ಒಬ್ಬಂಟಿ ಮಹಿಳೆಗೆ ರಕ್ಷಣೆ ನೀಡಿದ ಪೋಲಿಸ್ ಸಿಬಂದಿಗೆ ಮೆಚ್ಚುಗೆ
ಮಂಗಳೂರು: ಕೆಲವು ದಿನಗಳ ಹಿಂದೆ ಮುಡಿಪು ಪರಿಸರದಲ್ಲಿ ರಾತ್ರಿಯ ವೇಳೆಯಲ್ಲಿ ವಾಹನಗಳು ಸಿಗದೆ ಮಹಿಳೆಯೋರ್ವರು ಮಧ್ಯರಾತ್ರಿಯಾದರೂ ಬಸ್ ನಿಲ್ದಾಣದಲ್ಲಿ ಉಳಿಯಬೇಕಾದಾಗ ಕೊಣಾಜೆಯ ಪೋಲಿಸ್ ಸಿಬಂದಿಯೋರ್ವರು ಮಹಿಳೆಗೆ ರಕ್ಷಣೆಗೆ ನಿಂತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಮದ್ಯರಾತ್ರಿ 1 ಗಂಟೆಯ ಸಮಯದಲ್ಲಿ ಮುಡಿಪು ಜಂಕ್ಷನ್ ನಲ್ಲಿ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದೆ ವಾಹನಕ್ಕಾಗಿ ನಿಂತಿದ್ದ ಒಬ್ಬಂಟಿ ಮಹಿಳೆಗೆ ಉಳಿದ ವಾಹನಗಳು ಓಡಾಡುತ್ತಿದ್ದರೂ ಭಯದಿಂದ ನಿಲ್ಲಿಸುವ ಪ್ರಯತ್ನ ಮಾಡಿರಲಿಲ್ಲ.
ಅದೇ ಸಂದರ್ಭದಲ್ಲಿ ಪೋಲಿಸ್ ವಾಹನದಲ್ಲಿ ಅದೇ ರಸ್ತೆಯಲ್ಲಿ ಬಂದ ಕೊಣಾಜೆ ಪೋಲಿಸ್ ಸಿಬಂದಿ ದೇವರಾಜ್ ಮಹಿಳೆಯನ್ನು ಕಂಡು ವಿಚಾರಿಸಿದ್ದು, ಮಹಿಳೆಯ ಅಸಾಹಯಕತೆಯನ್ನು ಕಂಡು ದೇವರಾಜ್ ಮಹಿಳೆಯನ್ನು ಪೋಲಿಸ್ ವಾಹನದಲ್ಲಿಯೇ ಅವರ ಮನೆಗೆ ಸುರಕ್ಷಿತವಾಗಿ ಮನೆಗೆ ತಲುಪಿಸಿ ವಾಪಾಸ್ಸಾಗಿದ್ದರು.
ಬಳಿಕ ಮಹಿಳೆಯು ದೇವರಾಜ್ ಅವರ ಪ್ರಾಮಾಣಿಕತೆ, ಸುರಕ್ಷಿತವಾಗಿ ತನ್ನನ್ನು ಮನೆಗೆ ತಲುಪಿಸಿದ ಪೋಲಿಸ್ ಸಿಬಂದಿಯ ಕುರಿತು ಅಭಿನಂದಿಸಿ ಪತ್ರವನ್ನು ಬರೆದಿದ್ದರು.
ಪೋಲಿಸ್ ಸಿಬಂಧಿ ದೇವರಾಜ್ ಅವರ ಪ್ರಾಮಾಣಿಕ ಸೇವೆಗೆ ಪ್ರಶಂಸಿಸಿ ಪೊಲೀಸ್ ಆಯಕ್ತರು ಕೋಣಾಜೆ ಪೊಲೀಸ್ ಠಾಣಾ ಸಿಬ್ಬಂದಿ ಶ್ರೀ ದೇವರಾಜ ಅವರಿಗೆ 10,000/- ರೂ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡಿರುತ್ತಾರೆ.