ಓಮಾನಿನ ಮಸ್ಕತ್ ನಲ್ಲಿ ಕುಂದಾಪ್ರ ಕನ್ನಡ ಮಿತ್ರರಿಂದ ಅದ್ದೂರಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂಭ್ರಮ

Spread the love

ಓಮಾನಿನ ಮಸ್ಕತ್ ನಲ್ಲಿ ಕುಂದಾಪ್ರ ಕನ್ನಡ ಮಿತ್ರರಿಂದ ಅದ್ದೂರಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂಭ್ರಮ

ಜುಲೈ 24, 2020 ಶುಕ್ರವಾರ ರಾತ್ರಿ ಓಮಾನ್ ದೇಶದ ಮಸ್ಕತ್ ನಲ್ಲಿ ಅದ್ದೂರಿಯಾಗಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಆಚರಿಸಲಾಯಿತು, ಕರೋನದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಒನಲೈನ್ ಆ್ಯಪ್ ಗಳ ಮೂಲಕ ಓಮಾನಿನಲ್ಲಿ ವಾಸವಾಗಿರುವ ಕುಂದ ಬಾಷೆ ಮಾತನಾಡುವರೆಲ್ಲರೂ ಒಟ್ಟಾಗಿ ಒಬ್ಬರಿಗೊಬ್ಬರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಮತ್ತು ಬೈಂದೂರು ಮೂಲದ CA ಎನ್ ರಮಾನಂದ ಪ್ರಭುಗಳು ದೀಪವನ್ನು ಹಚ್ಚುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,

ಪುಟಾಣಿಗಳಾದ ಶಾರ್ವರಿ ಸುರೇಂದ್ರ ಶೆಟ್ಟಿ ಮತ್ತು ರೊಷ್ನಿ ರಮಾನಂದ ಪ್ರಭುರವರ ಭರತ ನಾಟ್ಯ ಗಣಪತಿ ಸ್ತುತಿ ನೃತ್ಯ ಪ್ರೇಕ್ಷಕರನ್ನು ಮಂತ್ರ ಮುಗ್ದರಾಗಿಸಿತು, ಅಭಿಮಾನ್ ಸುಧಾಕರ ಶೆಟ್ಟರ ಭತ್ತ ತೊಳು ಹಾಡು ಹಿಂದಿನ ಜನಪದ ಕಲೆಯಾದ ಭತ್ತ ಕುಟ್ಟುವ ಹಾಡನ್ನು ಮತ್ತೆ ನೆನಪಿಸಿತು, ಕುಂದಾಪುರದ ಇತಿಹಾಸದ ಬಗ್ಗೆ ನಾಗರಾಜ್ ಶಣೈ ಯವರು ಮಾತನಾಡಿದರೆ, ಕೋಳಿ ಪಡೆಯ ಬಗ್ಗೆ ಪೋಟೋ ಪ್ಲಾಶನ ಮಾಲಿಕ ಸುರೇಶ ಹೆಗ್ಡೆ ಸೊಗಾಸಾದ ವಿವರಣೆ ಕೊಟ್ಟರು, ಹರೀಶ್ ಮಾರಣಕಟ್ಟೆ ಯವರು ಮತ್ತೊಂದು ಕುಂದಾಪುರದ ಹೊಲಿ ಕರೆಯುವ ಹಾಡು, ಹಣಬಿನ ಹಾಡನ್ನು ಸೊಗಸಾಗಿ ಹಾಡಿದರು, ಪುಟಾಣಿಗಳಾದ ಐಶಾನಿ ಸುಧಾಕರ ಶೆಟ್ಟಿ , ಪ್ರೀತಂ ದಿನೇಶ ಶೆಟ್ಟಿ ಕ್ರಮವಾಗಿ ಮಗುವನ್ನು ತೂಗುವ ಹಾಡು, ಕುಟ್ಟಿ ಕುಂದಾಪ್ರದ ಕಥೆಯನ್ನು ಹೇಳುವುದರ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಚಪ್ಪಾಳೆ ಗಿಟ್ಟಿಸಿಕೊಂಡರು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಸಿಕ್ಕಿದ್ದು ಶಾರ್ವಿ ಮತ್ತು ಶರತ್ ಶೆಟ್ಟಿ ಹಕ್ಲಾಡಿ ಯವರ ತಂದೆ-ಮಗಳು ಸೇರಿ ಮಾಡಿದ ಹೊವಿನ ಕೊಲು ಚೌಪದಿ ಪದ್ಯ ಮತ್ತು ಅದರ ಸಮಗ್ರ ಇತಿಹಾಸವನ್ನು ಪ್ರಸ್ತುತಪಡಿಸಿದರು.

