥೆಯನ್ನು ಕೇವಲ 5 ದಿನಗಳಲ್ಲಿ ಬದಲಾಯಿಸುತ್ತೇನೆ. ದೇಶದ ಪ್ರತಿಯೊಂದು ವ್ಯಕ್ತಿ ಕೂಡ ನನಗೆ ಸಮಾನರು ಹಾಗಿದ್ದು ನಾನು ಕೂಡ ಅವರನ್ನು ಸಮಾನವಾಗಿ ಕಾಣುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ನಾನು ಗೆದ್ದು ಶಾಸಕ ಅಥವಾ ಮುಖ್ಯಮಂತ್ರಿಯಾಗಿ ಆಯ್ಕೆಯಾದಲ್ಲಿ ನಾನು ಜನರಿಗಾಗಿ ಕೆಲಸ ಮಾಡುತ್ತೇನೆ ಅಲ್ಲದೆ ನನ್ನ ಸಂಬಳವನ್ನು ಜನರಿಗೆ ನೀಡುತ್ತೇನೆ. ನಾನು ಚುನಾವಣೆಯಲ್ಲಿ ಮತ ನೀಡುವಂತೆ ಯಾರಲ್ಲಿ ಬೇಡುವುದಿಲ್ಲ ಬದಲಾಗಿ ನನ್ನ ಹೆಸರಿಗೆ ಇರುವ ಪ್ರಚಾರದಿಂದ ನಾನು ಗೆಲುವು ಸಾಧಿಸುತ್ತೇನೆ.
ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಏಪ್ರಿಲ್ 17 ರಂದು ನಾನು ನನ್ನ ನಾಮಪತ್ರವನ್ನು ಸಲ್ಲಿಸಲಿದ್ದು ಚುನಾವಣೆಯಲ್ಲಿ ಗೆದ್ದರೆ ಸಂತೋಷ ಒಂದು ವೇಳೆ ಸೋತರೆ ಅದರು ಜನರಿಗೆ ನಷ್ಟ. ಜನರು ಅಭ್ಯರ್ಥಿಗಳು ಸೀರೆ, ನೀರು ಅಥವಾ ಮದ್ಯವನ್ನು ವಿತರಿಸಿದರೆ ಸಂತೋಷಪಡುತ್ತಾರೆ ಆದರೆ ಅವರು ತಿಳಿಯಬೇಕು ಕೊಡುಗೆಗಳು ಶಾಶ್ವತ ಅಲ್ಲ ಎನ್ನುವುದು. ಒಂದು ವೇಳೆ ಜನತೆ ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವಿಫಲರಾದರೆ ಮುಂದಿನ ಐದು ವರ್ಷಗಳ ಕಾಲ ಪಶ್ಚಾತ್ತಾಪ ಪಡಬೇಕಾಗುತ್ತದೆ.
Mr. Venkatesh is frank. Others makes sound with out expressing by heart.