ಹರೀಶ್ ಶೆಟ್ಟಿ ಹೊಸಂಗಡಿಯವರು ಆಸಾಡಿ ಹಬ್ಬ ಮತ್ತು ಕುಂದಾಪುರದ ಇತರ ಹಬ್ಬಗಳನ್ನು ಜನರ ಮನಮುಟ್ಟುವಂತೆ ವಿವರಣೆ ನೀಡುವುದರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಧನ್ಯವಾದಗಳನ್ನು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ತೆರೆಯೆಳೆದರು.

ಕಾರ್ಯಕ್ರಮದ ಸಂಘಟಕರಾದ ಸುರೇಂದ್ರ ಶೆಟ್ಟಿ ಯವರು ಕುಂದ ಬಾಷೆಯು ಕೇವಲ ಒಂದು ದಿನಕಷ್ಟೇ ಸಿಮಿತವಾಗಿರದೆ ನಿರಂತರವಾಗಿ ಬಾಷಾ ಪ್ರೇಮ ಬೆಳೆಯಲಿ, ಯಾವುದೇ ರಾಜಕೀಯ ಧರ್ಮ, ಜಾತಿಯ ಗೋಡೆಯು ಬಾಷೆಗಿಲ್ಲ, ಕುಂದಾಪುರಕ್ಕೆ ಸಂಬಂದಿಸಿದ ಗ್ರಂಥಗಳ ಅಧ್ಯಯನ ಅಗತ್ಯವಿದೆ ಎಂದು ಯುವ ಸಮೂಹಕ್ಕೆ ಕರೆ ಕೊಟ್ಟರು, ಅಲ್ಲದೆ ಭಾಗವಹಿಸಿದ ಪ್ರತಿಯೊಬ್ಬರಿಗೂ ಕರೋನದ ಕಷ್ಟ ಸಂಧರ್ಬದಲ್ಲಿ ಸಕಾರಾತ್ಮಕವಾಗಿರಿ ಎನ್ನುತ್ತಾ ಓಮಾನಿನ ಮತ್ತು ವಿವಿಧ ಗಲ್ಫ್ ರಾಷ್ಟ್ರಗಳಿಂದ ಆನ್ಲೈನ್ ಮೂಲಕ ಕಾರ್ಯಕ್ರಮಕ್ಕೆ ಉತ್ಸುಕರಾಗಿ ಭಾಗವಹಿಸಿದ ಪ್ರತಿಯೊಬ್ಬರನ್ನು ಅಭಿನಂದಿಸಿದರು, ಸಮಾಜ ಸೇವಕ ದಯಾನಂದ ರಾವ್ ಬ್ರಹ್ಮಾವರ ಅವರ ನಿರ್ದೇಶನದಂತೆ ಕಾರ್ಯಕ್ರಮ ಜರುಗಿತು.

ಜೆ.ಪಿ ಶೆಟ್ಟಿ ಗಿಳಿಯಾರು ಮತ್ತು ನಂದೀಶ ಶೆಟ್ಟಿ ಕಟ್ಟಿನಬೈಲ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು, ನಿಹಾರ್ ಅಹಮ್ಮದ್, ಡಾ.ಕಿಶೋರ್, ಡಾ.ರಂಜನ್, ದಯಾನಂದ ಶೆಟ್ಟಿ PDO, ಪ್ರಕಾಶ ನಾಯಕ್, ಜಾನ್ ಪಿಟರ್, ಪ್ರದೀಪ ಶೇರಿಗಾರ್ ಮತ್ತಿತರರು ಭಾಗವಹಿಸಿದರು.

ದುಬೈಯಿಂದ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ನ ಅಧ್ಯಕ್ಷರಾದ ಸಾದನ್ ದಾಸ ಮತ್ತು ಪ್ರದೀಪ್ ಶೆಟ್ಟಿ ದಂಪತಿಗಳು, ಕತಾರ್ ದೇಶದಿಂದ ಉಜ್ವಲ್ ಕುಮಾರ ಆಲೂರು, ಕುವೈತ್ ದೇಶದಿಂದ ಪ್ರವಿಣ್ ಶೆಟ್ಟಿ ಶಾನ್ಕಟ್ಟು, ಕಿರಣ್ ಶೆಟ್ಟಿ ಬೈಕಾಡಿ   ಮತ್ತು ರಾಜೀವ ಶೆಟ್ಟಿ ತಂತ್ರಾಡಿ, ಅಲ್ಲದೆ ಬಹ್ರೇನ್ ದೇಶದಿಂದ ಅಮಿತ್ ಶೆಟ್ಟಿ ಉಳ್ತೂರು, ಹಾಗೂ ಕುಂದಾಪುರದ ಯುವ ಉದ್ಯಮಿ ನವೀನ್ ಶೆಟ್ಟಿ ಶಾನ್ಕಟ್ಟು ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ಹೆಚ್ಚಿಸಿದರು


Spread the love